ಮಾಗಡಿ: ಪಟ್ಟಣದಲ್ಲಿ ಎಲ್ಲೆಂದರಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆಯಾಗುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟದಲ್ಲಿ ಪುರಸಭೆ ಪಾರ್ಕಿಂಗ್ ವ್ಯವಸ್ಥೆಗೆ ಸ್ಥಳವೇ ಗುರುತಿಸಿಲ್ಲ ಪುರಜನರ ಪಾಡಂತೂ ದೇವರೇ ಬಲ್ಲ. ಜನಪ್ರತಿನಿಧಿಗಳು ಇದ್ದರೂ ಇಲ್ಲದಂತಾಗಿದೆ. ಪಟ್ಟಣದಲ್ಲಿ ವಾಹನ ಸಂಚಾರ ಹೆಚ್ಚಾದಂತೆಲ್ಲ ವಾಹನಗಳ ನಿಲುಗಡೆಯೇ ಚಾಲಕರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಪಟ್ಟಣದಲ್ಲಿ ಪುರಸಭೆ ಎಲ್ಲೂ ವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ವಾಹನ ಸವಾರರು ಎಲ್ಲಿ ಬೇಕೆಂದರಲ್ಲಿ ವಾಹನಗಳ ನಿಲುಗಡೆ ಮಾಡುತ್ತಿರುವುದು ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
ವಾಹನಗಳಿಗೆ ಸೂಕ್ತ ಭದ್ರತೆಯೂ ಇಲ್ಲದಂತಾಗಿದೆ. ಇಲ್ಲಿನ ಜನ ಮತ್ತು ವಾಹನಗಳ ಸಂಖ್ಯೆಗೆ ಅನು ಗುಣವಾಗಿ ಸ್ಥಳಾವಕಾಶ ಇಲ್ಲದಿರುವುದೇ ಎಲ್ಲ ಸಮಸ್ಯೆಗೆ ಮೂಲ ಕಾರಣ. ಪಟ್ಟಣದ ಯಾವ ರಸ್ತೆಗಳಲ್ಲೂ ಅಧಿಕೃತ ಪಾರ್ಕಿಂಗ್ ವ್ಯವಸ್ಥೆ ಇಲ್ಲ, ವಾಹನಗಳನ್ನು ರಸ್ತೆಗಳಲ್ಲಿ, ಕೆಲವು ಕಡೆ ಪಾದಾಚಾರಿ ಮಾರ್ಗದ ಮೇಲೆಯೂ ನಿಲುಗಡೆ ಮಾಡುತ್ತಾರೆ. ಬೀದಿಬದಿ ವ್ಯಾಪಾರಿಗಳು, ತಳ್ಳುವ ಗಾಡಿಗಳ ವ್ಯಾಪಾರ ಒಂದೆಡೆ ಯಾದರೆ, ಮತ್ತೂಂದೆಡೆ ವಾಹನ ಪಾರ್ಕಿಂಗ್ ಕಾಟವಂತೂ ಹೇಳುತೀರದಾಗಿದೆ.
ಪಾದಚಾರಿಗಳ ಸಂಚಾರವೂ ಕಷ್ಟಕರವಾಗಿದೆ. ಸಂಚಾರ ವ್ಯವಸ್ಥೆಯನ್ನು ಕೇಳುವವರಿಲ್ಲ, ವೃದ್ಧರು, ಮಹಿಳೆಯರು ಮಕ್ಕಳು ರಸ್ತೆಗಳಲ್ಲಿ ನಡೆದಾಡಲು ಕಿರಿಕಿರಿಯಾಗುತ್ತಿದೆ. ಅಪಘಾತಗಳಿಗೆ ಈಡಾಗಿ ಗಾಯ ಗೊಂಡಿರುವ ಪ್ರಕರಣ ಸಾಕಷ್ಟಿವೆ. ಪಾದಾಚಾರಿ ಮಾರ್ಗದಲ್ಲೂ ಕೆಲವು ಕಡೆ ಮಳಿಗೆಗಳ ಮುಂದೆ ಎಲ್ಲೆಂದರಲ್ಲಿ ವಾಹನ ನಿಂತಿರುವುದು. ವಿಧಿ ಇಲ್ಲದೆ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಬೇಕಿದೆ. ಇನ್ನು ಮುಂದಾದರೂ ಟ್ರಾಫಿಕ್ ಸಮಸ್ಯೆಗೆ ಕಡಿ ವಾಣಕ್ಕೆ ಅಧಿಕಾರಿಗಳು ಮುಂದಾಗುತ್ತಾರಾ ಎಂದು ಕಾದು ನೋಡಬೇಕಾಗಿದೆ.
Related Articles
ನಗರದಲ್ಲಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ರಸ್ತೆಗಳೇ ವ್ಯಾಪಾರಿಗಳ ಮಾರುಕಟ್ಟೆಯಾಗಿದೆ. ಹೀಗಾಗಿ, ಪಟ್ಟಣ ಗಿಜಿಗಿಜಿಯಿಂದ ಕೂಡಿರುತ್ತದೆ. ವಾಹನ ಹಾಗೂ ಪಾದಚಾರಿಗಳ ಸಂಚಾರಕ್ಕೆ ಸಂಚಕಾರವಾಗಿದೆ. ಆದಷ್ಟು ಬೇಗ ಟ್ರಾμಕ್ ಸಮಸ್ಯೆ ಬಗೆಹರಿಸಲು ಪುರಸಭೆ ಮುಂದಾಗಬೇಕು ಎಂದು ಚಿಂತಕರಾದ ಜಯಣ್ಣ, ರಮೇಶ್ ಆಗ್ರಹಿಸಿದ್ದಾರೆ.