ಲಕ್ನೋ: ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಗಾಡಿ ಹರಿಸಿದ್ದ ಪ್ರಕರಣದಲ್ಲಿ ಬಂಧಿತರಾಗಿರುವ ಆಶಿಶ್ ಮಿಶ್ರಾ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ಮೇ 30ರಂದು ನಡೆಸಲಿದೆ.
ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರರಾಗಿರುವ ಆಶಿಶ್ಗೆ ಈ ಹಿಂದೆ ಫೆ.10ರಂದೇ ಹೈಕೋರ್ಟ್ ಜಾಮೀನು ಕೊಟ್ಟಿತ್ತು. ಆದರೆ ಸಂತ್ರಸ್ತರಿಗೆ ನ್ಯಾಯಯುತವಾಗಿ ವಿಚಾರಣೆಯಾಗಿಲ್ಲ ಎಂದು ದೂಷಿಸಿ ಸುಪ್ರೀಂ ಕೋರ್ಟ್ ಏ.18ರಂದು ಜಾಮೀನನ್ನು ರದ್ದು ಮಾಡಿತ್ತು.
ವಾರದೊಳಗೆ ಪೊಲೀಸರ ಎದುರು ಶರಣಾಗಲು ಆಶಿಶ್ಗೆ ಸೂಚಿಸಿತ್ತು. ಅದರಂತೆ ಶರಣಾಗಿದ್ದ ಆಶಿಶ್ ಮತ್ತೆ ಜಾಮೀನು ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಮೇ 30ರಂದು ನಡೆಯಲಿದೆ.