Advertisement

ಪಾಕಿಸ್ತಾನ; ಲಾಹೋರ್ ಬಾಂಬ್ ಸ್ಫೋಟಕ್ಕೆ 7 ಮಂದಿ ಬಲಿ

02:57 PM Feb 23, 2017 | Sharanya Alva |

ಲಾಹೋರ್: ಪಾಕಿಸ್ತಾನದ ಬೃಹತ್ ನಗರಿ ಎಂದೇ ಖ್ಯಾತಿ ಹೊಂದಿರುವ ಲಾಹೋರ್ ನಲ್ಲಿ ಗುರುವಾರ ಮತ್ತೆ ಉಗ್ರರು ಬಾಂಬ್ ದಾಳಿ ನಡೆಸುವ ಮೂಲಕ ಅಟ್ಟಹಾಸಗೈದಿದ್ದಾರೆ.

Advertisement

ನಗರದ ಡಿಎಚ್ ಎ ಪ್ರದೇಶದ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಸಮೀಪ ಬಾಂಬ್ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಜನರು ಗಾಯಗೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಕಟ್ಟಡದ ಮುಂಭಾಗ ನಿಲ್ಲಿಸಿದ್ದ ಕೆಲವು ವಾಹನಗಳು ಸ್ಫೋಟಕ್ಕೆ ಸುಟ್ಟು ಹೋಗಿವೆ. ಸಮೀಪದ ಕಟ್ಟಡಗಳ ಕಿಟಕಿ ಗಾಜುಗಳು ಪುಡಿ, ಪುಡಿಯಾಗಿರುವುದಾಗಿ ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next