Advertisement

ಲಕ್ಷ್ಮೀ ಪುತ್ರನ ನಂಬಿ ಬಂದವರು…

03:51 PM Aug 14, 2022 | Team Udayavani |

ಉಮಾ ರೋಹಿತ್‌ ನಿರ್ಮಿಸುತ್ತಿರುವ “ಲಕ್ಷ್ಮೀ ಪುತ್ರ’ ಚಿತ್ರ ಆರಂಭವಾಗಿದೆ. ರೋಹಿತ್‌ ಅರುಣ್‌ ಈ ಚಿತ್ರದ ನಿರ್ದೇಶಕರು. ಚಾಮರಾಜನಗರ ಜಿಲ್ಲೆಯ ಸುಂದರ ಹಳ್ಳಿಯೊಂದರಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ.

Advertisement

ಚಂದನವನದಲ್ಲಿ ನೃತ್ಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ರೋಹಿತ್‌ ಅರುಣ್‌ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಶ್ರೇಯಸ್‌ ಚಿಂಗಾ ಈ ಚಿತ್ರದ ನಾಯಕ. ಮತ್ತೂಬ್ಬ ನಾಯಕನಾಗಿ ವಿನಯ್‌ ಕುಮಾರ್‌ ಅಭಿನಯಿಸುತ್ತಿದ್ದಾರೆ. ಇವರು ಸಹ ನೃತ್ಯಗಾರರಾಗಿದ್ದಾರೆ. ಶ್ರೇಯಸ್‌ ಚಿಂಗಾ ಮತ್ತು ವಿನಯ್‌ ಕುಮಾರ್‌ ಈ ಚಿತ್ರದಲ್ಲಿ ಶಿವ ಮತ್ತು ಮಹಾದೇವ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.

ಇತಿ ಆಚಾರ್ಯ, ಅಮಿತಾ ರಂಗನಾಥ್‌ ಹಾಗೂ ಭೂಮಿಕಾ ಗೌಡ ಈ ಚಿತ್ರದ ನಾಯಕಿಯರು. ಭೂಮಿಕಾ ಗೌಡ ಅವರಿಗೆ ಇದು ಚೊಚ್ಚಲ ಚಿತ್ರ. ಸಂಜೀವ ರೆಡ್ಡಿ ಸಂಕಲನವಿರುವ ಈ ಚಿತ್ರಕ್ಕೆ ಶ್ಯಾಮ್‌ ಸಾಲ್ವಿನ್‌ ಅವರ ಛಾಯಾಗ್ರಹಣವಿದೆ.

ಶ್ರೀವತ್ಸ ಸಂಗೀತ ನಿರ್ದೇಶನ, ಚೇತನ್‌ ಡಿಸೋಜ ಮತ್ತು ರವಿ ಜಮಖಂಡಿ ಸಾಹಸ ನಿರ್ದೇಶನ ಹಾಗೂ ರೋಹಿತ್‌ ಅರುಣ್‌ ಮತ್ತು ಚಾಮರಾಜ್‌ ಮಾಸ್ಟರ್‌ ಅವರ ನೃತ್ಯ ನಿರ್ದೇಶನ ಚಿತ್ರಕ್ಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next