Advertisement

Laddu ವಿವಾದ: ಮುಂದಿನ ಕ್ರಮದ ಬಗ್ಗೆ ಅರ್ಚಕರು, ತಜ್ಞರೊಂದಿಗೆ ಸಮಾಲೋಚನೆ: ಸಿಎಂ ನಾಯ್ಡು

06:19 PM Sep 21, 2024 | Team Udayavani |

ಅಮರಾವತಿ: ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನ ಕಲಬೆರಕೆ ವಿಚಾರಕ್ಕೆ ಸಂಬಂಧಿಸಿ ಮುಂದಿನ ಕ್ರಮಗಳ ಕುರಿತು ಮಠಾಧೀಶರು, ಅರ್ಚಕರು ಮತ್ತು ಇತರ ಹಿಂದೂ ಧರ್ಮದ ಉನ್ನತ ತಜ್ಞರೊಂದಿಗೆ ನಮ್ಮ ಸರಕಾರ ಸಮಾಲೋಚನೆ ನಡೆಸಲಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಶನಿವಾರ(ಸೆ21) ಹೇಳಿದ್ದಾರೆ.

Advertisement

ತಿರುಪತಿಯ ವಿಶ್ವವಿಖ್ಯಾತ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಅಧಿಕೃತ ತಿರುಮಲ ತಿರುಪತಿ ದೇವಸ್ಥಾನ (TTD) ಸಂಬಂಧಿಸಿದಂತೆ ಸಮಾಲೋಚನೆಯ ನಂತರ ಸರಕಾರ ತನ್ನ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ಮುಖ್ಯಮಂತ್ರಿ ನಾಯ್ಡು ಹೇಳಿದರು.

“ಟಿಟಿಡಿಗೆ ಸಂಬಂಧಿಸಿದಂತೆ ಮುಂದೆ ಏನು ಮಾಡಬೇಕು ಮತ್ತು ಹೇಗೆ ಮುಂದುವರಿಯಬೇಕು ಎಂದು ನಾವು ಚರ್ಚಿಸುತ್ತಿದ್ದೇವೆ. ಮಠಾಧೀಶರು, ಪುರೋಹಿತರು ಮತ್ತು ಸನಾತನ ಧರ್ಮದ ಅನುಭವಿ ವಿದ್ವಾಂಸರೊಂದಿಗೆ ಚರ್ಚಿಸಿದ ನಂತರ, ಸಂಪ್ರೋಕ್ಷಣೆ (ಆಚರಣ ಶುಚಿಗೊಳಿಸುವಿಕೆ) ಹೇಗೆ ಮಾಡಬೇಕು ಎಂದು ನಾವು ನಿರ್ಧರಿಸುತ್ತೇವೆ ಎಂದು ನಾಯ್ಡು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶತಮಾನಗಳಷ್ಟು ಹಳೆಯದಾದ ತಿರುಪತಿ ಲಡ್ಡುವಿಗೆ ಅನನ್ಯ ವೈಭವವಿದೆ, ಅನೇಕ ಜನರು ಉತ್ತಮ ಪ್ರಸಾದವನ್ನು ಮಾಡಲು ಪ್ರಯತ್ನಿಸಿದರು ಆದರೆ ಅದರಲ್ಲಿ ವಿಫಲರಾಗಿದ್ದಾರೆ. ಅಯೋಧ್ಯೆಯಲ್ಲಿಯೂ ತಿರುಮಲ ಲಡ್ಡುಗಳ ರುಚಿಯನ್ನು ತರಲು ಪ್ರಯತ್ನಿಸಿದರು.ತಯಾರಕರನ್ನೂ ಇಲ್ಲಿಂದ ಕರೆದೊಯ್ಯಲಾಯಿತು ಆದರೆ ಅದು ಸಾಧ್ಯವಾಗಲಿಲ್ಲ. ಈ ವಿಷಯವನ್ನು ಅಯೋಧ್ಯೆಯಲ್ಲಿನ ಜನರು ನನಗೆ ತಿಳಿಸಿದ್ದರು” ಎಂದು ನಾಯ್ಡು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next