ಬ್ಯಾಂಕಾಕ್: ಭಾರತದ ಟಾಪ್ ಶಟ್ಲರ್ ಲಕ್ಷ್ಯ ಸೇನ್ “ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್’ ಪಂದ್ಯಾವಳಿಯ ಸೆಮಿಫೈನಲ್‌ಗೆ ಮುನ್ನಡೆದಿದ್ದಾರೆ. ಆದರೆ ಕ್ವಾರ್ಟರ್ ಫೈನಲ್‌ನಲ್ಲಿ ಸೋಲನು ಭವಿಸಿದ ಕಿರಣ್ ಜಾರ್ಜ್ ಕೂಟದಿಂದ ಹೊರಬಿದ್ದರು.
ಲಕ್ಷ್ಯ ಸೇನ್ ಮಲೇಷ್ಯಾದ ಲಿಯೋಂಗ್ ಜುನ್ ಹಾವೊ ಅವರನ್ನು 21-19, 21-11 ನೇರ ಗೇಮ್‌ಗಳಲ್ಲಿ ಮಣಿಸಿದರು. ಮೊದಲ ಗೇಮ್ ತೀವ್ರ ಪೈಪೋಟಿಯಿಂದ ಕೂಡಿತ್ತು. ಜುನ್ ಹಾವೊ 11-10ರಿಂದ 16-10ರ ಭಾರೀ ಮುನ್ನಡೆ ಸಾಧಿಸಿದ್ದರು. ಆದರೆ ಈ ಹಂತದಲ್ಲಿ ತಿರುಗಿ ಬಿದ್ದ ಲಕ್ಷé ಸೇನ್ ಸತತ 6 ಅಂಕ ಗಳಿಸಿದರು. ಅಂತಿಮವಾಗಿ 21-19ರಿಂದ ರೋಚಕವಾಗಿ ಮೊದಲ ಗೇಮ್ ವಶಪಡಿಸಿಕೊಂಡರು.
ದ್ವಿತೀಯ ಗೇಮ್ ವೇಳೆ ಜುನ್ ಹಾವೊ ಗಾಯಾಳಾದ ಕಾರಣ ರೇಸ್‌ನಲ್ಲಿ ಹಿಂದುಳಿಯಬೇಕಾಯಿತು. ಲಕ್ಷé ಸೇನ್ ಸುಲಭದಲ್ಲಿ ಮುನ್ನಡೆ ಸಾಧಿಸಿ ದರು. 41 ನಿಮಿಷಗಳಲ್ಲಿ ಈ ಪಂದ್ಯ ಮುಗಿಯಿತು.
ಚೀನದ 5ನೇ ಶ್ರೇಯಾಂಕದ ಗುವಾಂಗ್ ಜು ಲು, ಥಾಯ್ಲೆಂಡ್‌ನ ದ್ವಿತೀಯ ಶ್ರೇಯಾಂಕದ ಕುನ್ವಲುತ್ ವಿತಿದ್‌ಸಣ್ì ನಡುವಿನ ವಿಜೇತರನ್ನು ಲಕ್ಷ್ಯ ಸೇನ್ ಎದುರಿಸಲಿದ್ದಾರೆ.
ಇದಕ್ಕೂ ಮುನ್ನ ಕಿರಣ್ ಜಾರ್ಜ್ ಅವರ ಅಮೋಘ ಓಟ ಕ್ವಾರ್ಟರ್ ಫೈನಲ್‌ನಲ್ಲಿ ಕೊನೆಗೊಂಡಿತ್ತು.
Related Articles
ಫ್ರಾನ್ಸ್‌ನ ಟೋಮ ಜೂನಿಯರ್ ಪೊಪೋವ್ ವಿರುದ್ಧ 16-21, 17-21ರಿಂದ ಪರಾಭವಗೊಂಡರು.
ಭಾರತದ ಭರವಸೆಯ ಆಟಗಾರ ರಾಗಿದ್ದ ಸೈನಾ ನೆಹ್ವಾಲ್, ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಕೂಡ ಸೋಲನುಭವಿಸಿದ್ದರಿಂದ ಎಲ್ಲರ ಲಕ್ಷ್ಯ ವೀಗ ಲಕ್ಷ್ಯ ಸೇನ್ ಮೇಲಿದೆ.