Advertisement

ವರದೆ ನೀಡಿದರೂ ಸಿಗದ ಫಲ

01:53 PM Oct 15, 2019 | Team Udayavani |

ಬಂಕಾಪುರ: ಪಟ್ಟಣದ ಜನತೆಗೆ ವರದಾ ನದಿಯ ನೀರು ತಲುಪಿಸುವ ಉದ್ದೇಶದಿಂದ 35 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಜಾಕವೆಲ್‌ಗೆ ಪುರಸಭೆ ಆಡಳಿತ ಬೀಗ ಜಡೆದಿರುವುದರಿಂದ ಪಟ್ಟಣದ ಜನತೆ ಕುಡಿಯುವ ನೀರಿನಿಂದ ವಂಚಿತರಾಗುತ್ತಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ ಜಲ ಸಂಪನ್ಮೂಲ ಸಚಿವರಾಗಿದ್ದಾಗ ಪಟ್ಟಣದ ಜನತೆಗೆ ವರದಾ ನದಿಯ ನೀರು ಸರಬರಾಜು ಮಾಡುವ ಉದ್ದೇಶದಿಂದ ಚಾಲನೆ ನೀಡಲಾಗಿತ್ತು.

Advertisement

ಹಲಸೂರ ಹತ್ತಿರ ವರದಾ ನದಿ ದಡದಲ್ಲಿ ಜಾಕ್‌ವೆಲ್‌ ನಿರ್ಮಿಸಿ ಅಲ್ಲಿಂದ ನೀರನ್ನು ತವರಮೆಳ್ಳಿಹಳ್ಳಿ ಕೆರೆಗೆ ತುಂಬಿಸಿ ಅಲ್ಲಿ ನಿರ್ಮಿಸಲಾದ ನೀರು ಶುದ್ಧೀಕರಣ ಘಟಕದಿಂದ ಪೈಪ್‌ಲೈನ್‌ಗಳ ಮೂಲಕ ಬಂಕಾಪುರ ಪುರಸಭೆ ಹತ್ತಿರ ನಿರ್ಮಿಸಲಾದ ಟ್ಯಾಂಕ್‌ಗೆ ಸಿಪ್ಟ್ ಮಾಡಲಾಗಿತ್ತು. ಅಲ್ಲಿಂದ ಪಟ್ಟಣದ ಜನತೆಗೆ ನಳದ ಮೂಲಕ ಶುದ್ಧ ಕುಡಿಯುವ ನೀರನ್ನು ಪೂರೈಸುವ ಯೋಜನೆಗೆ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದರು.

ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಬೊಮ್ಮಾಯಿ ಅವರು ಪಟ್ಟಣದ ಜನತೆಗೆ ಒದಗಿಸಿದ್ದಕ್ಕೆ ಸಾರ್ವಜನಿಕ ವಲಯದಿಂದ ಅಭಿನಂದನಾ ಮಹಾಪೂರವೇ ಹರಿದು ಬಂದಿತ್ತು. ಆದರೆ ಇದು ಬಹಳ ದಿನಗಳವರೆಗೆ ಉಳಿಯಲಿಲ್ಲ. ಕೆಲವು ದಿನಗಳಕ್ಕೆ ಕಮರಿತು. ಹೊಳೆಯ ನೀರನ್ನು ಜನತೆಗೆ ಪೂರೈಸಿದ ಪುರಸಭೆ ಆಡಳಿತ ಬೇಸಿಗೆಯಲ್ಲಿ ಹೊಳೆಯ ನೀರು ಖಾಲಿಯಾಗಿದೆ ಎಂಬ ನೆ ಹೇಳಿ ನೀರು ಪೂರೈಕೆ ಸ್ಥಗಿತಗೊಳಿಸಿತ್ತು.

ಆದರೆ ಇಗ ದಾಖಲೆ ಮಳೆಯಾಗಿದ್ದು, ಹೊಳೆ, ಕೆರೆ, ಕಟ್ಟೆ, ಹಳ್ಳ, ಕೊಳ್ಳಗಳು ತುಂಬಿ ಕೊಡಿಬಿದ್ದಿವೆ. ಆದರೂ ಕೂಡಾ ಪುರಸಭೆಯವರು ಪಟ್ಟಣದ ಜನತೆಗೆ ನದಿ ನೀರನ್ನು ಪೂರೈಕೆ ಮಾಡುವಲ್ಲಿ ವಿಫಲರಾಗಿದ್ದಾರೆ. ಮಳೆಗಾಲದಲ್ಲಿ ಸಾಕಷ್ಟು ನೀರು ಸಂಗ್ರಹವಿದ್ದರೂ ಕೂಡಾ ಅದನ್ನು ಸದ್ಬಳಕೆ ಮಾಡಿಕೊಂಡು ಸಾರ್ವಜನಿಕರಿಗೆ ತಲುಪಿಸುವಲಿ ಪುರಸಭೆ ಆಡಳಿತ ವಿಫಲವಾಗಿದೆ. ಮಳೆಗಾಲದಲ್ಲಿಯೇ 10ರಿಂದ 15 ದಿನಗಳಿಗೊಮ್ಮೆ ನಳದ ನೀರು ಪುರೈಕೆ ಮಾಡುತ್ತಿರುವ ಪುರಸಭೆ ಬೇಸಿಗೆಯಲ್ಲಿ ಇನ್ನೇನು ಕಾದಿದೆ ಎಂಬ ಚಿಂತೆ ಸಾರ್ವಜನಿಕರದ್ದಾಗಿದೆ. ತವರಮೆಳ್ಳಿಹಳ್ಳಿ ಸಮೀಪ ನಿರ್ಮಿಸಲಾದ ನೀರು ಶುದ್ಧೀಕರಣ

ಘಟಕ ಅಸ್ವತ್ಛತೆಯಿಂದ ಕುಡಿದೆ. ಅಲ್ಲಲ್ಲಿ ಪಾಚಿಗಳು ಬೆಳೆದು ದುರ್ನಾತ ಬೀರುತ್ತಿದೆ. ಕೆಲಸಗಾರರಿಲ್ಲದೇ ಘಟಕಕ್ಕೆ ಬೀಗ ಜಡೆದಿರುವುದರಿಂದ ಸರಕಾರದ ಮಹತ್ತರ ಯೋಜನೆ ವಿಫಲವಾಗಲು ಕಾರಣವಾಗಿದೆ. ಕೂಡಲೇ ಸಂಬಂದಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಪಟ್ಟಣದ ಜನತೆಗೆ ವರದಾ ನದಿ ನೀರು ಪೂರೈಸಬೇಕು ಎಂಬುದು ಬಂಕಾಪುರ ನಾಗರಿಕರ ಆಶಯ.

Advertisement

 

-ಸದಾಶಿವ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next