Advertisement

ನೀರಾವರಿ ಯೋಜನೆ ಅನುಷ್ಠಾನದಲ್ಲಿ ಇಚ್ಛಾ ಶಕ್ತಿ ಕೊರತೆ

04:04 PM Aug 09, 2022 | Team Udayavani |

ಆಳಂದ: ದೂರದೃಷ್ಟಿ ಮತ್ತು ಜನಪರ ಯೋಜನೆಗಳ ಕೈಗೆತ್ತಿಕೊಂಡಿದ್ದ ಹಿಂದಿನ ಕಾಂಗ್ರೆಸ್‌ ಸರ್ಕಾರದ ನೀರಾವರಿಯಂತ ಕಾಮಗಾರಿಗಳನ್ನು ಸಹ ಬಿಜೆಪಿ ಸರ್ಕಾರ ಕಡೆಗಣಿಸಿದೆ ಎಂದು ಆರೋಪಿಸಿದ ಮಾಜಿ ಶಾಸಕ ಬಿ.ಆರ್‌. ಪಾಟೀಲ ಅವರು, ನೀರಾವರಿ ಕೃಷಿ ಉತ್ತೇಜನದಂತ ಕಾಮಗಾರಿಗಳಲ್ಲೂ ಪೂರ್ಣಗೊಳಿಸಿದೆ ಕಡೆಗಣಿಸಿದೆ ಎಂದು ಹರಿಹಾಯ್ದರು. ಕೊರಳ್ಳಿ ಹತ್ತಿರದ ತಾಲೂಕಿನ ಜೀವನಾಡಿ ಅಮಾರ್ಜಾ ಅಣೆಕಟ್ಟು ಪೂರ್ಣವಾಗಿ ನೀರು ತುಂಬಿರುವ ಪ್ರಯುಕ್ತ ಸೋಮವಾರ ರೈತರು ಮತ್ತು ಬೆಂಬಲಿಗರೊಂದಿಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು.

Advertisement

ನಮ್ಮ ಅಕಾರವಯಲ್ಲಿ ಅಮರ್ಜಾ ಅಣೆಕಟ್ಟೆಗೆ ಭೀಮಾನದಿ ನೀರು ತರುವ ಯೋಜನೆಯ ಹಾಗೂ ಮಾರ್ಗದ 13 ಹಳ್ಳಿಯ ಕರೆಗಳಿಗೆ ನೀರು ಭರ್ಥಿ ಮಾಡುವ ಯೋಜನೆಯೂ ಸಕಾಲಕ್ಕೆ ಅನುಷ್ಠಾನ ಕೈಗೊಳ್ಳುವಲ್ಲಿ ಬಿಜೆಪಿ ಸರ್ಕಾರ ಹಿಂದೇಟು ಹಾಕಿದೆ. ಕಾಮಗಾರಿ ಆರಂಭಿಸಿ ನಾಲ್ಕು ವರ್ಷವಾದರೂ ಇದುವರೆಗೂ ಪ್ರಗತಿಕಂಡಿಲ್ಲ. ಯೋಜನೆ ಯಶಸ್ವಿಯಾದರೆ ಬೇಸಿಗೆಯಲ್ಲಿ ಕುಡಿಯುವ ನೀರು ಮತ್ತು ಕೃಷಿಗೆ ಪೂರಕವಾಗಲಿದೆ. 13 ಕೆರೆಗಳಿಗೆ ಬೇಸಿಗೆಯಲ್ಲಿ ನೀರು ಬತ್ತದೆ ಕೃಷಿ, ಜನ ಜಾನುವಾರುಗಳಿಗೆ ಅನುಕೂಲವಾಗುತ್ತಿದೆ. ಈ ಕೆಲಸವನ್ನು ಅಕಾರದಲ್ಲಿದ್ದವರು ತುರ್ತಾಗಿ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಆಳಂದ ತಾಲೂಕು ಹೆಚ್ಚಾಗಿ ಬಯಲು ಕೃಷಿ ಪ್ರದೇಶವಾಅಗಿದೆ. ಇಲ್ಲಿ ಹತ್ತಾರು ಕೆರೆ, ಗೊಕಟ್ಟೆಗಳ ನಿರ್ಮಾಣಕ್ಕೆ ಪೂರಕವಾಗಿದ್ದರು ಈ ಕೆಲಸಕ್ಕೆ ಮುಂದಾಗಿಲ್ಲ. ಕೆರೆ, ಗೋಕಟ್ಟೆಗಳ ಮೂಲಕ ರೈತರ ಜಮೀನಿಗೆ ನೀರು ಒದಗಿಸಿದರೆ ರೈತರು ತಮ್ಮ ಬೆಳೆ ಬೆಳೆದು ಆರ್ಥಿಕವಾಗಿ ಮುಂದೆ ಬರುತ್ತಾರೆ. ಸರ್ಕಾರ ಈ ಇಂಥ ಕೆಲಸಗಳಿಗೆ ಒತ್ತು ನೀಡಿದರೆ ಎಷ್ಟೇ ಅತಿವೃಷ್ಟಿ ಅನಾವೃಷ್ಟಿ ಎದುರಾದರೂ ಸಹಿತ ರೈತರಿಗೆ ತೊಂದರೆ ಆಗದು ಎಂದರು.

ನಿಸರ್ಗದಲ್ಲಿ ದೊಡ್ಡ ಶಕ್ತಿ ಅಡಗಿದೆ. ಶುದ್ಧ ನೀರು, ಗಾಳಿ ಅರಣ್ಯದ ಅವಶಕತೆ ಇದೆ. ಇಂದು ಪರಿಸರ ಅಸಮತೋಲನದಿಂದಾಗಿ ಜಾಗತೀಕ ತಾಪಮಾನ ಮತ್ತು ಪದೇ ಪದೇ ಅತಿವೃಷ್ಟಿ ಅನಾವೃಷ್ಟಿಗೆ ತುತ್ತಾಗುವಂತಾಗಿದೆ. ಅತಿವೃಷ್ಟಿ ಅನಾವೃಷ್ಟಿ ಅಗದಂತೆ ನೋಡಿಕೊಳ್ಳಲು ಪ್ರತಿಯೊಬ್ಬರೂ ಪರಿಸರದ ಸಮತೋಲನೆ ಕಾಪಾಡಲು ಮುಂದಾಗಬೇಕಾಗಿದೆ. ಸತತ ಮಳೆಯಿಂದಾಗಿ ಪ್ರಸಕ್ತ ಮುಂಗಾರಿನ ಬೆಳೆಗಳು ನಷ್ಟ ಅನುಭವಿಸಿದ ರೈತರಿಗೆ ಸರ್ಕಾರ ಪರಿಹಾರ ಪರಿಹಾರ ಒದಗಿಸಿ ಬರುವ ಹಿಂಗಾರು ಹಂಗಾಮಿನ ಬಿತ್ತನೆಗೆ ಸಹಕಾರ ನೀಡಬೇಕು ಎಂದರು.

ಜಿಪಂ ಮಾಜಿ ಸದಸ್ಯ ಸಿದ್ದರಾಮ ಪ್ಯಾಟಿ, ಕೆಪಿಸಿಸಿ ಭಾಲ್ಕಿ ಸಂಯೋಜಕ ಗುರುಶರಣ ಪಾಟೀಲ ಕೊರಳ್ಳಿ, ಮುಖಂಡರಾದ ಮಜರ್‌ ಹುಸೇನ್‌ ತಾಪಂ ಮಾಜಿ ಅಧ್ಯಕ್ಷ ಮೋಹನ್‌ಗೌಡ ಪಾಟೀಲ, ಮಲ್ಲಪ್ಪ ಹತ್ತರಕಿ, ಗಣೇಶ ಪಾಟೀಲ, ಲಿಂಗರಾಜ ಪಾಟೀಲ್‌, ರಾಜಶೇಖರ್‌ ಯಳಸಂಗಿ, ಶಂಕರರಾವ್‌ ದೇಶಮುಖ, ಲಕ್ಷಣ ಝಳಕಿ, ತಯಬ್‌ ಅಲಿ ಶೇಖ ಮಹಾಂತೇಶ್‌ ಪಾಟೀಲ್‌, ಶರಣ ಆಳಂಗಿ, ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷತೆ ಜೈಚಿತ್ರ ವೇದಶೆಟ್ಟಿ, ಸತೀಶ ಪನ್ನಶೆಟ್ಟಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next