Advertisement

ಕೆರೆ, ಪಾರ್ಕ್‌, ಶ್ಮಶಾನ, ಕ್ರೀಡಾಂಗಣಕ್ಕೆ ಆದ್ಯತೆ: ದಿವಾಕರ ಶೆಟ್ಟಿ

03:35 AM Feb 16, 2017 | |

ಕಾಪು: ಕಾಪು ಪುರಸಭಾ ವ್ಯಾಪ್ತಿಯ ಉಳಿಯಾರಗೋಳಿ, ಕಾಪು, ಮೂಳೂರು, ಮಲ್ಲಾರು ಗ್ರಾಮಗಳು ಸೇರಿದಂತೆ ಕೋಟೆ- ಮಟ್ಟು, ಪಾಂಗಾಳ, ಮಜೂರು ಹಾಗೂ ಉಚ್ಚಿಲ ಗ್ರಾಮಗಳ ವ್ಯಾಪ್ತಿಗೆ ಒಳಪಟ್ಟು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಾಪು ನಗರ ಯೋಜನಾ ಪ್ರಾಧಿಕಾರದ ಕಚೇರಿ ಉದ್ಘಾಟನೆ ಮತ್ತು ಪ್ರಾಧಿಕಾರದ ಪ್ರಥಮ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ಅವರ ಅಧಿಕಾರ ಸ್ವೀಕಾರ ಸಮಾರಂಭವು ಕಾಪು ಪುರಸಭೆ ಕಟ್ಟಡದಲ್ಲಿ ಬುಧವಾರ ನಡೆಯಿತು.

Advertisement

ನೂತನ ಕಚೇರಿಯನ್ನು ಉದ್ಘಾಟಿಸಿ, ನೂತನ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ಅವರನ್ನು ಅಭಿನಂದಿಸಿದ ಶಾಸಕ ವಿನಯ
ಕುಮಾರ್‌ ಸೊರಕೆ ಮಾತನಾಡಿ, ಕಾಪು ಯೋಜನಾ ಪ್ರಾಧಿಕಾರಕ್ಕೆ ಹಿರಿಯ ಮುತ್ಸದ್ಧಿಯೇ ಅಧ್ಯಕ್ಷರಾಗಿ ಬಂದಿರು ವುದು ನಮ್ಮೆಲ್ಲರಿಗೂ ಹೆಮ್ಮೆಯಾಗಿದೆ. ಕಾಪು ಅಭಿವೃದ್ಧಿಗೆ ದೂರದರ್ಶಿತ್ವದ ಯೋಜನೆಗಳನ್ನು ಹೊಂದಿರುವ ಕಾಪು ದಿವಾಕರ ಶೆಟ್ಟಿ ಅವರು ತಮಗೆ ಸಿಕ್ಕಿರುವ ಅವಕಾಶವನ್ನು ಸಮರ್ಥವಾಗಿ ನಿಭಾಯಿಸುವುದು ಮಾತ್ರವಲ್ಲದೇ, ಕಾಪು ಪುರಸಭೆಯನ್ನು ಮಾದರಿ ಪುರಸಭೆ
ಯನ್ನಾಗಿ ರಚಿಸುವಲ್ಲಿ ಯಶಸ್ವಿಯಾಗು ತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಅಭಿವೃದ್ಧಿಗೆ ಆದ್ಯತೆ
ಕಾಪು ನಗರ ಯೋಜನಾ ಪ್ರಾಧಿ ಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕಾಪು ದಿವಾಕರ ಶೆಟ್ಟಿ ಮಾತನಾಡಿ, ನನ್ನ ಅಧಿಕಾರಾವಧಿಯ ಮೂರು ವರ್ಷಗಳಲ್ಲಿ ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಪ್ರದೇಶಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗು ವುದು. ಯೋಜನಾ ಪ್ರದೇಶದಲ್ಲಿ ಕೈಗಾರಿಕೆ, ಕ್ರೀಡಾಂಗಣ, ಕೆರೆ, ಪಾರ್ಕ್‌, ಶ್ಮಶಾನ, ವಾಕಿಂಗ್‌ ಟ್ರಾಕ್‌ನಂತಹ ಮಹತ್ವದ ಯೋಜನೆಗಳನ್ನು ಶೀಘ್ರ ಅನುಷ್ಠಾನಿಸಲಾಗುವುದು ಎಂದರು.

ಪ್ರಥಮ ಹಂತದಲ್ಲಿ 3 ಕೋ.ರೂ.
ಕಾಪು ನಗರ ಯೋಜನಾ ಪ್ರಾಧಿಕಾ ರಕ್ಕೆ ಪ್ರಥಮ ಹಂತದಲ್ಲಿ ರಾಜ್ಯ ಸರಕಾರ 3 ಕೋ. ರೂ. ಅನುದಾನವನ್ನು ಒದಗಿಸ ಲಿದ್ದು, ಪ್ರಾರಂಭಿಕ ಅನುದಾನದ ಸದ್ಬಳ ಕೆಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿ ಗಳೊಂದಿಗೆ ಚರ್ಚಿಸಿ, ಯೋಜನೆ ರೂಪಿಸಲಾಗುವುದು. ಪುರಸಭೆಯ ವಿವಿಧ ಕಾಮಗಾರಿಗಳಿಗೆ ಅತೀ ಹೆಚ್ಚಿನ ಅನುದಾನ ಕ್ರೋಡೀಕರಿಸಲು ಮಹತ್ವದ ನಿರ್ಧಾರ ಮತ್ತು ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು ಎಂದರು. ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನದ ಪ್ರಧಾನ ಅರ್ಚಕ ವೇ| ಮೂ| ಶ್ರೀನಿವಾಸ ತಂತ್ರಿ ಕಲ್ಯ ಕಚೇರಿ ಉದ್ಘಾಟಿಸಿ ಶುಭ ಹಾರೈಸಿದರು.

ಕಾಪು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ, ಜೆಡಿಎಸ್‌ ಜಿಲ್ಲಾಧ್ಯಕ್ಷ ಯೋಗೀಶ್‌ ಶೆಟ್ಟಿ, ಗ್ರಾ.ಪಂ. ಒಕ್ಕೂಟದ ಅಧ್ಯಕ್ಷ ಡಾ| ದೇವಿಪ್ರಸಾದ್‌ ಶೆಟ್ಟಿ, ಕಾಪು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಉದ್ಯಮಿ ಮನೋಹರ್‌ ಶೆಟ್ಟಿ ಕಾಪು, ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ರಾಜೇಶ್‌ ರಾವ್‌ ಪಾಂಗಾಳ, ಜಿಲ್ಲಾ ಕಾಂಗ್ರೆಸ್‌ ಮುಖಂಡ ಅಶೋಕ್‌ ಕುಮಾರ್‌ ಕೊಡವೂರು, ತಾ.ಪಂ. ಸದಸ್ಯ ರಾಜೇಶ್‌ ಹೆಗ್ಡೆ, ಕಾಪು ಪುರಸಭೆಯ ಅಧ್ಯಕ್ಷೆ ಸೌಮ್ಯಾ ಎಸ್‌., ಉಪಾಧ್ಯಕ್ಷ ಎಚ್‌. ಉಸ್ಮಾನ್‌, ವಿಪಕ್ಷ ನಾಯಕ ಅರುಣ್‌ ಶೆಟ್ಟಿ ಪಾದೂರು, ಮುಖ್ಯಾಧಿಕಾರಿ ರಾಯಪ್ಪ, ಗಣ್ಯರಾದ ನಡಿಕೆರೆ ರತ್ನಾಕ‌ರ ಶೆಟ್ಟಿ, ಮಾಧವ ಆರ್‌.ಪಾಲನ್‌, ಶಿವಾಜಿ ಸುವರ್ಣ, ದೀಪಕ್‌ ಕುಮಾರ್‌ ಎರ್ಮಾಳ್‌, ವಿನಯ ಬಲ್ಲಾಳ್‌, ಅಬ್ದುಲ್‌ ಹಮೀದ್‌, ರಮೇಶ್‌ ಹೆಗ್ಡೆ, ಮೋಹನ್‌ ಬಂಗೇರ, ಗುಲಾಂ ಮಹಮ್ಮದ್‌, ಅರ್ಚನಾ ಶೆಟ್ಟಿ, ವಿವಿಧ ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷರು, ಪುರಸಭೆ ಸದಸ್ಯರು, ಕಾಪು ನಗರ ಯೋಜನಾ ಪ್ರಾಧಿಕಾರದ ಕಾರ್ಯದರ್ಶಿ ಪರಶಿವ ಮೂರ್ತಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next