ಚಿಕ್ಕೋಡಿ: ಕಣ್ಣು ಹಾಯಿಸಿದಷ್ಟು ಜನ ಜಂಗುಳಿ, ಎಲ್ಲಿ ನೋಡಿದರಲ್ಲಿ ವಾಹನಗಳ ಸಾಲು, ಕರ್ನಾಟಕ-ಮಹಾರಾಷ್ಟ್ರ ಬಾಂಧವ್ಯದ ಜೊತೆಗೆಯೇ ಇಡೀ ಭಾರತದ ಸಂತರು, ತಜ್ಞರು ಸಮಾಗಮದಲ್ಲಿ ಮಹಿಳೆಯರದ್ದೇ ಸಿಂಹಪಾಲು. ಕರ್ನಾಟಕ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆಯ ಕನೇರಿ ಅದೃಶ್ಯ ಕಾಡಸಿದ್ದೇಶ್ವರ ಮಠದಲ್ಲಿ ಹಮ್ಮಿಕೊಂಡಿರುವ ಬೃಹತ್ ಪಂಚಮಹಾಭೂತ ಲೋಕೋತ್ಸವದಲ್ಲಿ ಶುಕ್ರವಾರ ನಡೆದ ಮಹಿಳಾ ಲೋಕೋತ್ಸವದಲ್ಲಿ ಕಂಡು ಬಂದ ಚಿತ್ರಣವಿದು.
Advertisement
ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರದ ಲಕ್ಷಾಂತರ ಮಹಿಳೆಯರು ಕನೇರಿ ಮಠದತ್ತ ಆಗಮಿಸಿ ಲೋಕೋತ್ಸವಕ್ಕೆ ಸಾಕ್ಷಿಯಾಗುತ್ತಿದ್ದಾರೆ. ಇಡೀ ಕನೇರಿ ಮಠದ ಸುತ್ತಮುತ್ತ ಸುಮಾರು 600 ಎಕರೆ ಪ್ರದೇಶದಲ್ಲಿ ಭೂಮಿ, ನೀರು, ವಾಯು, ಅಗ್ನಿ, ಆಕಾಶದ ಚಿತ್ರಣ ಅನಾವರಣಗೊಂಡಿದೆ. ಐದು ಪಂಚಮಹಾಭೂತ ವೀಕ್ಷಣೆಗೆ ಜನ ಮುಗಿಬಿದ್ದಿದ್ದಾರೆ. ಶುಕ್ರವಾರ ಒಂದೇ ದಿನ ಅಂದಾಜು ನಾಲ್ಕೈದು ಲಕ್ಷದಷ್ಟು ಜನ ಸೇರಿದ್ದಾರೆ. ದಿನದಿಂದ ದಿನಕ್ಕೆ ಲೋಕೋತ್ಸವ ನೋಡಲು ಜನರ ಸಂಖ್ಯೆ ಹೆಚ್ಚುತ್ತಿದೆ.
Related Articles
ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕನೇರಿ
Advertisement
ಕನೇರಿ ಕಾಡಸಿದ್ದೇಶ್ವರ ಮಠದಲ್ಲಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಮ್ಮ ಇಡೀ ಪೃಥ್ವಿ, ದೇಹ ಪಂಚಮಹಾಭೂತದಿಂದ ನಿರ್ಮಾಣವಾಗಿದ್ದು, ಐದು ತತ್ವಗಳಿಂದ ಕೂಡಿದ ಈ ಪ್ರಕೃತಿ ಉಳಿಸಿಕೊಂಡು ಹೋಗುವುದು ಮುಖ್ಯ. 600 ಎಕರೆ ಪ್ರದೇಶದಲ್ಲಿ ಐದು ತತ್ವಗಳ ಪ್ರದರ್ಶನ ನಡೆಯುತ್ತಿದೆ. ದಿನದಿಂದ ದಿನಕ್ಕೆ 5 ಲಕ್ಷಕ್ಕಿಂತ ಹೆಚ್ಚಿನ ಜನ ವೀಕ್ಷಣೆ ಮಾಡುತ್ತಿದ್ದಾರೆ. ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರ ಕೊಡಬೇಕೆನ್ನುವುದು ಇದರ ಉದ್ದೇಶ. ಈ ಪಂಚಮಹಾಭೂತ ಲೋಕೋತ್ಸವ ಸುವರ್ಣಾಕ್ಷರದಲ್ಲಿ ಬರೆದಿಡುವ ಕಾರ್ಯಕ್ರಮವಾಗಿದೆ.ಶಶಿಕಲಾ ಜೊಲ್ಲೆ, ಸಚಿವೆ ಯಕ್ಸಂಬಾ ಜೊಲ್ಲೆ ಗ್ರುಪ್ ಸೇವೆ: ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಜೊಲ್ಲೆ ಗ್ರುಪ್‌ನ ಸುಮಾರು 400 ಸಿಬ್ಬಂದಿ ಪಂಚಮಹಾಭೂತ ಲೋಕೋತ್ಸವದಲ್ಲಿ ಸ್ವಯಂಸೇವಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಡೀ ಲೋಕೋತ್ಸವದ ಭೋಜನ ವ್ಯವಸ್ಥೆಯಲ್ಲಿ ಜೊಲ್ಲೆ ಗ್ರುಪ್ ಸಿಬ್ಬಂದಿ ಮುಂಚೂಣಿಯಲ್ಲಿ ನಿಂತು ಕೆಲಸ ನಿರ್ವಹಿಸುತ್ತಿದ್ದಾರೆ.