Advertisement

ತುಮಕೂರನಲ್ಲಿ ಮೋದಿ ಭಾಷಣಕ್ಕೆ ವಿಪಕ್ಷಗಳ ಟೀಕೆಗೆ ಮಹತ್ವ ಬೇಡ: ಸವದಿ

11:02 AM Jan 05, 2020 | keerthan |

ವಿಜಯಪುರ: ತುಮಕೂರನಲ್ಲಿ ಮೋದಿ ಕಾರ್ಯಕ್ರಮದ ವಿರುದ್ಧ ವಿರೋಧ ಪಕ್ಷಗಳ ಟೀಕೆಗೆ ಹೆಚ್ಚಿನ ಮಹತ್ವ ನೀಡುವುದು ಬೇಡ. ವಿರೋಧ ಪಕ್ಷದ ನಾಯರು ಆಡಳಿತ ಪಕ್ಷವನ್ನು ಹೊಗಳಲು ಸಾಧ್ಯವೇ ಎಂದು ಡಿಸಿಎಂ ಲಕ್ಷ್ಮಣ ಸವದಿ ಪ್ರಶ್ನಿಸಿದರು.

Advertisement

ಶನಿವಾರ ನಗರದ ಹಿಟ್ನಳ್ಳಿ ಕೃಷಿ ಕಾಲೇಜಿನಲ್ಲಿ ನಡೆದ ಕೃಷಿ ಮೇಳದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ‌ ಪತ್ರಕರ್ತರೊಂದಿಗೆ ಮಾತನಾಡಿದರು.

ರಾಜಕೀಯಕ್ಕಾಗಿ ವಿಪಕ್ಷಗಳ ನಾಯಕರು ಅನೇಕ ಟೀಕೆ ಟಿಪ್ಪಣೆಗಳನ್ನು ಮಾಡ್ತಾರೆ, ಅವುಗಳ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಆದರೆ ಅವರು ಆತ್ಮಾವಲೋಕನ ಮಾತಾಡಬೇಕಿತ್ತು. ದೇಶದ ಸಂವಿಧಾನದ ಬಗ್ಗೆ ಪ್ರಧಾನಿಯಾಗಿ ಮಕ್ಕಳಿಗೆ ಜಾಗೃತಿ ಮೂಡಿಸಿದ್ದರಲ್ಲಿ ತಪ್ಪೇನಿದೆ. ಇದರೊಂದಿಗೆ ಸಿದ್ದರಾಮಯ್ಯ ಅವರಿಗೆ ತಿಳುವಳಿಕೆ  ಕೊಟ್ಟಿದ್ದೇವೆ. ದೇಶದ ಸಂವಿಧಾನದ ಬಗ್ಗೆ ಮನವರಿಕೆ ಮಾಡಿಕೊಡುವ ಕರ್ತವ್ಯ ಪ್ರಧಾನಿ ಮಾಡಿದ್ದಾರೆ ಎಂದರು.

ಡಿಸಿಎಂ ಸ್ಥಾನಗಳ ಚರ್ಚೆಯಾಗುತ್ತಿರುವ ಕುರಿತು ನಾನು ಹಾದಿಬೀದಿಯಲ್ಲಿ ಮಾತಾಡೋದಿಲ್ಲ. ಪಕ್ಷದ ಚೌಕಟ್ಟಿನಲ್ಲಿ ಅದು ಚರ್ಚೆ ಆಗುತ್ತೆ, ಪಕ್ಷದ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದರು.

ರಾಜ್ಯದಲ್ಲಿ ಹಾಲಿ ಮೂವರು ಡಿಸಿಎಂ ಇದ್ದರೂ ನಮ್ಮಲ್ಲಿ ಯಾರೂ ವಿಶೇಷ ಭದ್ರತೆ ಪಡೆದಿಲ್ಲ, ಝೀರೋ ಟ್ರಾಫಿಕ್ ಪಡೆದಿಲ್ಲ. ಸಚಿವರಿಗೆ ಇರುವ ಸಾಮಾನ್ಯ ಭದ್ರತೆ ಮಾತ್ರ ಪಡೆದಿದ್ದೇವೆ ಎಂದರು.

Advertisement

ಹಿಂದಿನ ಸರ್ಕಾರದಲ್ಲಿ ಜಿ. ಪರಮೇಶ್ವರ ಝಿರೋ ಟ್ರಾಫಿಕ್ ಪಡೆಯುತ್ತಿದ್ದ ಕಾರಣ ಸಾರ್ವಜನಿಕರಿಗೆ ತೊಂದರೆ ಆಗಿತ್ತು. ಹೀಗಾಗಿ ನಾವು ಝಿರೋ ಟ್ರಾಫಿಕ್ ಸೌಲಭ್ಯ ಪಡೆದಿಲ್ಲ ಎಂದರು.

ಸಚಿವ ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿಗಳು ಹಾಗೂ ಪಕ್ಷದ ಹೈಕಮಾಂಡ ನಿರ್ಧರಿಸುತ್ತದೆ. ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅಥಣಿ, ಕಾಗವಾಡ ಕ್ಷೇತ್ರಗಳಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next