Advertisement
ಜುಲೈ ತಿಂಗಳಲ್ಲಿ ಈ ಪ್ರಾಂತ್ಯಗಳಲ್ಲಿ ಸರಾಸರಿ ಉತ್ತಮ ಮಳೆಯಾಗುತ್ತಿತ್ತು. ಆದರೆ, ಈ ಬಾರಿಯ ಜುಲೈನಲ್ಲಿ ಅಲ್ಲಿ ಶೇ. 35ರಷ್ಟು ಮಳೆ ಮಾತ್ರ ಬಿದ್ದಿದೆ. 1935ರ ನಂತರ ಹೀಗಾಗುತ್ತಿರುವುದು ಇದೇ ಮೊದಲು ಎಂದು ತಜ್ಞರು ತಿಳಿಸಿದ್ದಾರೆ.
ಲಂಡನ್‌ನ ಜೀವನದಿಯಾಗಿರುವ ಥೇಮ್ಸ್‌ನ ಉಗಮಸ್ಥಾನ ಬತ್ತಿ ಹೋಗಿದೆ ಎಂಬ ಮತ್ತೂಂದು ಆತಂಕಕಾರಿ ವಿಚಾರವನ್ನು ಬ್ರಿಟನ್ ಹವಾಮಾನ ಇಲಾಖೆಯ ಅಧಿಕಾರಿಗಳು ಹೊರಹಾಕಿದ್ದಾರೆ. ನದಿಯ ಉಗಮ ಸ್ಥಾನವಾದ ಗ್ಲೌಸಿಸ್ಟೆರ್‌ಶೈನ್ ಪರ್ವತ ಶ್ರೇಣಿಗಳಲ್ಲಿ ಪ್ರತಿ ವರ್ಷದ ಚೈತ್ರಕಾಲದಲ್ಲಿ ಅಪಾರ ಮಳೆ ಸುರಿಯುವುದರಿಂದ ನದಿ ಮೈದುಂಬಿ ಹರಿಯುತ್ತದೆ.
Related Articles
Advertisement
ಉತ್ತರ ಧ್ರುವದಲ್ಲಿ ತೊಂದರೆ:!ಭೂಮಿಯ ಉತ್ತರ ಭಾಗದಲ್ಲಿರುವ ಆರ್ಕ್‌ಟಿಕ್ ಪ್ರದೇಶದಲ್ಲಿ ಶಾಖ, ಭೂಮಿಯ ಮಿಕ್ಕೆಲ್ಲಾ ಭಾಗಗಳಿಗಿಂತ ನಾಲ್ಕು ಪಟ್ಟು ಹೆಚ್ಚಾಗಿದೆ. 43 ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಪ್ರದೇಶದಲ್ಲಿ 2.7 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಾಗಿದೆ. ಹೀಗಾಗಿ, ಈ ಭಾಗದಲ್ಲಿರುವ ಮಂಜು ತ್ವರಿತವಾಗಿ ಕರಗಿ ಸಮುದ್ರ ಸೇರುವುದರಿಂದ ಸಮುದ್ರದ ನೀರಿನ ಮಟ್ಟ ಹೆಚ್ಚಾಗಿ, ಜಲಪ್ರಯಳದಂಥ ಅಪಾಯಗಳು ಸಂಭವಿಸುವ ಸಾಧ್ಯತೆಗಳಿವೆ ಎಂದು ತಜ್ಞರು ಹೇಳಿದ್ದಾರೆ.