Advertisement

ಧರ್ಮಸ್ಥಳ ಲಕ್ಷದೀಪೋತ್ಸವ ಆರಂಭ : ಶ್ರೀ ಮಂಜುನಾಥಸ್ವಾಮಿಯ ಹೊಸಕಟ್ಟೆ ಉತ್ಸವ

04:21 PM Nov 21, 2022 | Team Udayavani |

ಬೆಳ್ತಂಗಡಿ : ನಾಡಿನ ಭಕ್ತರೆಲ್ಲರನ್ನು ತನ್ನೆಡೆಗೆ ಸೆಳೆಯುವ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದ ಮಂಗಳಪರ್ವದಲ್ಲಿ ನೆರವೇರುವ ಲಕ್ಷ ದೀಪೋತ್ಸವದ ಮೊದಲ ದಿನ ರವಿವಾರ ರಾತ್ರಿ ಶ್ರೀ ಮಂಜುನಾಥಸ್ವಾಮಿಯ ಹೊಸಕಟ್ಟೆ ಉತ್ಸವವು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ನೆರವೇರಿತು.

Advertisement

ಶ್ರೀ ಮಂಜುನಾಥ ಸ್ವಾಮಿಗೆ ಗುಡಿಯಲ್ಲಿ ಪೂಜೆ, ನೈವೇದ್ಯ ಸೇರಿದಂತೆ ವಿವಿಧ ಸೇವೆ ನಡೆದು ಪಲ್ಲಕ್ಕಿಯನ್ನು ಹೊತ್ತು 16 ಸುತ್ತು ಬಂದ ಬಳಿಕ ಪಲ್ಲಕ್ಕಿಯಲ್ಲಿ ಸ್ವಾಮಿಯ ಮೂರ್ತಿಯನ್ನಿರಿಸಿ ಆರತಿಬೆಳಗಿ ಮೆರವಣಿಗೆಯೊಂದಿಗೆ ವಸಂತ ಮಹಲ್‌ಗೆ ಪಲ್ಲಕ್ಕಿ ಸುತ್ತು, ಚೆಂಡೆ ಸುತ್ತು, ನಾದಸ್ವರ ಸುತ್ತು, ಸಂಗೀತ ಸುತ್ತು, ಕೊಳಲು ಸುತ್ತು, ಶಂಖ ಸುತ್ತು, ಸರ್ವ ವಾದ್ಯ ಸಹಿತ ಒಟ್ಟು 16 ಸುತ್ತುಗಳಲ್ಲಿ ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ವಸಂತ ಮಹಲ್‌ನ ಹೊಸಕಟ್ಟೆಗೆ ಕೊಂಡೊಯ್ಯಲಾಯಿತು. ಅಲ್ಲಿ ದೇವರಿಗೆ ಹೊಸಕಟ್ಟೆ ಉತ್ಸವದ ಉತ್ಸವದ ಪೂಜಾ ವಿಧಿ ವಿಧಾನಗಳು ನೆರವೇರಿದವು. ಬೆಳ್ಳಿರಥದೊಂದಿಗೆ ಹೊಸಕಟ್ಟೆ ಉತ್ಸವ ಪೂರ್ಣಗೊಂಡಿತು.

ದೇವಸ್ಥಾನದಿಂದ ವಸಂತ ಮಹಲ್‌ನ ವರೆಗೆ ಉತ್ಸವದ ಸಂದಭ‌ìದಲ್ಲಿ ಭಕ್ತರು ತಮ್ಮ ಇಷ್ಟಾರ್ಥ ನೆರವೇರಿಕೆಗಾಗಿ ಹಣತೆ ಹಚ್ಚಿದರು. ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಧರ್ಮಸ್ಥಳದ ಡಿ. ಹಷೇìಂದ್ರ ಕುಮಾರ್‌ ಉಪಸ್ಥಿತರಿದ್ದರು.

ರವಿವಾರ ಸಂಜೆ ವಸ್ತುಪ್ರದರ್ಶನ ಮಂಟಪದಲ್ಲಿ ಸಂಗೀತ ಕಾರ್ಯಕ್ರಮ, ನೃತ್ಯರೂಪಕ, ರಸಮಂಜರಿ ನಡೆಯಿತು. ರಾತ್ರಿ ಶ್ರೀ ಮಂಜುನಾಥ ಸ್ವಾಮಿಯ ಕರೆಕಟ್ಟೆ ಉತ್ಸವ ನೆರವೇರಿತು.

ಇಂದಿನ ಕಾರ್ಯಕ್ರಮ
ಲಕ್ಷ ದೀಪೋತ್ಸವದ ಮೂರನೇ ದಿನ ಸೋಮವಾರ ರಾತ್ರಿ ಶ್ರೀ ಮಂಜುನಾಥ ಸ್ವಾಮಿಯ ಲಲಿತೋದ್ಯಾನ ಉತ್ಸವ ನಡೆಯಲಿದೆ. ಅಮೃತವರ್ಷಿಣಿ ಸಭಾಭವನದಲ್ಲಿ ಸಂಜೆ ಲಲಿತಕಲಾಗೋಷ್ಠಿ, ನಾಗಸ್ವರ ವಾದನ, ಭಾವ-ಯೋಗ-ಗಾನ-ನೃತ್ಯ ಪ್ರದರ್ಶನ, ರಾತ್ರಿ ಗಂಟೆ 8.30ರಿಂದ ಹಾಸನದ ನಾಟ್ಯಕಲಾನಿವಾಸ್‌ ವಿದ್ವಾನ್‌ ಉನ್ನತ್‌ ಮತ್ತು ತಂಡದಿಂದ ಶ್ರೀ ಸ್ವಾತಿ ತಿರುನಾಳರ ಭಾವಯಾಮಿ ರಘುರಾಮಮ್‌ ರಾಮಾಯಣ ಪ್ರಸ್ತುತಿ ಪ್ರದರ್ಶನಗೊಳ್ಳಲಿದೆ. ವಸ್ತು ಪ್ರದರ್ಶನ ಮಂಟಪದಲ್ಲಿ ಸಂಜೆ 6ರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಭರತನಾಟ್ಯ ಪ್ರದರ್ಶನಗೊಳ್ಳಲಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next