Advertisement

Dasara ಹಬ್ಬಕ್ಕೆ ಊರಿಗೆ ಹೊರಟ ಲಕ್ಷಾಂತರ ಜನ: ಹಲವೆಡೆ ಭಾರೀ ಸಂಚಾರ ದಟ್ಟಣೆ

02:45 PM Oct 11, 2024 | Team Udayavani |

ಬೆಂಗಳೂರು: ದಸರಾ ಹಬ್ಬ ಸೇರಿದಂತೆ ಸರಣಿ ರಜೆ ಹಿನ್ನೆಲೆಯಲ್ಲಿ ಬೆಂಗಳೂರಿಗರು ತಮ್ಮ ಊರುಗಳ ಕಡೆ ತೆರಳಿದ್ದರಿಂದ ಮೆಜೆಸ್ಟಿಕ್‌ ಸೇರಿ ನಗರದ ಪ್ರಮುಖ ರಸ್ತೆಗಳು ಹಾಗೂ ಜಂಕ್ಷನ್‌ಗಳಲ್ಲಿ ಭಾರೀ ಜನದಟ್ಟಣೆ ಜತೆಗೆ ಸಂಚಾರ ದಟ್ಟಣೆಯು ಉಂಟಾಗಿತ್ತು.

Advertisement

ಶುಕ್ರವಾರ ಆಯುಧ ಪೂಜೆ, ಶನಿವಾರ ವಿಜಯ ದಶಮಿ ಮತ್ತು ಭಾನುವಾರ ವಾರದ ರಜೆ ಸೇರಿ 3 ದಿನಗಳು ಸರಣಿ ರಜೆ ಇದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿ ನಿಂದ ಲಕ್ಷಾಂತರ ಮಂದಿ ಗುರುವಾರ ಬೆಳಗ್ಗೆಯಿಂದಲೇ ತಮ್ಮ ಊರಿನತ್ತ ಪ್ರಯಾಣ ಬೆಳೆಸಿದರು. ಮತ್ತೂಂದೆಡೆ ಕೆಎಸ್‌ಎಸ್‌ಆರ್‌ಟಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿಯಾಗಿ 1200 ಬಸ್‌ಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಿಗೆ ವ್ಯವಸ್ಥೆ ಮಾಡಿದೆ. ಕೆಲ ಪ್ರಯಾಣಿಕರು ಮುಂಗಡ ಸೀಟು ಕಾಯ್ದಿರಿಸಿದರೆ, ಕೆಲವರು ನೇರವಾಗಿ ಬಸ್‌ ನಿಲ್ದಾಣಕ್ಕೆ ಬಂದು ಬಸ್‌ ಏರಿದರು.

ಬೆಳಗ್ಗೆಯಿಂದಲೇ ಸಂಚಾರ ದಟ್ಟಣೆ: ಗುರುವಾರ ಬೆಳಗ್ಗೆ 7 ಗಂಟೆಯಿಂದಲೇ ಮೆಜೆಸ್ಟಿಕ್‌, ಆನಂದ್‌ ರಾವ್‌ ವೃತ್ತ, ಮೈಸೂರು ರಸ್ತೆ, ಹೊಸೂರು ರಸ್ತೆ, ಬಳ್ಳಾರಿ ರಸ್ತೆಯಲ್ಲಿ ಭಾರೀ ವಾಹನಗಳ ಓಡಾಟ ಇತ್ತು. ಕೆಲವರು ಸ್ವಂತ ವಾಹನಗಳ ಮೂಲಕ ಊರುಗಳತ್ತ ಪ್ರಯಾಣಿಸಿದರೆ, ಬಹುತೇಕ ಮಂದಿ ಸಮೂಹ ಸಾರಿಗೆ ಬಳಸಿದರು. ಅದರಿಂದ ಮೆಜೆಸ್ಟಿಕ್‌, ಸ್ಯಾಟಲೈಟ್‌, ಯಶವಂತಪುರ, ಹೆಬ್ಟಾಳ, ಎಲೆಕ್ಟ್ರಾನಿಕ್‌ ಸಿಟಿ ಬಸ್‌ ನಿಲ್ದಾಣಗಳಲ್ಲಿ ಜನದಟ್ಟಣೆ ಹೆಚ್ಚಾಗಿದ್ದರಿಂದ ಮಂದಗತಿಯ ವಾಹನ ಸಂಚಾರ ಇತ್ತು.

ಇನ್ನು ಮೆಜೆಸ್ಟಿಕ್‌, ಯಶವಂತರದ ಗೋವರ್ಧನ ಟಾಕೀಸ್‌, ಸ್ಯಾಟಲೈಟ್‌ ಬಸ್‌ ನಿಲ್ದಾಣ ಸಮೀಪ ತಡರಾತ್ರಿ 1 ಗಂಟೆವರೆಗೂ ನಿರೀಕ್ಷೆಗೂ ಮೀರಿದ ಭಾರೀ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನಗಳು ಸಿಗ್ನಲ್‌ ದಾಟಲು ತಾಸುಗಟ್ಟಲೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಂಜೆ ನಾಲ್ಕು ಗಂಟೆ ಬಳಿಕ ಸಂಚಾರ ದಟ್ಟಣೆ ದುಪ್ಟಟ್ಟಾಗಿತ್ತು.

ಮುಂಜಾನೆಯಿಂದಲೇ ರಸ್ತೆಗಳಿದ ಸಂಚಾರ ಪೊಲೀಸರು, ನಗರದಲ್ಲಿ ಉಂಟಾದ ಸಂಚಾರ ದಟ್ಟಣೆ ನಿಯಂತ್ರಿಸಲು ಹೈರಾಣಾದರು. ಮೆಜೆಸ್ಟಿಕ್‌ ಸುತ್ತ-ಮುತ್ತ ಸುಮಾರು 50ಕ್ಕೂ ಅಧಿಕ ಮಂದಿ ಹಾಗೂ ಯಶವಂತಪುರ ಗೋವರ್ಧನ ಟಾಕೀಸ್‌ ಬಳಿ ಸುಮಾರು 30ಕ್ಕೂ ಅಧಿಕ ಮಂದಿ ಸಂಚಾರ ಪೊಲೀಸರ ನಿಯೋಜಿಸಲಾಗಿದೆ.

Advertisement

ಮೆಜೆಸ್ಟಿಕ್‌ನಲ್ಲಿ 10 ನಿಮಿಷಕ್ಕೆ ಬಸ್‌ ಫ‌ುಲ್‌ ಮೆಜೆಸ್ಟಿಕ್‌ ಬಸ್‌ ನಿಲ್ದಾಣ ಮತ್ತು ಸ್ಯಾಟಲೈಟ್‌ ಬಸ್‌ ನಿಲ್ದಾಣಗಳಲ್ಲಿ ಬೇರೆ ಸಂದರ್ಭದಲ್ಲಿ ಒಂದು ಬಸ್‌ ಭರ್ತಿಯಾಗಲು ಕನಿಷ್ಠ 30 ನಿಮಿಷ ಬೇಕಾಗಿತ್ತು. ಆದರೆ, ಗುರುವಾರ ಕೇವಲ 10 ನಿಮಿಷಕ್ಕೆ ಒಂದು ಬಸ್‌ ಭರ್ತಿಯಾಗಿ ನಿಲ್ದಾಣದಿಂದ ಹೊರಡುತ್ತಿವೆ. ಪ್ರಯಾಣಿಕರನ್ನು ನಿಯಂತ್ರಿಸಲು ದೊಡ್ಡ ಸವಾಲಾಗಿತ್ತು. ಬಹುತೇಕ ಇನ್ನು 500 ಬಸ್‌ಗಳು ಹೆಚ್ಚುವರಿಯಾಗಿ ನೀಡಿದರೆ, ಆ ಬಸ್‌ಗಳು ಭರ್ತಿಯಾಗುವ ಸಾಧ್ಯತೆ ಇತ್ತು. ಇನ್ನು ಸಂಚಾರ ಪೊಲೀಸರು ನಿಲ್ದಾಣದ ಪ್ರವೇಶ ದ್ವಾರದಲ್ಲಿ ನಿಂತು ಬಸ್‌ಗಳು ನಿಲ್ದಾಣದಿಂದ ಸುಗ ಮವಾಗಿ ಹೊರಡಲು ಸಹಾಯ ಮಾಡಿದರು ಮೆಜೆಸ್ಟಿಕ್‌ ಬಸ್‌ ನಿಲ್ದಾಣದ ಸಿಬ್ಬಂದಿ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next