ಹೊಸದಿಲ್ಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಯುವ ಮತದಾರನ್ನು ಸೆಳೆಯಲು ವಿನೂತನ ‘ನಮೋ ನವಮತದಾತ ಸಮ್ಮೇಳನ’ ಎಂಬ ಕಾರ್ಯಕ್ರಮವನ್ನು ಜನವರಿ 25 ರಂದು ನಡೆಸಲಾಗುತ್ತಿದೆ.
ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಸಮ್ಮೇಳನ ನಡೆಯಲಿದ್ದು ಈ ಬಗ್ಗೆ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
”ದೇಶದಾದ್ಯಂತ 5,000 ಕ್ಕೂ ಅಧಿಕ ಸ್ಥಳಗಳಲ್ಲಿ ನಡೆಯಲಿರುವ ನಮೋ ನವಮತದಾತ ಸಮ್ಮೇಳನದಲ್ಲಿ ಲಕ್ಷಾಂತರ ಯುವಜನತೆ ಭಾಗವಹಿಸಲಿದ್ದಾರೆ.ಇದೇ ಮೊದಲ ಬಾರಿಗೆ ದೇಶದ ಪ್ರಧಾನಿಯೊಬ್ಬರು ಯುವ ಮತದಾರರೊಂದಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಸಂವಾದ ನಡೆಸುತ್ತಿದ್ದಾರೆ, ಇದು ಐತಿಹಾಸಿಕ ಸಮ್ಮೇಳನ. ರಾಜಕೀಯ ಪಕ್ಷದ ಯುವ ಘಟಕ ಇದೇ ಮೊದಲ ಬಾರಿಗೆ ಪ್ರಧಾನಿ ಮತ್ತು ಯುವ ಮತದಾರರ ನಡುವೆ ಸಂವಾದ ಆಯೋಜಿಸುತ್ತಿದೆ” ಎಂದು ಹೇಳಿದರು.