Advertisement

ಕಾಲೇಜುಗಳಲ್ಲಿ ಮೂಲ ಸೌಕರ್ಯ ಕೊರತೆ

12:16 PM Nov 16, 2021 | Team Udayavani |

ಕಾಳಗಿ: ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು, ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮೂಲ ಸೌಕರ್ಯದ ಕೊರತೆಯಿರುವುದರಿಂದ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಪರದಾಡುವಂತಾಗಿದೆ.

Advertisement

ಬರೋಬ್ಬರಿ ಹತ್ತು ಕೋಟಿ ರೂ. ಖರ್ಚು ಮಾಡಿ ಇಲ್ಲಿನ ಭರತನೂರ ರಸ್ತೆಯಲ್ಲಿ ಸರ್ಕಾರ ಪಾಲಿಟೆಕ್ನಿಕ್‌ ಕಾಲೇಜು ನಿರ್ಮಿಸಿ, ಕಳೆದ ಒಂದು ತಿಂಗಳ ಹಿಂದೆ ಉದ್ಘಾಟಿಸಿದೆ. ಆದರೆ, ಈ ಕಾಲೇಜಿಗೆ ಹೋಗಲು ಸೂಕ್ತ ರಸ್ತೆಯೇ ಇಲ್ಲ. ವಿದ್ಯಾರ್ಥಿಗಳು, ಸಿಬ್ಬಂದಿಗೆ ಕುಡಿಯಲು ಹಾಗೂ ಶೌಚಾಲಯಕ್ಕೆ ಬಳಸಲು ನೀರೇ ಇಲ್ಲ. ಅಭ್ಯಾಸಕ್ಕೆ ಬೇಕಾಗುವ ಪ್ರಾಯೋಗಿಕ ಸಾಮಗ್ರಿಗಳೂ ಇಲ್ಲ. ಬೃಹತ್‌ ಕಟ್ಟಡಕ್ಕೆ ರಕ್ಷಣೆ ನೀಡಲು ಸುತ್ತು ಗೋಡೆಯೇ ಇಲ್ಲ. ಹೀಗಾಗಿ ಇಲ್ಲಿನ 86 ಬೋಧಕ-ಬೋಧಕೇತರ ಸಿಬ್ಬಂದಿ, 350 ವಿದ್ಯಾರ್ಥಿಗಳು ಪರದಾಡುವಂತೆ ಆಗಿದೆ.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಯೂ ಅನೇಕ ಸಮಸ್ಯೆಗಳಿವೆ. ಕಾಲೇಜಿನಲ್ಲಿ ಶೌಚಾಲಯವಿದ್ದರೂ ಸೆಪ್ಟಿಕ್‌ ಟ್ಯಾಂಕ್‌ ಇಲ್ಲ. ಆದ್ದರಿಂದ ಈ ಶೌಚಾಲಯ ನಿರುಪಯುಕ್ತವಾಗಿದೆ. ನೀರು ಸಹ ಅವಶ್ಯಕತೆಗೆ ಬೇಕಾದಷ್ಟು ದೊರಕುತ್ತಿಲ್ಲ. ಅಲ್ಲದೇ ಶೌಚಾಲಯದ ಕಿಟಕಿ, ಬಾಗಿಲುಗಳನ್ನು ಕಿಡಿಗೇಡಿಗಳು ಹಾಳು ಮಾಡಿದ್ದು, ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳನ್ನು ಬಿಸಾಕುತ್ತಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಜಿ.ಎಸ್‌. ಮಾಲಿ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಚಂದ್ರಶೇಖರ ಪಾಟೀಲ ಅಭಿಮಾನಿಗಳಿಂದ ಕಾಶೀಯಾತ್ರೆ

ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ಕಟ್ಟಡ ಉದ್ಘಾಟನೆ ವೇಳೆ ಆಗಮಿಸಿದ ಶಾಸಕರು, ಸಂಸದರಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಪ್ರತಿದಿನ ನೀರು ಖರೀದಿಸಿ ಕುಡಿಯುತ್ತಿದ್ದೇವೆ. ಮಹೇಶ ಹಿರೇಮಠ, ವಿದ್ಯಾರ್ಥಿ, ಸರ್ಕಾರಿ ಪಾಲಿಟೆಕ್ನಿಕ್ಕಾಲೇಜು

Advertisement

-ಭೀಮರಾಯ ಕುಡ್ಡಳ್ಳಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next