ಹರೆಯಕ್ಕೆ ಕಾಲಿಟ್ಟ ತತ್ ಕ್ಷಣ ವಯಸ್ಸಿಗೆ ಮೀರಿದ ನಡವಳಿಕೆ ಮಕ್ಕಳಲ್ಲಾಗುತ್ತದೆ. ಈ ಸಂದರ್ಭದಲ್ಲಿ ಉಂಟಾಗುವ ದೈಹಿಕ, ಮಾನಸಿಕ ಬದಲಾವಣೆಗಳ ಬಗ್ಗೆ ಅರ್ಥ ಮಾಡಿಕೊಳ್ಳುವುದು, ಮಕ್ಕಳಿಗೆ ಅರ್ಥ ಮಾಡಿಸುವುದು ಹೆತ್ತವರಿಗೆ ಕಷ್ಟವಾಗುತ್ತದೆ. ಈ ನಡುವೆ ಭಾವನಾತ್ಮಕ ಸಂಬಂಧ ವಷ್ಟೇ ಅವರ ನಡುವೆ ಸೇತುವೆಯನ್ನು ಬೆಸೆಯಬಲ್ಲದು.
ಇಂತಹ ಒಂದು ಭಾವನಾತ್ಮಕ ವಿಷಯವನ್ನೇ ಎತ್ತಿ ಹಿಡಿದು ಗ್ರೇಟಾ ಗೆರ್ವಿಗ್ ನಿರ್ದೇಶಿಸಿರುವ ಚಿತ್ರ ‘ಲೇಡಿ ಬರ್ಡ್’. ತಾಯಿ ಮತ್ತು ಮಗಳ ನಡುವಿನ ಸಂಬಂಧದ ವಿಶ್ಲೇಷಣೆಯನ್ನು ನಾವಿಲ್ಲಿ ಕಾಣಬಹುದು. ಹದಿಹರೆಯದಲ್ಲಿರುವವರು ತಮ್ಮ ಹೆತ್ತವರ ಭಾವನೆಗ ಳನ್ನು
ಊಹಿಸಿಕೊಳ್ಳಲು ಎಡವುತ್ತಾರೆ ಅಥವಾ ಅದು ಅವರಿಗೆ ಅರ್ಥವಾಗುವುದು ಕಷ್ಟ. ಇಂತಹ ಸನ್ನಿವೇಶವೇ ಚಿತ್ರದ ಮೂಲ ವಸ್ತು.
ಹದಿಹರೆಯದ ಯುವಕ ಮತ್ತು ಯುವತಿಯರಲ್ಲಿ ಉಂಟಾಗುವ ಮನಸ್ಥಿಯ ಬದಲಾವಣೆ ಅವರ ಕೋಪ, ಆಸೆ, ಇಷ್ಟ, ಕಷ್ಟ, ಪ್ರೀತಿ, ಪ್ರೇಮ, ಸ್ನೇಹ ಹೀಗೆ ಎಲ್ಲವೂ ಅವರ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಆಗ ಅವರಿಗೆ ಅರ್ಥವಾಗುವುದಿಲ್ಲ. ಗೆಳೆಯ, ಶ್ರೀಮಂತ ಸ್ನೇಹಿತರು, ಅಂತಸ್ತು ಮೀರಿದ ಗುಣ ನಡತೆ, ಇವುಗಳ ಮಧ್ಯೆ ತಮ್ಮ ಕಾಲೇಜು ಜೀವನವನ್ನು ಕಳೆಯುತ್ತಾರೆ.
ಹಿರಿಯರು ಇಷ್ಟದ ಹೆಸರು ಬಿಟ್ಟು ಬೇರೆ ಫ್ಯಾಶನ್ ಪ್ರಪಂಚದಲ್ಲಿ ಮುಳುಗುತ್ತಾರೆ. ತಮ್ಮವರು, ಮನೆ, ಊರು ಬಿಟ್ಟು ಗೊತ್ತು ಗು ರಿಯಿಲ್ಲದ ನಗರಗಳತ್ತ ಮುಖ ಮಾಡುತ್ತಾರೆ. ಹೆತ್ತವರ ಸಂಕಷ್ಟಗಳ ಅರಿವಿಲ್ಲದಂತೆ ವರ್ತಿಸು ತ್ತಾರೆ.
ಕಲಿಕೆಗಿಂತ ಹೆಚ್ಚಾಗಿ ಇತರ ಚಟುವಟಿಕೆಗಳತ್ತವೇ ಅವರ ಆಸಕ್ತಿ ಇರುತ್ತದೆ. ಒಂದು ರೀತಿಯಲ್ಲಿ ಮೋಜು ಮಸ್ತಿಯ ಜೀವನವೇ ಅವರಿಗೆ ಖುಷಿ ಕೊಡುತ್ತದೆ. ಆದರೆ ಎಲ್ಲ ಮುಗಿದ ಮೇಲೆ ಅವರಿಗೆ ನೆನಪಾಗುವುದು ಹೆತ್ತವರು. ಆಗ ನೋದಯವಾಗುತ್ತದೆ. ಅಪ್ಪ, ಅಮ್ಮನೊಂದಿಗೆ ಇರಬೇಕೆಂಬ ಮನಸ್ಸುಂಟಾಗುತ್ತದೆ. ಆಗ ಬಹಳ ಸಮಯ, ಸಂದರ್ಭ ಎಲ್ಲವೂ ಬದಲಾಗಿರಬಹುದು.
ಹೆತ್ತವರು ಮತ್ತು ಮಕ್ಕಳ ಒಡನಾಟದ ಈ ಚಿತ್ರ ಬದುಕಿನ ಹಲವು ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು. ಮನೆ ಮಂದಿಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋಲು ಮಕ್ಕಳಿಗೊಂದು ಪಾಠವಾಗಬಲ್ಲದು.
ಭರತ್ ರಾಜ್ ಕರ್ತಡ್ಕ