ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಪಟ್ಟಣಕ್ಕೆ 12-15 ದಿನಗಳಿಗೊಮ್ಮೆ ನೀರು ಬರುತ್ತಿದ್ದು, ರೈತಾಪಿ ವರ್ಗವೇ ಹೆಚ್ಚಿರುವ ವಾರ್ಡ್‌ಗಳಲ್ಲಂತೂ ಜಾನುವಾರುಗಳ ರಕ್ಷಣೆಗಾಗಿ ಅನ್ನದಾತರು ನಿತ್ಯ ಪರದಾಡುವಂತಾಗಿದೆ. 15 ದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸಿ 2-3 ದಿನಕ್ಕೊಮ್ಮೆ ನೀರು ಕೊಡದಿದ್ದರೆ ಜನ-ಜಾನುವಾರು-ಎತ್ತು-ಚಕ್ಕಡಿ ಮತ್ತು ಖಾಲಿ ಕೊಡಗಳೊಂದಿಗೆ ಪುರಸಭೆ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಎಚ್ಚರಿಕೆ ನೀಡಿದರು.
ಮಂಗಳವಾರ ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣಕ್ಕೆ ತುಂಗಭದ್ರಾ
ನದಿಯಿಂದ ಸರಬರಾಜಾಗುವ ಪೈಪ್‌ಲೈನ್ ಸಂಪೂರ್ಣ ಹಾಳಾಗಿ ವರ್ಷಗಳೇ ಕಳೆದಿವೆ. ಪಟ್ಟಣದಲ್ಲಿನ 120 ಬೋರ್‌ವೆಲ್‌ಗಳಲ್ಲಿ 75 ಬೋರ್ ವೆಲ್ ಸುಸ್ಥಿತಿಯಲ್ಲಿವೆ. ಅಲ್ಲದೇ, ಎಲ್‌ಎನ್‌ಟಿ ಯೋಜನೆಯ ನೀರನ್ನು ಬಳಕೆ ಮಾಡಿಕೊಂಡಿಲ್ಲ. ಈ ಎಲ್ಲ ನಿರ್ಲಕ್ಷ್ಯ ದಿಂದ ನೀರಿನ ಸಮಸ್ಯೆ ಉಂಟಾಗಿದೆ ಎಂದರು.
ಪಟ್ಟಣದಲ್ಲಿ ಕಳೆದ 10 ವರ್ಷದಿಂದ ಆಶ್ರಯ ಫಲಾನುಭವಿಗಳ ಆಯ್ಕೆ ಕಗ್ಗಂಟಾಗಿದೆ. ತಮ್ಮ ಅ ಧಿಕಾರಾವಧಿ ಯಲ್ಲಿ ಲಕ್ಷೆ¾àಶ್ವರದಲ್ಲಿ 64, ಶಿರಹಟ್ಟಿ-10 ಮತ್ತು ಮುಂಡರಗಿಯಲ್ಲಿ 20 ಎಕರೆ ಆಶ್ರಯ ನಿವೇಶನ ಜಾಲಿಕಂಟೆ ಬೆಳೆದು ಹಾಳಾಗುತ್ತಿದೆ. ಬಡವರ ಹೊಸ ಮನೆಯ ಕನಸು ನುಚ್ಚು ನೂರಾಗುತ್ತಿದೆ. ಗದಗ-ಲಕ್ಷ್ಮೇಶ್ವರ ಸೇರಿ ತಾಲೂಕಿನ ರಸ್ತೆಗಳು, ಪಟ್ಟಣದ ನಗರೋತ್ಥಾನ ಯೋಜನೆಯ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ ಎಂದರು.
ಹೊಸ ವಸತಿ ಶಾಲೆ, ಸರ್ಕಾರಿ ಕಚೇರಿಗಳಲ್ಲಿ ಪೂರ್ಣ ಪ್ರಮಾಣದ ಸಿಬ್ಬಂದಿ ಸೇರಿ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವ ಬಗ್ಗೆ ಶಾಸಕರು ಮತ್ತು ಸ್ಥಳೀಯ ಪುರಸಭೆಯವರು ಕಾಳಜಿಪೂರ್ವಕ ಕೆಲಸ ಮಾಡಬೇಕು. ಜನ ಕೊಟ್ಟ ತೀರ್ಪನ್ನು ಸ್ವಾಗತಿಸುತ್ತೇವೆ. ಕ್ಷೇತ್ರದ ಜನರ ನಿರೀಕ್ಷೆಯಂತೆ ಕೆಲಸ ಮಾಡಬೇಕು ಎಂದರು.
Related Articles
140 ಕೋಟಿ ರೂ. ಅನುದಾನದ ಕೆರೆಗೆ ನೀರು ತುಂಬಿಸುವ ಯೋಜನೆ ನನೆಗುದಿಗೆ ಬಿದ್ದಿದೆ. ಜಾಲವಾಡಗಿ, ಇಟಗಿ ಯೋಜನೆಗಳು
ಸಾಕಾಗೊಳ್ಳುವ ಹಂತದಲ್ಲಿದ್ದು, ಪದೇ ಪದೆ ಇದನ್ನೇ ಹೇಳುವುದು ಬಿಟ್ಟು ಕೃಷ್ಣ ಬಿ ಸ್ಕೀಂ ಯೋಜನೆಯಲ್ಲಿ ಕ್ಷೇತ್ರದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಬೇಕು. ಕ್ಷೇತ್ರದ ಜನತೆಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸದಾ ಜನಪರ ಹೋರಾಟ ಮಾಡುತ್ತೇವೆ ಎಂದರು.
ಪುರಸಭೆ ಸದಸ್ಯ ಮಹೇಶ ಹೊಗೆಸೊಪ್ಪಿನ ಮಾತನಾಡಿ, ಪುರಸಭೆಯಿಂದ ಪಟ್ಟಣದಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳು, ಯೋಜನೆಗಳು, ಆಶ್ರಯ ಫಲಾನುಭವಿಗಳ ಆಯ್ಕೆ, ಕೈಗೊಳ್ಳುವ ತೀರ್ಮಾನಗಳ ಬಗ್ಗೆ ಸದಸ್ಯರಿಗೆ ಮಾಹಿತಿ ಇರುವುದಿಲ್ಲ. ಎಲ್ಲೋ
ಕುಳಿತು ಕಾಣದ ಕೈಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ಪುರಸಭೆ ಸದಸ್ಯರು ತಲೆದೂಗುವ ಕೆಟ್ಟ ಸಂಪ್ರದಾಯ ಪಟ್ಟಣದಲ್ಲಿದೆ. ಸಂಸದರು ಕ್ಷೇತ್ರದತ್ತ ಮುಖ ಮಾಡಿಲ್ಲ. ಶಾಸಕರಿಗೆ ಕೆಲಸ ಮಾಡಲು ಬಿಟ್ಟಿಲ್ಲ. ಇನ್ನು ಮುಂದೆ ಇದರ ವಿರುದ್ಧ ಧನಿ ಎತ್ತುವ ಮೂಲಕ ರಾಮಕೃಷ್ಣ ದೊಡ್ಡಮನಿ ಅವರ ಸ್ವಾಭಿಮಾನಿ ಬಣದ ಹೋರಾಟಕ್ಕೆ ಕೈ ಜೋಡಿಸುತ್ತೇವೆ ಎಂದರು.
ಈ ವೇಳೆ ಪುರಸಭೆ ಮಾಜಿ ಅಧ್ಯಕ್ಷ ವಿ.ಜಿ ಪಡಗೇರಿ, ಪಿ.ಬಿ. ಖರಾಟೆ, ಕರವೇ ಜಿಲ್ಲಾಧ್ಯಕ್ಷ ಶರಣು ಗೋಡಿ, ಪಂಚಮಸಾಲಿ ತಾಲೂಕು ಅಧ್ಯಕ್ಷ ಮಂಜುನಾಥ ಮಾಗಡಿ, ಮಹಾದೇವಪ್ಪ ಅಂದಲಗಿ, ನಾಗರಾಜ ಚಿಂಚಲಿ, ಅಬ್ದುಲ್ ರಿತ್ತಿ, ಶಿವಾನಂದ ಲಿಂಗಶೆಟ್ಟಿ, ನಿಂಗಪ್ಪ ಗದ್ದಿ, ಸಿರಾಜ ಡಾಲಾಯತ್ ಇತರರಿದ್ದರು.