Advertisement

ಲಕ್ಷ ಎಂಜಿನಿಯರಿಂಗ್‌ ಸೀಟುಗಳು ಖೋತಾ

06:00 AM Dec 18, 2017 | Team Udayavani |

ಹೊಸದಿಲ್ಲಿ: ಎಂಜಿನಿಯರಿಂಗ್‌ ವಿಭಾಗವನ್ನೇ ಆಯ್ದುಕೊಂಡು ಅಧ್ಯಯನ ನಡೆಸುವ ವಿದ್ಯಾರ್ಥಿಗಳೇ ಗಮನಿಸಿ. 2018-19ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕ ಸಹಿತ ದೇಶಾದ್ಯಂತ ಒಂದು ಲಕ್ಷ ಸೀಟುಗಳು ಖೋತಾ ಆಗಲಿವೆ. ಅಷ್ಟೇ ಅಲ್ಲ, ಐದು ವರ್ಷಗಳಲ್ಲಿ ಯಾವ ತಾಂತ್ರಿಕ ಕೋರ್ಸ್‌ಗಳಿಗೆ ಶೇ.30ರಷ್ಟು ಕಡಿಮೆ ಪ್ರಮಾಣದಲ್ಲಿ ಪ್ರವೇಶಾತಿ ಆಗಿದೆಯೋ 2018ರ ಜುಲೈಯಿಂದ ಅಂಥವುಗಳನ್ನು ಮುಚ್ಚಲಾಗುತ್ತದೆ. ಹೀಗೆಂದು ಅಖೀಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಅಧ್ಯಕ್ಷ ಅನಿಲ್‌ ಸಹಸ್ರಬುದ್ಧೆ  ತಿಳಿಸಿದ್ದಾರೆ ಎಂದು “ಸಂಡೇ ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.

Advertisement

ಕಳೆದ ಶುಕ್ರವಾರ ಬಿಡುಗಡೆ ಮಾಡಲಾಗಿರುವ ಎಂಜಿನಿಯರಿಂಗ್‌ ಶಿಕ್ಷಣದ ಕುರಿತಾದ ಕೈಪಿಡಿಯಲ್ಲಿ ಹೊಸ ಕಾಲೇಜು ಸ್ಥಾಪನೆಗೆ ಅನುಮತಿ ನೀಡುವುದರ ಬಗ್ಗೆ ರಾಜ್ಯ ಸರಕಾರಗಳು ತೀರ್ಮಾನ ಕೈಗೊಳ್ಳಬಾರದು ಎಂದು ಶಿಫಾರಸು ಮಾಡಲಾಗಿದೆ. ಒಂದು ವೇಳೆ ಯಾವುದೇ ತಾತ್ಕಾಲಿಕ ಯೋಜನೆಯಂತೆ ರಾಜ್ಯಗಳಲ್ಲಿ ಎಂಜಿನಿಯರಿಂಗ್‌ ಕಾಲೇಜು ಸ್ಥಾಪನೆಗೆ ಅನುಮತಿ ನೀಡಿದಲ್ಲಿ ಅದಕ್ಕೆ ಎಐಸಿಟಿಇಯಿಂದ ಮಾನ್ಯತೆ ನಿರಾಕರಿಸ ಲಾಗುತ್ತದೆ. ಕೈಗಾರಿಕೆ ಕ್ಷೇತ್ರದಲ್ಲಿ ಸೃಷ್ಟಿಯಾಗುವ ಉದ್ಯೋಗ ಪರಿಸ್ಥಿತಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿರುವ ಸೀಟುಗಳ ಮೂಲಕ ಎಷ್ಟು ಮಂದಿ ಎಂಜಿನಿಯರ್‌ಗಳಿಗೆ ಬೇಡಿಕೆ ಇದೆ ಎಂಬ ವಿಚಾರ ಗೊತ್ತಾಗುತ್ತದೆ.

ಬೇಕು ಅನುಮತಿ: ಕೈಪಿಡಿಯಲ್ಲಿ ಉಲ್ಲೇಖೀಸ ಲಾಗಿರುವ ಗಮನಾರ್ಹ ಅಂಶವೆಂದರೆ ಡೀಮ್ಡ್ ವಿವಿಗಳು ಆರಂಭಿಸುವ ತಾಂತ್ರಿಕ ಕೋರ್ಸ್‌ ಗಳಿಗೆ ಕೂಡ ಎಐಸಿಟಿಇಯಿಂದ ಅನುಮತಿ ಪಡೆಯಬೇಕು. ಇದುವರೆಗೆ ಅವುಗಳು ವಿಶ್ವ ವಿದ್ಯಾನಿಲಯ ಧನ ಸಹಾಯ ಆಯೋಗ (ಯುಜಿಸಿ) ವ್ಯಾಪ್ತಿ ಯಲ್ಲಿ ಇದ್ದುದರಿಂದ  ಎಐಸಿಟಿಇ ಆದೇಶ ಪಾಲನೆ ಮಾಡಬೇಕಾಗಿರಲಿಲ್ಲ.

ಹೀಗಾಗಿಯೇ ದೇಶಾದ್ಯಂತ ಎಂಜಿನಿಯರಿಂಗ್‌ ಕಾಲೇಜುಗಳು ಹೆಚ್ಚಿನ ಸಂಖ್ಯೆಯಲ್ಲಿ ಆರಂಭವಾಗಿದ್ದವು.
ಕೈಗಾರಿಕಾ ಕ್ಷೇತ್ರದ ಅಗತ್ಯ, ಎಂಜಿನಿಯರಿಂಗ್‌ ವಿದ್ಯಾರ್ಥಿಗಳಲ್ಲಿನ ಪರಿಣತಿ ಸಹಕಾರಿಯಾಗದೆ ಇರುವುದು ಎಂಜಿನಿಯರಿಂಗ್‌ ಪದವೀಧರರಿಗೆ ಬೇಡಿಕೆ ಕಡಿಮೆಯಾಗಲು ಕಾರಣವಾಯಿತು. ಹೀಗಾಗಿ ಎಐಸಿಟಿಇ ಮುಂದಿನ ಶೈಕ್ಷಣಿಕ ವರ್ಷದಿಂದ ಒಂದು ಲಕ್ಷ ಸೀಟುಗಳನ್ನು ಕಡಿತ ಮಾಡಲು ನಿರ್ಧರಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next