ಕಲಬುರಗಿ: ಮಳೆ ತಾತ್ಕಾಲಿಕ ಕೊರತೆಯಲ್ಲಿ ಸಸ್ಯ ಬೆಳವಣಿಗೆಯನ್ನು ಕಾಪಾಡುವುದು ಬಹಳ ಅಗತ್ಯ ಕಾರ್ಯವಾಗಿದೆ ಎಂದು ಕೃಷಿ ವಿಜ್ಞಾನಿಗಳು ತಿಳಿಸಿದ್ದಾರೆ.
ಚಿಂಚೋಳಿ ತಾಲೂಕಿನ ಕೋಡ್ಲಿ, ಸುಂಠಾಣ, ಸುಲೆಪೇಟ, ಕೊಂಡಮ್ಮಪಲ್ಲಿ, ಪೆಂಚನಪಳ್ಳಿ, ಹೊಡೆಬೀರನಹಳ್ಳಿ, ದಸ್ತಾಪುರ, ಚಿಂಚೋಳಿ ಭಾಗಗಳಲ್ಲಿ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಸಹಭಾಗಿತ್ವದಲ್ಲಿ ಬೆಳೆ ಸ್ಥಿತಿಗತಿ ಅರಿಯಲು ಕ್ಷೇತ್ರಗಳಿಗೆ ಭೇಟಿ ನೀಡಿ ಬೆಳೆ ಪರಿಸ್ಥಿತಿ ಅವಲೋಕಿಸಿದ ವಿಜ್ಞಾನಿಗಳು ರೈತರಿಗೆ ಸೂಕ್ತ ಸಲಹೆ ನೀಡಿದರು.
ತೊಗರಿ, ಉದ್ದು, ಹೆಸರು ಮತ್ತು ಸೋಯಾಬಿನ್ 20ರಿಂದ 25 ದಿನಗಳ ಬೆಳವಣಿಗೆ ಹಂತಲ್ಲಿದೆ. ಕೆಲವು ಕಡೆ ಸೋಯಾಬಿನ್, ಹೆಸರು ಬೆಳೆಯಲ್ಲಿ ಎಲೆ ತಿನ್ನುವ ಹುಳು, ಕಾಂಡ ನುಸಿ ಭಾದೆ, ಸೋಯಾಬಿನ್‌ಗೆ ಸ್ವಲ್ಪ ಮಳೆ ಕೊರತೆಯಾಗಿರುವುದು ವಿಜ್ಞಾನಿಗಳ ಗಮನಕ್ಕೆ ಬಂತು.
ಈ ಸಂದರ್ಭದಲ್ಲಿ ಸಲಹೆ ನೀಡಿದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ| ಜಹೀರ್ ಅಹೆಮದ್, ಚಿಂಚೋಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿ ಕಾರಿ ಅಭಿಲಾಷ, ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿ ಕಾರಿ, ಗುರುಪಾದಪ್ಪಾ ಕೋರಿ, ರೈತರು ಬೆಳೆಯ ಸಾಲುಗಳಲ್ಲಿ ಕುಂಟೆಯ ನಂತರ ಎನ್‌ಪಿಕೆ ಮಿಶ್ರಿತ ಪೋಷಕಾಂಶ ಎರಡು ಗ್ರಾಂ., ಥಯೋಮಿಕ್ಸಾಂ 0.3 ಗ್ರಾಂ ಅಥವಾ ಬೇವಿನ ಎಣ್ಣೆ 2 ಮೀ. ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಎಂದರು.
ರಘುವೀರ್ ಹಾಗೂ ಕೃಷಿ ಸಂಜೀವಿನಿ ಸಂಚಾರಿ ಪ್ರಯೋಗಾಲಯ ಸಹಾಯಕರಾದ ವರುಣ, ರಾಮು ಈ ಸಂದರ್ಭದಲ್ಲಿದ್ದರು.