ಬೆಂಗಳೂರು: ಬೆಳಗಾವಿ ಗಡಿ ಭಾಗ, ಬೆಳಗಾವಿ ನೆಲ ಕರ್ನಾಟಕದ ಒಂದು ಅಂಗ. ಮರಾಠ ಸಮಾಜದ ಎಲ್ಲಾ ನನ್ನ ಬಾಂಧವರು ಕರ್ನಾಟಕದಲ್ಲಿ ಬಹಳ ಖುಷಿಯಾಗಿದ್ದಾರೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಇದನ್ನೂ ಓದಿ:ಹಳ್ಳಿಹಕ್ಕಿ ‘ಸಚಿವ’ ಆಸೆಗೆ ತಣ್ಣೀರೆರಚಿದ ಕೋರ್ಟ್: ಹೈಕೋರ್ಟ್ ತೀರ್ಪು ಎತ್ತಿಹಿಡಿದ ಸುಪ್ರೀಂ
ಮಹಾರಾಷ್ಟ್ರ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಮಹಾರಾಷ್ಟ್ರ ಗಡಿನಾಡಿನಲ್ಲಿ ಕನ್ನಡಿಗರೂ ಇದ್ದಾರೆ. ಇತ್ತೀಚೆಗೆ ಮರಾಠಿಗರು ಸಹ ಕರ್ನಾಟಕದ ಶಾಲೆಗಳಲ್ಲಿ ಕಲಿಯಲು ಇಷ್ಟ ಪಡುತ್ತಿದ್ದಾರೆ ಎಂದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಅಧಿವೇಶನ ನಡೆಸದ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ:ಭಿತ್ತಿಪತ್ರ ಪ್ರದರ್ಶನ
ಯಾವ ಮರಾಠಿಗರು ಸಹ ನಾವು ಮಹಾರಾಷ್ಟ್ರಕ್ಕೆ ಹೋಗುತ್ತೇವೆ ಎಂದು ಯಾವತ್ತು ಹೇಳಿಲ್ಲ ಎಂದ ಅವರು, ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ. ಯಾವುದೇ ಕಾರಣಕ್ಕೂ ಗಡಿ ಜಿಲ್ಲೆ ಮರಾಠಿಗರು ನಿಮ್ಮನ್ನು ಬೆಂಬಲಿಸುವುದಿಲ್ಲ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಗೆ ತಿರುಗೇಟು ನೀಡಿದರು.