Advertisement

2025ರ ವೇಳೆಗೆ 9ಲಕ್ಷ ಮಹಿಳೆಯರಿಂದ ಸ್ವಂತ ಉದ್ಯಮ ಪ್ರಾರಂಭ

10:28 AM Dec 15, 2019 | sudhir |

ಹೊಸದಿಲ್ಲಿ : 2025ರ ವೇಳೆಗೆ ಸುಮಾರು 9ಲಕ್ಷ ಮಹಿಳೆಯರು ಸ್ವಂತ ಉದ್ಯಮವನ್ನು ಹೊಂದಲಿದ್ದಾರೆ ಎಂದು ವರದಿಯೊಂದು ಹೇಳಿದ್ದು, ಆಹಾರದ್ಯೋಮ ಮತ್ತು ಶಿಕ್ಷಣ ಕ್ಷೇತ್ರ ಅವರ ಪ್ರಮುಖ ಆದ್ಯತೆಯಾಗಿದೆ.

Advertisement

ಪ್ರಸ್ತುತ ಹೆಚ್ಚಿನ ಮಹಿಳೆಯರು ಉದ್ಯಮಿಗಳಾಗಿಯೂ ಮತ್ತು ಉದ್ಯೋಗಿಯಾಗಿಯೂ ಕೆಲಸ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇದರ ಪ್ರಮಾಣದಲ್ಲಿ ಮತ್ತಷ್ಟು ಹೆಚ್ಚಲಿದೆ ಎಂದು ವರದಿ ಉಲ್ಲೇಖ ಮಾಡಿದೆ.

ಗ್ಲೋಬಲ್‌ ಅಲೆಯನ್ಸ್ ಫಾರ್‌ ಮಾಸ್‌ ಎಂಟರ್‌ಪ್ರನ್ಯೂರ್‌ಶಿಪ್‌ (GAME) ಮತ್ತು ಫೇಸುಬುಕ್‌ ಈ ಒಂದು ಅಧ್ಯಯನ ನಡೆಸಿದ್ದು, ದೇಶದ ನಗರ ಮತ್ತು ಗ್ರಾಮೀಣ ಪ್ರದೇಶಗಳ ಮಹಿಳಾ ಉದ್ಯೋಗಿಗಳನ್ನು ಈ ಸಮೀಕ್ಷೆಗೆ ಬಳಸಿಕೊಳ್ಳಲಾಗಿದೆ.

ಶೇ.65ರಷ್ಟು
ದೇಶದ ಶೇ.65ರಷ್ಟು ಮಹಿಳೆಯರು ಜವಳಿ, ಆಹಾರ, ಶಿಕ್ಷಣ ಮತ್ತು ಇತರೆ ಸ್ವಂತ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ.

ಶೇ.56ರಷ್ಟು
ದೇಶದಲ್ಲಿ ಜವಳಿ, ಆಹಾರ, ಶಿಕ್ಷಣ ಮತ್ತು ಇತರೆ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರವ ಒಟ್ಟು ಮಹಿಳಾ ಉದ್ಯೋಗಿಗಳ ದತ್ತಾಂಶ.

Advertisement

ಈ 2 ಕ್ಷೇತ್ರಗಳಲ್ಲಿ ಹೆಚ್ಚು
ಸ್ವಂತ ಉದ್ಯಮ ಹೊಂದಿರುವ ನಗರದ ಒಟ್ಟು ಮಹಿಳಾ ಉದ್ಯಮಿಗಳ ಪೈಕಿ ಅತೀ ಹೆಚ್ಚಿನ ಮಹಿಳೆಯರು ಶಿಕ್ಷಣ ಮತ್ತು ಆಹಾರೋದ್ಯಮದಲ್ಲಿ ಕಾರ್ಯ ನಿರತರಾಗಿದ್ದು, 5.5 ಲಕ್ಷ ಮಹಿಳೆಯರು ಆಹಾರೋದ್ಯಮದಲ್ಲಿ ಮತ್ತು 1.2 ಲಕ್ಷ ಮಹಿಳೆಯರು ಶಿಕ್ಷಣ ಕೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

10 ಲಕ್ಷ ಉದ್ಯಮಿಗಳನ್ನು ಸೃಷ್ಟಿಸುವ ಗುರಿ
ಗ್ಲೋಬಲ್‌ ಅಲೆಯನ್ಸ್ ಫಾರ್‌ ಮಾಸ್‌ ಎಂಟರ್‌ಪ್ರನ್ಯೂರ್‌ಶಿಪ್‌ (GAME) ಸಂಸ್ಥೆ ಉದ್ಯಮಶೀಲತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಹಲವಾರು ಪ್ರಯೋಜಕಾರಿ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, 10 ಮಿಲಿಯನ್‌ ಉದ್ಯಮಿಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next