Advertisement

ಲಡಾಖ್‌ಗೆ ಬೈಕ್‌ನಲ್ಲೇ ರೋಮಾಂಚನ ಯಾನ!

04:50 PM Apr 04, 2017 | Team Udayavani |

ಸಮುದ್ರ ಮಟ್ಟದಿಂದ 18,288 ಅಡಿ ಎತ್ತರದಲ್ಲಿರುವ ಅದ್ಭುತ ದಾರಿಯಲ್ಲಿ ನಮ್ಮ ಬೈಕ್‌ ಮುಂದೋಡುತ್ತಿತ್ತು. ಸುದೀರ್ಘ‌ ಬೈಕ್‌ ಟ್ರಿಪ್‌
ಆಗಿದ್ದರಿಂದ ಎಂತಹುದೇ ಅವಘಡಗಳಿಗೆ ನಾವು ಸಿದ್ದರಿರಬೇಕಿತ್ತು. ನಿರ್ಜನ ಪ್ರದೇಶಗಳನ್ನು ಹಾದು ಹೋಗಬೇಕಿದ್ದರಿಂದ ಬೈಕ್‌ ಕೆಟ್ಟರೆ ಸಣ್ಣಪುಟ್ಟ ರಿಪೇರಿ ಮಾಡುವುದನ್ನು ಕಲಿತೇ ನಾವು ಹೊರಟಿದ್ದು! 

Advertisement

ಲಡಾಖ್‌ ಪಯಣ ಜೀವನದ ದೊಡ್ಡ ಅನುಭವ. ಕಾರ್ಕಳ ಅನ್ನುವ ಪುಟ್ಟ ಊರಿನಿಂದ ಲಡಾಖ್‌ ತಲುಪಲು 7 ದಿನ ಬೇಕಾಯಿತು. ಮಹಾರಾಷ್ಟ್ರದಿಂದ ಗುಜರಾತ್‌, ರಾಜಸ್ಥಾನ, ಹರಿಯಾಣ, ಚಂಡೀಗಡ್‌, ಹಿಮಾಚಲ ಪ್ರದೇಶ, ಅಲ್ಲಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಹೋದ ಅನುಭವ ಅದ್ಬುತ. ನಾವು ದಿನಕ್ಕೆ 1000 ಕಿ.ಮೀ ನಂತೆ ದಿನಕ್ಕೊಂದು ರಾಜ್ಯವನ್ನು ಹಾಯುತ್ತಿದ್ದೆವು. ಹಿಮಾಚಲದ 
ಮನಾಲಿಗೆ 5ನೇ ದಿನ ತಲುಪಿದೆವು. ಮನಾಲಿಯಲ್ಲಿ ಒಂದು ದಿನ ರೆಸ್ಟ್‌ ಮಾಡಿ ಅಲ್ಲಿಂದ ಲಡಾಖ್‌ನ 600 ಕಿ.ಮೀ.ನ ಗುಡ್ಡ ತಲುಪಲು ಇಡೀ ಒಂದು ದಿನ ತಗುಲಿದೆ. ಈ ಸಮಯದಲ್ಲಿ ನಮಗೆ ತುಂಬಾ ಅನಾರೋಗ್ಯ ಸಮಸ್ಯೆ ಕಾಡಿತು. 

ಒಂದು ಕ್ಷಣ ಮಂಪರು, ತಲೆಸುತ್ತುವಿಕೆ ಇವೆಲ್ಲವೂ ಕಾಡಿ ಅರೆಕ್ಷಣ ತಬ್ಬಿಬ್ಟಾದೆವು. ವಾತಾವರಣವೂ ತುಂಬಾ ವಿಚಿತ್ರವಾಗಿದ್ದರಿಂದ ಅನಾರೋಗ್ಯದ ಸಮಸ್ಯೆಯೂ ಎದುರಾಯಿತು. ಈ ಸಮಯದಲ್ಲಿ ನಮ್ಮ ಸಹಾಯಕ್ಕೆ ಬಂದವರು ಮಿಲಿಟರಿ ಕ್ಯಾಂಪ್‌ನ ಯೋಧರು. ಅವರು ಎಷ್ಟೊಂದು ಸಹಾಯ ಮಾಡಿದರೆಂದರೆ ಊಟ ತಿಂಡಿ, ಸಣ್ಣ ಸಣ್ಣ ಚಿಕಿತ್ಸೆ, ಪ್ರೀತಿ ಎಲ್ಲವನ್ನೂ ನಮಗೊದಗಿಸಿದ್ದು ನಮ್ಮ
ಪುಣ್ಯ.ಅವರೇ ತಿನ್ನುವ ಊಟವನ್ನೂ ನಮಗೆ ಕೊಟ್ಟದ್ದು ಮಧುರ ಅನುಭವ. ಅದರಲ್ಲೂ ಕರ್ನಾಟಕದ ಪುಟ್ಟ ಜಾಗದಿಂದ ಬಂದ ನಮ್ಮಂಥವರಿಗೂ ಅವರು ಆತಿಥ್ಯ ನೀಡುವುದನ್ನು ಕಂಡು ಅವರ ಬಗ್ಗೆ ಅಪಾರ ಗೌರವ ಉಂಟಾಯಿತು.

ಲಡಾಖ್‌ ನಮ್ಮ ಪಯಣದ ಗುರಿಯಾಗಿತ್ತು ಒಂದು ದಿನ ಲಡಾಖ್‌ನ ಸಂತೆ ಸುತ್ತಿದೆವು. ಅಲ್ಲಿರುವ ಎಲ್ಲಾ ದೇವಾಲಯ ಸೇರಿದಂತೆ ಸುತ್ತಲಿನ ಪ್ರದೇಶಗಳನ್ನು ಸುತ್ತಿದೆವು. ಸಮುದ್ರ ಮಟ್ಟದಿಂದ 18,288 ಅಡಿ ಎತ್ತರದಲ್ಲಿರುವ ಅದ್ಭುತ ದಾರಿಯಲ್ಲಿ ನಡೆದೆವು. ಲಡಾಖ್‌ನಲ್ಲಿ ಏನೇನು ನೋಡಲು ಸಾಧ್ಯವೋ ಅವೆಲ್ಲವನ್ನೂ ನೋಡಿದೆವು. ಇಲ್ಲಿ ಒಂದು ವಿಷಯವನ್ನು ಹೇಳಲೇಬೇಕು. ಸುದೀರ್ಘ‌ ಬೈಕ್‌ ಟ್ರಿಪ್‌ ಆಗಿದ್ದರಿಂದ ಎಂತಹುದೇ ಅವಘಡಗಳಿಗೆ ನಾವು ಸಿದಟಛಿರಿರಬೇಕಿತ್ತು. ನಿರ್ಜನ  ಪ್ರದೇಶಗಳನ್ನು ಹಾದು ಹೋಗಬೇಕಿದ್ದರಿಂದ ಬೈಕ್‌ ಕೆಟ್ಟರೆ ಸಣ್ಣಪುಟ್ಟ ರಿಪೇರಿ ಮಾಡುವುದನ್ನು ಕಲಿತೇ ನಾವು ಹೊರಟಿದ್ದು. ಒಂದು ವೇಳೆ ಬೈಕ್‌ 
ಹಾಳಾದರೂ ನಾವೇ ಮೆಕ್ಯಾನಿಕ್‌ಗಳಾಗುವ ಅನಿವಾರ್ಯತೆ ಇತ್ತು. ಒಂದು ತಿಂಗಳ ಮೊದಲೇ ರೋಡ್‌ ಪ್ಲಾನ್‌ ಸಿದಟಛಿ ಪಡಿಸಿಕೊಂಡಿದ್ದೆವು. ಲಡಾಖ್‌ ಪ್ರಯಣದಲ್ಲಿ ನಾವು ಮೂವರು ಗೆಳೆಯರೂ ಕೂಡ ವಿಭಿನ್ನ ಅನುಭವವನ್ನು ನಮ್ಮದಾಗಿಸಿಕೊಂಡೆವು.

ಪಯಣದಲ್ಲಿ ಏಳುಬೀಳು ಸಹಜ. ಹೊರಟಾಗ ಪುಟಿಯುತ್ತಿದ್ದ ನಮ್ಮ ಉತ್ಸಾಹ ಮುಂದುವರಿಯುತ್ತಿದ್ದಂತೆ ಕಡಿಮೆಯಾಗುತ್ತಿತ್ತು.
ಎಂದೂ ಮುಗಿಯದ ಹಾದಿಯಲ್ಲಿ ಸಾಗಿ ಸಾಗಿ ಮನಸ್ಸಿಗೆ ಮಂಕು ಹಿಡಿಯುತ್ತಿತ್ತು. ಬೆಳಗ್ಗೆ 4 ಗಂಟೆಗೆ ಬೈಕನ್ನೇರಿದರೆ ರಾತ್ರಿ 1 ಗಂಟೆಯವರೆಗೆ ನಮ್ಮ ಪಯಣ ಸಾಗುತ್ತಿತ್ತು. ಒಟ್ಟಾರೆ ದಿನಕ್ಕೆ 14 ಗಂಟೆ ಪಯಣ. ಒಂದು ಬೈಕ್‌ನಲ್ಲಿ ಇಬ್ಬಿಬ್ಬರಂತೆ ಒಟ್ಟು ನಾಲ್ಕು ಜನ ಇದ್ದೆವು. ಪಯಣದ ನಡುವೆ ನಿದ್ದೆ ಬಂದರೆ ನಿಂತಲ್ಲೇ ಮಲಗುತ್ತಿದ್ದೆವು. ಯಾಕೆಂದರೆ ನಿದ್ದೆ ಮಾಡಿದರೆ ನಮ್ಮ ಕನಸು ನನಸಾಗುತ್ತಿರಲಿಲ್ಲ. ಹಾಗಾಗಿ ಪಯಣ ನಿರಂತರವಾಗಿತ್ತು. ಒಟ್ಟಾರೆ ಇದೊಂದು ಚೆಂದದ ಅನುಭವ. ಬರೀ ಗೂಗಲ್‌ನಲ್ಲಿ ಜಗತ್ತು
ನೋಡುವುದಕ್ಕಿಂತ ವಾಸ್ತವದಲ್ಲಿ ಪಯಣ ಮಾಡಬೇಕು. ಅದರ ಗಮ್ಮತ್ತೇ ಬೇರೆ. ಲಡಾಖ್‌ನಂತಹ ಕಣಿವೆ ಪ್ರದೇಶದಲ್ಲಿ ಪಯಣ ಮಾಡುವುದು ಕೂಡ ಸಖತ್‌ ಥ್ರಿಲ್‌ ಕೊಡುತ್ತದೆ ಎನ್ನುವ ವಿಚಾರ ಬಹುತೇಕರಿಗೆ ಗೊತ್ತಿರುತ್ತದೆ. ಆದರೆ ಅದರ ಅನುಭವ ಪದಗಳಿಗೆ ನಿಲುಕದ್ದು. ಮುಂದೆಯೂ ಬೈಕ್‌ ಟ್ರಿಪ್‌ ಹೊರಡುವ ಯೋಚನೆ ಇದೆ. ಯಾವಾಗ? ಎಲ್ಲಿಗೆ? ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಊರಿನಲ್ಲಿ ಸಮಾನ ಮನಸ್ಕ ಗೆಳೆಯರ ದೊಡ್ಡ ತಂಡ ಕಟ್ಟಿ ಮುಂದಿನ ದಿನಗಳಲ್ಲಿ ಪಯಣಕ್ಕೆ, ಮತ್ತೂಂದು ಸಾಹಸಕ್ಕೆ ಸಿದ್ದರಾಗುತ್ತೇವೆ.

Advertisement

ರಜತ್‌ ಶೆಣೈ, ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next