Advertisement

ಕೆರೆ ಪರಿಸರ ಹಸಿರೀಕರಣ ಗುರಿ: ಖಂಡ್ರೆ

05:20 PM Aug 26, 2020 | Suhan S |

ಭಾಲ್ಕಿ: ಕೋಟ್ಯಂತರ ರೂ. ಅನುದಾನದಲ್ಲಿ ಪಟ್ಟಣದ ಕೆರೆಯನ್ನು ಅಭಿವೃದ್ಧಿಪಡಿಸಿದ್ದು, ಕೆರೆ ಸುತ್ತಲಿನ ಪರಿಸರವನ್ನು ಹಸಿರೀಕರಣ ಮಾಡುವುದು ತಮ್ಮ ಗುರಿಯಾಗಿದೆ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.

Advertisement

ಪಟ್ಟಣದ ಚನ್ನಬಸವಾಶ್ರಮ ಸಮೀಪದ ಕೆರೆ ಪರಿಸರದಲ್ಲಿ ಸೋಮವಾರ ತೆಂಗಿನ ಸಸಿಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪಟ್ಟಣದ ಜನರ ವಾಯುವಿಹಾರ, ಹಿರಿಯ ನಾಗರಿಕರ ವಿಶ್ರಾಂತಿ ಹಾಗೂ ಮಕ್ಕಳ ಮನರಂಜನೆಗಾಗಿ ಕೆರೆ ಮಾದರಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಇದೀಗ ಕೆರೆ ಪರಿಸರವನ್ನು ಸಂಪೂರ್ಣ ಹಸಿರೀಕರಣಗೊಳಿಸುವ ಉದ್ದೇಶದಿಂದ 2 ಸಾವಿರ ತೆಂಗಿನ ಸಸಿ ನೆಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಕೆರೆಯನ್ನು ಪುರಸಭೆ ವ್ಯಾಪ್ತಿಗೆ ಹಸ್ತಾಂತರಿಸಿ ಸಂರಕ್ಷಣೆಗೆ ಒತ್ತು ನೀಡಲಾಗುವುದು. ಸಾರ್ವಜನಿಕರು ಕೂಡ ಕೆರೆ ಪರಿಸರದಲ್ಲಿ ಸ್ವಚ್ಛತೆ ಕಾಪಾಡಲು ಆದ್ಯತೆ ನೀಡಬೇಕು ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಅಶೋಕ ಮಡ್ಡೆ, ಪ್ರಮುಖರಾದ ಪ್ರಕಾಶ ಮಾಶೆಟ್ಟೆ, ಸುಭಾಷ ಕಾರಾಮುಂಗೆ, ಶಶಿಧರ ಕೋಸಂಬೆ, ಕಪಿಲ್‌ ಕಲ್ಯಾಣೆ, ಟಿಂಕು ರಾಜಭವನ, ಉಪ ತಹಶೀಲ್ದಾರ್‌ ದಿಲ್‌ ರಾಜ್‌ ಪಸರಗಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next