Advertisement

ಲಾೖಲ: ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮ

02:37 PM Dec 30, 2017 | |

ಬೆಳ್ತಂಗಡಿ: ಹಸಿದವನಿಗೆ ಅನ್ನ ನೀಡುವುದು ನಿಜವಾದ ಧರ್ಮ. ಅಂತಹ ಮಹಾನ್‌ ಕೆಲಸವನ್ನು ರಾಜ್ಯದ ಕಾಂಗ್ರೆಸ್‌ ಸರಕಾರ ಅನ್ನಭಾಗ್ಯ , ಇಂದಿರಾ ಕ್ಯಾಂಟೀನ್‌ ಮೂಲಕ ಮಾಡಿದೆ ಎಂದು ಶಾಸಕ ಕೆ.ವಸಂತ ಬಂಗೇರ ಹೇಳಿದರು. ಅವರು ಲಾೖಲ ಜಂಕ್ಷನ್‌ನಲ್ಲಿ ಕಾಂಗ್ರೆಸ್‌ ಗ್ರಾಮ ಸಮಿತಿ ನೇತೃತ್ವದಲ್ಲಿ ನಡೆದ ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮ ಉದ್ಘಾಟಿಸಿ , ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಳಿಸಿ ಮಾತನಾಡಿದರು.

Advertisement

ಜ. 7 ರಂದು ಬೆಳ್ತಂಗಡಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದು ಅದನ್ನು ಯಶಸ್ವಿಗೊಳಿಸಲು ಕರೆ ನೀಡಿದರು. ಅಧ್ಯಕ್ಷತೆಯನ್ನು ನಗರ ಬ್ಲಾಕ್‌ ಕಾಂಗ್ರೆಸ್‌ನ ಅಧ್ಯಕ್ಷ ಬಿ. ರಾಜಶೇಖರ ಅಜ್ರಿ ವಹಿಸಿದ್ದರು. ಜಿ.ಪಂ. ಸದಸ್ಯ ಕೆ.ಕೆ. ಶಾಹುಲ್‌ ಹಮೀದ್‌ , ಯುವ ಕಾಂಗ್ರೆಸ್‌ ಅಧ್ಯಕ್ಷ ಅಭಿನಂದನ್‌ ಹರೀಶ್‌ ಕುಮಾರ್‌, ಎಸ್ಸಿ ಘಟಕದ ಅಧ್ಯಕ್ಷ ಬಿ.ಕೆ. ವಸಂತ್‌, ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ಬಿ. ಅಶ್ರಫ್‌ ನೆರಿಯ ಉಪಸ್ಥಿತರಿದ್ದರು.

ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತ ನವೀನ್‌ಪೂಜಾರಿ , ಆಟೋರಿಕ್ಷಾ  ಚಾಲಕ – ಮಾಲಕ ಸಂಘದ ನಗರ ಕಾರ್ಯದರ್ಶಿ ಸುರೇಶ್‌ ಪೂಜಾರಿ, ಅಶೋಕ್‌ ನಾಯ್ಕ ಲಾೖಲ, ಪುರುಷೋತ್ತಮ ಗೌಡ, ಸದಾನಂದ ಶೆಟ್ಟಿ, ಹೆ„ದರ್‌ ಪುತ್ರಬೆ„ಲ್‌, ಜಯಾನಂದ್‌ ಹಂದೆವೂರು , ರಾಮಪ್ಪ ಪುತ್ರಬೆ„ಲ್‌ ಸೇರ್ಪಡೆಯಾದರು. ಬೂತ್‌ ಸಮಿತಿಯ ಬಿ.ಎಲ್‌. ರಾಮಣ್ಣ ಪುತ್ರಬೈಲ್, ಮಹಮ್ಮದ್‌ ಆಲಿ ಕಕ್ಕೆನ, ಅಶ್ರಫ್ ಅಂಬೇಡ್ಕರ್‌ ನಗರ, ಸತೀಶ್‌ ನಿನ್ನಿಕಲ್ಲು, ಹರೀಶ್‌ ನಿನ್ನಿಕಲ್ಲು, ಸಂಕಪ್ಪ ಪುತ್ರಬೆ„ಲ್‌, ಶ್ರೀನಿವಾಸ್‌ ಅಂಬೇಡ್ಕರ್‌ ನಗರ, ಆದಂ ಕಕ್ಕೆನ ಮೊದಲಾದವರು ಉಪಸ್ಥಿತರಿದ್ದರು.
ನಾಗರಾಜ್‌ ಎಸ್‌. ಲಾೖಲ ಸ್ವಾಗತಿಸಿ , ವಸಂತ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

ರಾಜಕೀಯ ಮಾಡಿಲ್ಲ 
ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದ ಜನರ ಆಶೋತ್ತರ ಈಡೇರಿಸುವ ದೃಷ್ಟಿಯಿಂದ ಹಲವು ಕಾರ್ಯ
ಕ್ರಮ ಹಮ್ಮಿಕೊಂಡಿದೆ. ಚುನಾವಣ ಪ್ರಣಾಳಿಕೆಯಲ್ಲಿ ನೀಡಿದ 165 ಕಾರ್ಯಕ್ರಮಗಳ ಪೈಕಿ 160 ಕಾರ್ಯಕ್ರಮ ಈಡೇರಿಸಲಾಗಿದೆ. 94ಸಿ , 94 ಸಿಸಿ ಯೋಜನೆ ಬಡವರಿಗೆ ಭೂಮಿ ನೀಡುವ ಕಾರ್ಯಕ್ರಮವನ್ನು ರಾಜ್ಯ ಸರಕಾರ ಮಾಡಿದೆ. ಅಭಿವೃದ್ಧಿಯಲ್ಲಿ ಯಾವುದೇ ರಾಜಕೀಯ ಮಾಡಿಲ್ಲ.
-ವಸಂತ ಬಂಗೇರ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next