Advertisement

Thailand Open badminton ಸೆಮಿಯಲ್ಲಿ ಸೋತ ಲಕ್ಷ್ಯ ಸೇನ್‌

01:14 AM Jun 04, 2023 | Team Udayavani |

ಬ್ಯಾಂಕಾಕ್‌: ಥಾಯ್ಲೆಂಡ್‌ ಓಪನ್‌ ಸೂಪರ್‌-500 ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಭಾರತದ ಲಕ್ಷ್ಯ ಸೇನ್‌ ದಿಟ್ಟ ಆಟ ಪ್ರದರ್ಶಿಸಿಯೂ ಸೆಮಿಫೈನಲ್‌ನಲ್ಲಿ ಸೋಲನುಭವಿಸಿದರು.

Advertisement

ಶನಿವಾರ ನಡೆದ ಜಿದ್ದಾಜಿದ್ದಿ ಕಾಳಗದಲ್ಲಿ ಲಕ್ಷé ಸೇನ್‌ ಅವರನ್ನು ಆತಿಥೇಯ ನಾಡಿನ, ವಿಶ್ವದ 5ನೇ ರ್‍ಯಾಂಕಿಂಗ್‌ ಆಟಗಾರ ಕುನವುತ್‌ ವಿತಿದ್‌ಸಣ್‌ 13-21, 21-17, 21-13ರಿಂದ ಮಣಿಸಿದರು. ಇದು ವಿತಿದ್‌ಸಣ್‌ ವಿರುದ್ಧ ಆಡಿದ 8 ಪಂದ್ಯಗಳಲ್ಲಿ ಲಕ್ಷ್ಯ ಸೇನ್‌ ಅನುಭವಿಸಿದ 5ನೇ ಸೋಲು.

ಮೊದಲ ಗೇಮ್‌ನಲ್ಲಿ ಲಕ್ಷ್ಯ ಅತ್ಯುತ್ತಮ ಕೋರ್ಟ್‌ ಕವರೇಜ್‌, ನಿಖರ ಹೊಡೆತಗಳಿಂದ ಜಯ ಸುಲಭವಾಯಿತು.

ಆದರೆ ಮುಂದಿನ ಗೇಮ್‌ನಲ್ಲಿ ವಿತಿದ್‌ಸಣ್‌ ತಿರುಗಿ ಬಿದ್ದರು. ಮೊದಲ ಗೇಮ್‌ನಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಹೋರಾಟ ಸಂಘಟಿಸಿದರು. ತವರಿನ ವೀಕ್ಷಕರ ಅಪಾರ ಬೆಂಬಲವೂ ಸಿಕ್ಕಿತು. ಗೇಮ್‌ ಕೂಡ ಕೈವಶವಾಯಿತು. ನಿರ್ಣಾಯಕ ಗೇಮ್‌ನಲ್ಲಿ ವಿತಿದ್‌ಸಣ್‌ ಇನ್ನಷ್ಟು ಆಕ್ರಮಣಕಾರಿ ಆಟವಾಡಿದರು. ಲಕ್ಷ್ಯ ಸೇನ್‌ ಮೊದಲಿನ ಗೇಮ್‌ ವೇಳೆ ತೋರ್ಪಡಿಸಿದ ಆಟವನ್ನೇ ವಿತಿದ್‌ಸಣ್‌ì ಇಲ್ಲಿ ಪುನರಾವರ್ತಿಸುವ ಮೂಲಕ ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next