Advertisement
ದ.ಕ., ಉಡುಪಿ, ಕಾಸರಗೋಡು, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ದಾವಣಗೆರೆ, ಚಿತ್ರದುರ್ಗ ಮುಂತಾದ ಜಿಲ್ಲೆಗಳಿಂದ ರೋಗಿಗಳು ಇಲ್ಲಿಗೆ ಚಿಕಿತ್ಸೆಗೆ ಆಗಮಿ ಸುತ್ತಿದ್ದಾರೆ. ಒಂದು ರೀತಿಯಲ್ಲಿ ಇದು ಪ್ರಾದೇಶಿಕ ಆಸ್ಪತ್ರೆ ಯಾಗಿಯೂ ಕಾರ್ಯ ನಿರ್ವಹಿಸುತ್ತಿದೆ. ಆಸ್ಪತ್ರೆಯಲ್ಲಿ ಪ್ರಸ್ತುತ ಸರಕಾ ರ ದಿಂದ ಮಂಜೂರುಗೊಂಡಂತೆ ರೋಗಿ ಗಳ ದಾಖಲು ಮಾಡಿಕೊಳ್ಳಲು ಇರುವ ಅವಕಾಶ 272.
Related Articles
ಲೇಡಿಗೋಶನ್ ಆಸ್ಪತ್ರೆಗೆ ಒಎನ್‌ಜಿಸಿ- ಎಂಆರ್‌ಪಿಎಲ್ ಒಟ್ಟು 28.9 ಕೋ.ರೂ. ವೆಚ್ಚದಲ್ಲಿ ನೂತನ ಕಟ್ಟಡ, ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ. ಹೊಸ ಕಟ್ಟಡ ಈ ವರ್ಷದ ಮಾ. 2ರಂದು ಅಧಿಕೃತವಾಗಿ ಉದ್ಘಾಟನೆಗೊಂಡಿತ್ತು. ಈಗ ಇರುವ ಹಳೆ ಕಟ್ಟಡದಲ್ಲಿ, ಹೊಸ ದಾಗಿ ನಿರ್ಮಾಣವಾಗಿರುವ ಮತ್ತು ನಿರ್ಮಾಣ ವಾಗುತ್ತಿರುವ ಎಂಸಿಎಚ್ ಕಟ್ಟಡ ದಲ್ಲಿ 500 ಹಾಸಿಗೆಗಳನ್ನು ಅಳವ ಡಿಸ ಬಹುದು. ಹೊಸ ಕಟ್ಟಡದಲ್ಲಿ ಅತ್ಯಾಧುನಿಕ ಸೌಲಭ್ಯಗಳು ಕೂಡ ಅಳವಡಿಕೆಯಾಗುತ್ತಿವೆ. ಆದುದರಿಂದ 500 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಸರ ಕಾ ರಕ್ಕೆ ಹೆಚ್ಚಿನ ಹೊರೆಯಾಗದು. ಆದರೆ ರಾಜ್ಯ ಸರಕಾರದ ಆರೋಗ್ಯ ಇಲಾಖೆ ದಾಖಲಾತಿ ಸಂಖ್ಯೆಯನ್ನು ಹೆಚ್ಚಿಸಲು ಹಿಂದೇಟು ಹಾಕುತ್ತಿದೆ.
Advertisement
60 ಹಾಸಿಗೆಗಳ ಎಂಸಿಎಚ್ ಬ್ಲಾಕ್ ನಿರ್ಮಾಣಪ್ರಸ್ತುತ ಲೇಡಿಗೊಶನ್ ಆಸ್ಪತ್ರೆಯ ಆವರಣದಲ್ಲಿ ಎಂಸಿಎಚ್ ಬ್ಲಾಕ್ ನಿರ್ಮಾಣವಾಗುತ್ತಿದೆ. ಇದು ಹಾಸಿಗೆಗಳ ಕೊರತೆ ನಿವಾರಣೆಯಲ್ಲಿ ಒಂದಷ್ಟು ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಕೇಂದ್ರ ಸರಕಾರದ ಎನ್‌ಆರ್‌ಎಚ್‌ಎಂ ಯೋಜನೆಯಡಿ 10.46 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಎಂಸಿಎಚ್ (ತಾಯಿ ಮತ್ತು ಮಗು ಆರೋಗ್ಯ ) ವಿಭಾಗ 60 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದೆ. ಸೆಲ್ಲರ್, ನೆಲಮಹಡಿ, ಒಂದನೇ ಮಹಡಿಯನ್ನು ಒಳಗೊಂಡಿದ್ದು ಒಟ್ಟು 3,989 ಚ.ಮೀ. ಸ್ಥಳಾವಕಾಶವನ್ನು ಹೊಂದಿದೆ. ಸೆಲ್ಲರ್‌ನಲ್ಲಿ ಅಡುಗೆ ಕೋಣೆ , ಔಷಧ ಮಳಿಗೆಯನ್ನು ಹೊಂದಿದ್ದು , 756 ಚದರ ಮೀ. ವಿಸ್ತೀರ್ಣವಿದೆ. ನೆಲಮಹಡಿ, ಮೊದಲ ಮಹಡಿಯಲ್ಲಿ ವಾರ್ಡ್, ಒಪಿಡಿ, ಶಸ್ತ್ರಚಿಕಿತ್ಸಾ ಕೊಠಡಿ, ಕನ್ಸಲ್ಟೆನ್ಸಿ ವಿಭಾಗಗಳಿರುತ್ತವೆ. ನಿರ್ಮಾಣಕಾರ್ಯ ಭರದಿಂದ ಸಾಗುತ್ತಿದ್ದು, ಮುಂದಿನ ವರ್ಷ ಪೂರ್ಣಗೊಂಡು ಸೇವೆಗೆ ಲಭಿಸಲಿದೆ. ಪ್ರತಿದಿನ 300 ರೋಗಿಗಳಿಗೆ ಚಿಕಿತ್ಸೆ
ಲೇಡಿಗೋಶನ್ ಆಸ್ಪತ್ರೆಯಲ್ಲಿ ಪ್ರಸ್ತುತ ರೋಗಿಗಳ ದಾಖಲು ಸಾಮರ್ಥ್ಯ 272. ಸುಮಾರು 8 ಜಿಲ್ಲೆಗಳಿಂದ ಇಲ್ಲಿಗೆ ರೋಗಿಗಳು ಚಿಕಿತ್ಸೆ ಆಗಮಿಸುತ್ತಿದ್ದು ಮಕ್ಕಳು ಸಹಿತ ಸರಾಸರಿ 300 ರೋಗಿಗಳು ಪ್ರತಿದಿನ ಚಿಕಿತ್ಸೆ ಪಡೆಯುತ್ತಾರೆ. ಆಸ್ಪತ್ರೆಯ ಪಕ್ಕದಲ್ಲೇ 60 ಬೆಡ್‌ಗಳ ಸಾಮರ್ಥ್ಯದ ಎಂಸಿಎಚ್ ( ತಾಯಿ ಮತ್ತು ಮಗು
ಆರೋಗ್ಯ ) ವಿಭಾಗ ನಿರ್ಮಾಣವಾಗುತ್ತಿದೆ.
– ಡಾ| ಸವಿತಾ,
ವೈದ್ಯಕೀಯ ಅಧೀಕ್ಷಕರು, ಲೇಡಿಗೋಶನ್ ಆಸ್ಪತ್ರೆ -ಕೇಶವ ಕುಂದರ್