ನವದೆಹಲಿ: ಲಖೀಂಪುರ್ ಖೇರಿ ಪ್ರಕರಣದ ಪ್ರಮುಖ ಆರೋಪಿ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ ತೇನಿ ಪುತ್ರ ಅಶೀಶ್ ಮಿಶ್ರಾಗೆ ಗುರುವಾರ (ಫೆ.10) ಹೈಕೋರ್ಟ್ ಜಾಮೀನು ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಯೂಟ್ಯೂಬ್ ನಲ್ಲಿ ಸಬ್‌ಸ್ಕ್ರೈಬರ್ ಸಂಖ್ಯೆಯನ್ನು ಹೈಡ್ ಮಾಡುವುದು ಹೇಗೆ?
ಲಖೀಂಪುರ್ ಖೇರಿ ಪ್ರಕರಣದ ಆರೋಪಿ ಅಶೀಶ್ ಮಿಶ್ರಾಗೆ ಅಲಹಾಬಾದ್ ಹೈಕೋರ್ಟ್ ನ ಲಕ್ನೋ ಪೀಠ ಜಾಮೀನು ನೀಡಿದೆ. ಕಳೆದ ವರ್ಷ ಅಕ್ಟೋಬರ್ 3ರಂದು ಲಖೀಂಪುರ್ ಖೇರಿಯಲ್ಲಿ ನಡೆದಿದ್ದ ಪ್ರಕರಣದ ತನಿಖೆ ನಡೆಸಿದ್ದ ಎಸ್ ಐಟಿ ಅಜಯ್ ಮಿಶ್ರಾ ಪುತ್ರ ಅಶೀಶ್ ಮಿಶ್ರಾ ಪ್ರಮುಖ ಆರೋಪಿ ಎಂದು ಘೋಷಿಸಿತ್ತು.
ಘಟನೆ ಕುರಿತು 5,000 ಪುಟಗಳ ಚಾರ್ಜ್ ಶೀಟ್ ಅನ್ನು ಎಸ್ ಐಟಿ ಚೀಫ್ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಚಿಂಟಾ ರಾಮ್ ಅವರಿಗೆ ಸಲ್ಲಿಸಿದ್ದು, ಹಿಂಸಾಚಾರ ನಡೆದ ಸಂದರ್ಭದಲ್ಲಿ ಮಿಶ್ರಾ ಘಟನಾ ಸ್ಥಳದಲ್ಲಿ ಇದ್ದಿರುವುದಾಗಿ ಎಸ್ ಐಟಿ ತಿಳಿಸಿತ್ತು.
ಲಖೀಂಪುರ್ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಮಿಶ್ರಾ ಬೆಂಗಾವಲು ಪಡೆಯ ವಾಹನ ಹರಿದು ನಾಲ್ವರು ರೈತರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ನಂತರ ನಡೆದ ಹಿಂಸಾಚಾರದಲ್ಲಿ ನಾಲ್ವರು ಸಾವನ್ನಪ್ಪಿದ್ದರು.