ಅಥಣಿ: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಭರ್ಜರಿ ಗೆಲುವವನ್ನು ಸಾಧಿಸುವ ಮೂಲಕ ಮತ ಏಣಿಕೆ ಆದನಂತರ ಬೆಳಗಾವಿಯಿಂದ ಅಥಣಿಗೆ ಆಗಮಿಸಿದ ಲಕ್ಷ್ಮಣ ಸವದಿಯವರನ್ನು ಅಥಣಿ ಕಾಂಗ್ರೆಸ್ ಕಾರ್ಯಕರ್ತರು ಅದ್ದುರಿಯಾಗಿ ಸ್ವಾಗತಿಸಿದರು.
ಶಿವಾಜಿ ವೃತ್ತದಿಂದ ಲಕ್ಷ್ಮಣ ಸವದಿಯವರನ್ನು ಅದ್ದುರಿಯಾಗಿ ಬರಮಾಡಿಕೊಂಡ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹರ್ಷೋದ್ಘಾರದ ನಡುವೆ ಸವದಿಯವರನ್ನು ತೆರೆದ ವಾಹನದಲ್ಲಿ ಕರೆ ತಂದು ಬಸವೇಶ್ವರ ವೃತ್ತಕ್ಕೆ ಬಂದು ಅಲ್ಲಿಂದ ಹಲ್ಯಾಳ ವೃತ್ತದಿಂದ ಅಂಬೇಡ್ಕರ ವೃತ್ತಕ್ಕೆ ಬಂದು ಡಾ.ಬಾಬಾಸಾಹೇಬ ಅಂಬೇಡ್ಕರವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಅಥಣಿ ಪಟ್ಟಣದ ಪ್ರಮುಖ ಬಿದಿಗಳ ಮೂಲಕ ಸಾಗಿ ತರೆದ ವಾನದಲ್ಲಿ ಮೇರವಣಿಗೆ ನಡೆಸಲಾಯಿತು. ತೆರೆದ ವಾಹನದಲ್ಲಿ ತೆರಳಿದ ಲಕ್ಷ್ಮಣ ಸವದಿ ಮತದಾರರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.
ಈ ಬಾರಿ ಚುನಾವಣೆ ನನ್ನ ಚುನಾವಣೆಯಾಗಿರದೆ ಅಥಣಿ ಜನತೆಯ ಸ್ವಾಭಿಮಾನದ ಚುನಾವಣೆಯಾಗಿತ್ತು ಈ ಗೆಲವು ಅಥಣಿ ಮತಕ್ಷೇತ್ರದ ಮತದಾರರ ಗೆಲವು ಆಗಿದೆ. ನನ್ನ ತಾಕತ್ತಿನ ಬಗ್ಗೆ ಪ್ರಶ್ನಿಸಿದವರಿಗೆ ಅಥಣಿ ಜನತೆ ಸರಿಯಾಗಿ ಉತ್ತರವನ್ನು ನೀಡಿದ್ದಾರೆ. ನನಗೆ 76 ಸಾವಿರಕ್ಕಿಂತ ಅಧಿಕ ಮತಗಳನ್ನು ನೀಡಿದ ಮತದಾರರು ಹಾಗೂ ಅಭಿಮಾನಿಗಳು ಕಾಂಗ್ರೆಸ್ ಕಾರ್ಯಕರ್ತರು, ಪಕ್ಷದ ಅಧ್ಯಕ್ಷರು, ಮುಖಂಡರು ಹಾಗೂ ಪದಾಧಿಕಾರಿಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದರು.
ಈ ವೇಳೆ ಅಥಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದಾರ್ಥ ಸಿಂಗೆ, ಮುಖಂಡರಾದ ಗಜಾನನ ಮಂಗಸೂಳಿ, ಸದಾಶಿವ ಬೂಟಾಳಿ ಸೇರಿದಂತೆ ಅನೇಕರು ಇದ್ದರು.