Advertisement
ಕಟ್ಟಡ ಲೋಕಾರ್ಪಣೆ ವಿಳಂಬವಾಗುತ್ತಿರುವ ಕುರಿತು ಇತ್ತೀಚೆಗೆ ಉದಯವಾಣಿ ಪ್ರತಿನಿಧಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ| ಸವಿತಾ ಅವರಲ್ಲಿ ವಿಚಾರಿಸಿದಾಗ, “ಅಗ್ನಿಶಾಮಕ ಕ್ಲಿಯರೆನ್ಸ್ ಪ್ರಮಾಣಪತ್ರಕ್ಕಾಗಿ ಬೆಂಗಳೂರು ಕಚೇರಿಗೆ ಪತ್ರ ಬರೆಯಲಾಗಿದ್ದು, ಪ್ರಮಾಣಪತ್ರ ದೊರಕಿದ ತತ್‌ಕ್ಷಣ ಉದ್ಘಾಟನೆಯಾಗಬಹುದು’ ಎಂದಿದ್ದರು. ಆದರೆ ಕ್ಲಿಯರೆನ್ಸ್ ಪತ್ರ ತಲುಪಿಲ್ಲವಾದರೂ ಫೆ. 26ರಂದು ಆಸ್ಪತ್ರೆ ಉದ್ಘಾಟನೆಗೊಳ್ಳುತ್ತಿದೆ.
ಉದ್ಘಾಟನೆ ಮಾಡುವುದು ಸರಿಯಲ್ಲ ಎಂಬ ನಿಟ್ಟಿನಲ್ಲಿ ಉದ್ಘಾಟನೆ ಮುಂದೂಡಿಕೆಯಾಗಿತ್ತು. ಕ್ಲಿಯರೆನ್ಸ್ ಪ್ರಮಾಣಪತ್ರದ ಕುರಿತು ಐದಾರು ದಿನಗಳ ಹಿಂದಷ್ಟೇ ಬೆಂಗಳೂರು ಅಗ್ನಿಶಾಮಕ ಕಚೇರಿಯ ಅಧಿಕಾರಿ ಶಿವಕುಮಾರ್ ಅವರಲ್ಲಿ ಕೇಳಿದಾಗ ಪ್ರಮಾಣಪತ್ರ ನೀಡಲು 1 ತಿಂಗಳು ಬೇಕಾಗಬಹುದು ಎಂದಿದ್ದರು. ಇದೀಗ ಪ್ರಮಾಣಪತ್ರ ದೊರಕದಿದ್ದರೂ ಕಟ್ಟಡ ಲೋಕಾರ್ಪಣೆಗೊಳ್ಳುತ್ತಿದೆ. ಕ್ಲಿಯರೆನ್ಸ್ ಪ್ರಮಾಣ ಪತ್ರ ಸಿಗದೆ ಉದ್ಘಾಟನೆ ಮಾಡುತ್ತಿರುವ ಬಗ್ಗೆ ಸಚಿವ ಯು. ಟಿ. ಖಾದರ್ ಅವರಿಂದ ಪ್ರತಿಕ್ರಿಯೆ ಲಭ್ಯವಾಗಿಲ್ಲ.