Advertisement

ಕೆರೆಗಳ ಜೋಡಣೆಗೆ ಯೋಜನೆ ಸಿದ್ಧ

12:07 PM Jun 06, 2019 | Team Udayavani |

ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯ 8 ಕೆರೆಗಳ ಜೋಡಣೆ ಕಾರ್ಯಕ್ಕೆ ಯೋಜನೆ ಸಿದ್ಧಪಡಿಸ ಲಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿ ಗಣೇಶ್‌ ತಿಳಿಸಿದರು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಹಾನಗರಪಾಲಿಕೆ, ಮೈತ್ರಿ, ಕನ್ನಡ ಸಾತ್ಯ ಪರಿಷತ್‌, ಪತಂಜಲಿ ಶಿಬಿರ, ನಾಗರಿಕ ಹಿತರಕ್ಷಣಾ ವೇದಿಕೆ, ಕಲ್ಪತರು ನಾಗರಿಕ ವೇದಿಕೆ ಮತ್ತಿತರ ಸ್ವಯಂ ಸೇವಾ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ನಗರದ 30ನೇ ವಾರ್ಡ್‌ ಗೆದ್ದಲಹಳ್ಳಿಯ ಗಾರೆನರಸಯ್ಯನಕಟ್ಟೆ ಕೆರೆಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದ ಅವರು ಮಾತನಾಡಿದರು.

Advertisement

ಮುಳ್ಳು ಬೇಲಿಗಳನ್ನು ತೆರವುಗೊಳಿಸಿ: ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದ ಸುತ್ತಮುತ್ತ ಇರುವ 8 ಕೆರೆಗಳನ್ನು ಜೋಡಿಸುವ ಕಾರ್ಯಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು. ಪಾಲಿಕೆ ವತಿಯಿಂದ ಕೈಗೊಂಡಿ ರುವ ಗಾರೆನರಸಯ್ಯನಕಟ್ಟೆ ಕೆರೆಯ ಸ್ವಚ್ಛತೆಯನ್ನು ಪಾಲಿಕೆಯ ಪೌರ ಕಾರ್ಮಿಕರು, ಅಧಿಕಾರಿ- ಸಿಬ್ಬಂದಿಗಳ ಸಹಕಾರದಲ್ಲಿ ಇಂದಿನಿಂದ ಹತ್ತು ದಿನ ಗಳವರೆಗೆ ನಡೆಸಲಾಗುವುದು. ಕೆರೆಗಳ ಸುತ್ತ ಇರುವ ಮುಳ್ಳು ಬೇಲಿಗಳನ್ನು ತೆರವುಗೊಳಿಸಿ, ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಕೆರೆಯ ಅಂದವನ್ನು ಹೆಚ್ಚಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಭೂಬಾಲನ್‌, ಆರೋಗ್ಯಾಧಿಕಾರಿ ಡಾ. ನಾಗೇಶ್‌, ಪಾಲಿಕೆ ಸದಸ್ಯ ವಿಷ್ಣುವರ್ಧನ ಮತ್ತಿತರರು ಉಪಸ್ಥಿತರಿದ್ದರು.

ಗಿಡಗಳನ್ನು ನೆಟ್ಟು ಸಂಭ್ರುಸಿದ ಸದಸ್ಯರು: ಪಾಲಿಕೆ ವ್ಯಾಪ್ತಿಯ ಎಲ್ಲಾ 35 ವಾರ್ಡ್‌ಗಳಲ್ಲಿ ಬುಧವಾರ ಆಯಾ ಸದಸ್ಯರು ತಮ್ಮ ವಾರ್ಡ್‌ ವ್ಯಾಪ್ತಿಯಲ್ಲಿ ಹೊಂಗೆ, ಬೇವು ಮತ್ತಿತರ ತಲಾ 10 ಸಸಿಗಳನ್ನು ನೆಟ್ಟು ವಿಶ್ವ ಪರಿಸರ ದಿನವನ್ನು ಆಚರಿಸಿ ಸಂಭ್ರುಸಿದರು. ವಾರ್ಡ್‌ ಸಂಖ್ಯೆ 11ರ ರಾಜೀವ್‌ಗಾಂಧಿ ನಗರದ ಪಾರ್ಕ್‌ನಲ್ಲಿ ಮೇಯರ್‌ ಲಲಿತಾ ರವೀಶ ಅವರು ಸಾಂಕೇತಿಕವಾಗಿ ಗಿಡ ನೆಟ್ಟು ಪರಿಸರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಗಿರಿಜಾ ಧನಿಯಾ ಕುಮಾರ್‌, ಮಂಜುಳ ಆದರ್ಶ್‌, ದೀಪಶ್ರೀ ಮಹೇಶ್‌ ಮತ್ತಿತರರು ಹಾಜರಿದ್ದರು.

Advertisement

ರೈತರು ಬೇವು, ಹೊಂಗೆ ಮರ ಬೆಳೆಸಿ:

ಮನುಷ್ಯ ಸೇರಿದಂತೆ ಜೀವ ಸಂಕುಲಕ್ಕೆ ಅತ್ಯಗತ್ಯವಾಗಿ ಬೇಕಿರುವ ಆಮ್ಲಜನಕ ವನ್ನು ಹೆಚ್ಚಾಗಿ ಹೊರ ಸೂಸುವ ಬೇವು ಮತ್ತು ಹೊಂಗೆ ಮರಗಳನ್ನು ರೈತರು ತಮ್ಮ ಜಮೀನಿನ ಬದುವಿನಲ್ಲಿ ಬೆಳೆಸಬೇಕು ಎಂದು ವಕೀಲ ಜ್ಞಾನಮೂರ್ತಿ ಸಲಹೆ ನೀಡಿದರು.

ಹಂದನಕೆರೆ ಹೋಬಳಿಯ ಗೂಬೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ ಸಸಿ ನೆಡುವ ಕಾರ್ಯ ಕ್ರಮದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮರ ಗಳನ್ನು ಕಡಿಯುತ್ತಿರುವುದರಿಂದ ಭೂಮಿಯ ತಾಪ ಮಾನ ಹೆಚ್ಚಾಗಿ ಅನೇಕ ಪ್ರಕೃತಿ ವಿಕೋಪಗಳು ಸಂಭವಿ ಸುತ್ತಿವೆ.

ಈ ತಾಪಮಾನ ಹೀಗೆಯೇ ಹೆಚ್ಚಾ ಗುತ್ತಾ ಹೋದರೆ ಜಗತ್ತಿನ ಶೇ.25ರಷ್ಟು ತೇವಾಂಶ ಒಣಗಿ ಜೀವ ಸಂಕುಲ ಬದುಕುವುದೇದುತ್ಸರವಾಗುತ್ತದೆ. ಹಾಗಾಗಿ ಎಲ್ಲರೂ ಎಚ್ಚೆತ್ತುಕೊಂಡು ಗಿಡಮರಗಳನ್ನು ಬೆಳೆಸಬೇಕು ಎಂದರು.

ಮನೆಗಳ ಸುತ್ತಮುತ್ತ ಕೈ ತೋಟ ಮಾಡಿ: ವೈದ್ಯೆ ಎನ್‌.ರಾಧಿಕಾ ಮಾತನಾಡಿ, ಮನೆಗಳ ಸುತ್ತಮುತ್ತ ಕೈ ತೋಟ ಮಾಡಬೇಕು. ಮನೆಗೆ ಅಗತ್ಯವಿರುವ ಹಣ್ಣಿನ ಗಿಡಗಳನ್ನಾದರೂ ಬೆಳೆದು ವೈಯಕ್ತಿಕ ಆರೋಗ್ಯದ ಜೊತೆಗೆ ಪರಿಸರದ ಆರೋಗ್ಯ ಕಾಪಾಡ ಬಹುದಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಮನೆ ಸುತ್ತಮುತ್ತಲ ಪ್ರದೇಶ ವನ್ನು ವ್ಯರ್ಥವಾಗಿ ಬಿಡದೆ ಮರಗಿಡಗಳನ್ನು ಬೆಳಸಿ ಎಂದು ಕಿವಿಮಾತು ಹೇಳಿದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿ ಗೋವಿಂದರಾಜು, ಗ್ರಾಪಂ ಸದಸ್ಯರಾದ ಸುರೇಶ್‌, ಜಯಲಕ್ಷಮ್ಮ ಇತರ‌ರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next