Advertisement
ಕೆರೆಗಳ ಊರಾಗಿತ್ತು ಮಂಗಳೂರುಮಂಗಳೂರು ನಗರ ಒಂದೊಮ್ಮೆ ಕೆರೆಗಳ ಊರಾಗಿತ್ತು. ಎಮ್ಮೆಕೆರೆ, ಗುಜ್ಜರಕೆರೆ, ಕಾವೂರು ಕೆರೆ, ಒಂಭತ್ತು ಕೆರೆ, ಎಕ್ಕೂರು ಕೆರೆ, ಕಣ್ಣೂರು, ಕುರ್ಕಾಲ ಕೆರೆ, ಬೈರಾಡಿ ಕೆರೆ, ಕದ್ರಿ ಕೈಬಟ್ಟಲು ಕೆರೆ, ಬಜ್ಜೋಡಿ ನೀರಿನ ಝರಿ ಕೆರೆ, ಮುಂಡಾನ ನೀರಿನ ಝರಿ ಮುಂತಾದ ಕೆರೆಗಳ ಸರಮಾಲೆಯೇ ಮಂಗಳೂರಿನ ಮಡಿಲಲ್ಲಿತ್ತು ಮತ್ತು ಕುಡಿಯುವ ನೀರಿನ ಮೂಲವಾಗಿತ್ತು. ಮಂಗಳೂರು ತಾಲೂಕಿನಲ್ಲಿ ಅತಿ ಹೆಚ್ಚು 54 ಕೆರೆಗಳಿದ್ದವು. ತುಂಬೆಯಿಂದ ನೀರು ಪೂರೈಕೆ ಆರಂಭವಾದ ಬಳಿಕ ಈ ಕೆರೆಗಳು ನಗಣ್ಯವಾದವು. ಬರೇ ನಗಣ್ಯವಾಗಿದ್ದರೆ ಪರವಾಗಿಲ್ಲ.
ಮಂಗಳೂರಿನಲ್ಲಿ ಪ್ರಸ್ತುತ ಉಳಿದಿರುವ ಬೆರಳೆಣಿಕೆಯ ಕೆರೆಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳು ರೂಪಿತವಾಗಿ ಒಂದಷ್ಟು ಅನುದಾನ ವಿನಿಯೋಗವಾದರೂ ನಿರೀಕ್ಷಿತ ಅಭಿವೃದ್ಧಿ ಕಾಣಲು ಸಾಧ್ಯವಾಗಿಲ್ಲ. ಕಾವೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ ಹರಡಿಕೊಂಡಿರುವ ಕಾವೂರು ಕೆರೆ ಎಂದೇ ಪ್ರಸಿದ್ಧಿಯನ್ನು ಪಡೆದಿರುವ ಈ ಕೆರೆ ಮೂಲತಃ 8 ಎಕ್ರೆ ಪ್ರದೇಶದಲ್ಲಿ ( 3.44 ಹೆ.) ವ್ಯಾಪಿಸಿಕೊಂಡಿತ್ತು. ಈಗ ಕೆರೆಯ ಸುಮಾರು 3 ಎಕ್ರೆ ಪ್ರದೇಶ ಒತ್ತುವರಿ ಆಗಿದೆ ಎಂದು ಹೇಳಲಾಗುತ್ತಿದೆ. ಒಂದೊಮ್ಮೆ ತುಂಬಿ ತುಳುಕಿ ಜಲಾಶಯದಂತೆ ಕಂಗೊಳಿಸುತ್ತಿದ್ದ ಕಾವೂರು ಕೆರೆ ಸುತ್ತಮುತ್ತಲ ಪ್ರದೇಶಗಳಲ್ಲಿ ಕೃಷಿಗೆ ನೀರಿನ ಆಶ್ರಯ ತಾಣವೂ ಆಗಿತ್ತು. ಕುಳೂರು ಮಾಗಣೆಯ 7 ಗ್ರಾಮಗಳ ಅಂತರ್ಜಲ ಮಟ್ಟವನ್ನು ಸಂರಕ್ಷಣೆ ಮಾಡುವಲ್ಲಿ ಕೆರೆ ಸಹಕಾರಿಯಾಗಿತ್ತು. ಬರಬರುತ್ತಾ ಕೆಸರು ಹೂಳು ತುಂಬಿ ಕೆರೆಯ ಸ್ವರೂಪವನ್ನು ಕಳೆದುಕೊಂಡು ಬಟಾಬಯಲು ಆಗಿದೆ. ಇದಕ್ಕೆ ಕಾಯಕಲ್ಪ ನೀಡುವ ಒಂದಷ್ಟು ಪ್ರಯತ್ನಗಳು ಆಡಳಿತ ವ್ಯವಸ್ಥೆಯ ಕಡೆಯಿಂದ ನಡೆದರೂ ಇಚ್ಛಾಶಕ್ತಿ ಕೊರತೆಯಿಂದ ನಿರೀಕ್ಷಿತ ಫಲ ನೀಡಿಲ್ಲ. ಅತ್ಯಂತ ವಿಶಾಲವಾದ ಈ ಕೆರೆಯನ್ನು ಬೆಂಗಳೂರಿನ ಮಾದರಿಯಲ್ಲೇ ಸುತ್ತಲೂ ವಾಕ್ ಟ್ರ್ಯಾಕ್ ಹಾಗೂ ವಾಯು ವಿಹಾರಕ್ಕೆ ಪೂರಕವಾಗಿ ನಿರ್ಮಾಣ ಸುಂದರವಾಗಿ ರೂಪಿಸಲು ಅವಕಾಶವಿದೆ.
Related Articles
Advertisement
5- 6 ವರ್ಷಗಳಿಂದ ಕಾಯಕಲ್ಪಕ್ಕೆ ಕಾಯುತ್ತಿದೆಐತಿಹಾಸಿಕ ಗುಜ್ಜರಕೆರೆ ಮೂಲತಃ 3.80 ಎಕ್ರೆ ವಿಸ್ತೀರ್ಣವಿದೆ. ಆದರೆ ಬಹಳಷ್ಟು ಜಾಗ ಒತ್ತುವರಿಯಾಗಿದೆ. ಇದನ್ನು ಉಳಿಸಿ ಸಂರಕ್ಷಿಸಬೇಕು ಎಂಬುದಾಗಿ ಬಹಳಷ್ಟು ವರ್ಷಗಳ ಬೇಡಿಕೆಗೆ ಸ್ಪಂದಿಸಿ ಇದಕ್ಕೆ ಕಾಯಕಲ್ಪ ನೀಡುವ ಕಾರ್ಯ ಕಳೆದ ಐದಾರು ವರ್ಷಗಳಿಂದ ನಡೆಯುತ್ತಿದ್ದರೂ ಇನ್ನೂ ಅದು ನಿರ್ಣಾಯಕ ಹಂತ ತಲುಪಿಲ್ಲ. ಈಗಾಗಲೇ ಕೋಟ್ಯಂತರ ರೂಪಾಯಿ ವಿನಿಯೋಗಿಸಲಾಗಿದೆ. ಆದರೂ ಇದಕ್ಕೆ ಒಂದು ಅಂತಿಮ ಸ್ವರೂಪವನ್ನು ನೀಡಲು ಸಾಧ್ಯವಾಗಿಲ್ಲ. ಇದನ್ನು ಒಂದು ವಿಹಾರಧಾಮವಾಗಿ ಆಕರ್ಷಣೀಯಗೊಳಿ
ಸಬಹುದಾಗಿದೆ. ಕೇಶವ ಕುಂದರ್