Advertisement

Ayodhya: ಅಯೋಧ್ಯೆಗೆ “ಲಕ್ಷಣ ಪಥ”

10:43 PM Nov 15, 2023 | Pranav MS |

ಲಕ್ನೋ: ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಬಿರುಸುಗೊಂಡು ರಾಮಲಲ್ಲಾನ ಪ್ರತಿಷ್ಠಾಪನೆಗೆ ರಾಜ್ಯ ಸಜ್ಜುಗೊಂಡಿರುವ ನಡುವೆಯೇ ಅಯೋಧ್ಯೆಗೆ ಸಮರ್ಪಕವಾದ ರಸ್ತೆ ಮಾರ್ಗ ಸೃಷ್ಟಿಸುವ ನಿಟ್ಟಿನಲ್ಲಿ “ಲಕ್ಷ್ಮಣ ಪಥ’ವನ್ನು ಅಭಿವೃದ್ಧಿ ಪಡಿಸಲು ಉತ್ತರಪ್ರದೇಶ ಸರ್ಕಾರ ಚಿಂತನೆ ನಡೆಸಿದೆ.

Advertisement

ಅಯೋಧ್ಯೆಗೆ ನಾಲ್ಕು ಪಥದ ರಸ್ತೆಮಾರ್ಗಗಳನ್ನು ಕಲ್ಪಿಸುವ ಯೋಜನೆಯ ಭಾಗವಾಗಿಯೇ ಲಕ್ಷ್ಮಣ ಪಥದ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಅನುಮತಿ ನೀಡಿದ ಕೂಡಲೇ ಕಾಮಗಾರಿ ಆರಂಭ ಗೊಳ್ಳಲಿದೆ. ಈಗಾಗಲೇ ಜನ್ಮಭೂಮಿ ಪಥ, ಭಕ್ತಿ ಪಥ ಮತ್ತು ಧರ್ಮಪಥಗಳ ಕಾಮಗಾರಿ ಪೂರ್ಣಗೊಂಡಿದ್ದು, ನಯಾಘಾಟ್‌ ಮತ್ತು ಸಹದತ್‌ಗಂಜ್‌ ನಡುವಿನ 13 ಕಿ.ಮೀ.ಉದ್ದದ ರಾಮಪಥ ನಿರ್ಮಾಣವೂ ಬಿರುಸಾಗಿ ನಡೆಯುತ್ತಿದೆ.

ಈ ನಡುವೆ ಪರ್ಯಾಯ ಮಾರ್ಗವಾಗಿ ಗುಪ್ತಘಾಟ್‌ನಿಂದ ರಾಜ್‌ಘಾಟ್‌ವರೆಗೆ 12 ಕಿ.ಮೀ. ವ್ಯಾಪ್ತಿಯಲ್ಲಿ ಶ್ರೀರಾಮನ ತಮ್ಮ ಲಕ್ಷ್ಮಣನ ಹೆಸರಿನಲ್ಲಿ ಪಥ ಅಭಿವೃದ್ಧಿಗೆ ಚಿಂತನೆ ನಡೆದಿದೆ ಎಂದು ಜಿಲ್ಲಾಧಿಕಾರಿ ನಿತೀಶ್‌ ಕುಮಾರ್‌ ತಿಳಿಸಿದ್ದಾರೆ. 18 ಅಡಿ ಅಗಲದ ಈ ಮಾರ್ಗದಲ್ಲಿ 7 ಅಡಿ ಅಗಲದ ಪಾದಚಾರಿ ಮಾರ್ಗವಿದ್ದು ಯೋಜನೆಗೆ ಸರಿಸುಮಾರು 200 ಕೋಟಿ ರೂ. ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ.

ಅಯೋಧ್ಯೆಗೆ ಮುಂಬೈನಿಂದ ವಿಶೇಷ ರೈಲು
ರಾಮಮಂದಿರ ನಿರ್ಮಾಣದ ಬಳಿಕ ಮಂದಿರವನ್ನು ನೋಡಬಯಸುವ ಭಕ್ತಾದಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂಬೈನಿಂದ ಅಯೋಧ್ಯೆಗೆ ವಿಶೇಷ ರೈಲಿನ ಕಾರ್ಯಾಚರಣೆ ಆರಂಭವಾಗಲಿದೆ. 2024ರ ಜನವರಿ 24ರ ಬಳಿಕ ದಾದರ್‌ನಿಂದ ಅಯೋಧ್ಯೆಗೆ ರೈಲುಸೇವೆ ದೊರಕಲಿದೆ ಎಂದು ಬಿಜೆಪಿ ಮುಂಬೈ ಘಟಕದ ಅಧ್ಯಕ್ಷ ಆಶಿಶ್‌ ಶೆಲಾರ್‌ ಮಾಹಿತಿ ನೀಡಿದ್ದಾರೆ. ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ಸಮಾರಂಭ ನಡೆಯಲಿದ್ದು, ಆ ಬಳಿಕ ದೇಗುಲ ದರ್ಶನಕ್ಕೆ ಯೋಜನೆ ಸಹಕಾರಿಯಾಗಲಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next