ಕೊಪ್ಪಳ: ರಾಜ್ಯ ಸರ್ಕಾರವು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಎಪಿಎಂಸಿಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ. ವರ್ತಕರು, ವಹಿವಾಟಿಗೆ ಮೂಗುದಾರವೇ ಇಲ್ಲದಂತಾಗಿದ್ದು ಆದಾಯದಲ್ಲೂ ಭಾರಿ ಕುಸಿತ ಕಂಡಿದೆ. ಆಡಳಿತ ಮಂಡಳಿಗೂ ಆದಾಯ ಮೂಲ ಸೃಜನೆಗೆ ಪರ್ಯಾಯ ದಾರಿಗಳು ಕಾಣದಂತಾಗಿದೆ.
ಹೌದು. ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿತಂದ ಬಳಿಕ ಎಪಿಎಂಸಿ ಹಲ್ಲಿಲ್ಲದಹಾವಿನಂತಾಗಿದೆ ಎನ್ನುವ ಮಾತುಸಹಜವಾಗಿಯೇ ಕೇಳಿ ಬರುತ್ತಿದೆ. ಆದರೆ ರೈತರಿಗೆ ನಾವು ಮುಕ್ತ ಅವಕಾಶ ಕಲ್ಪಿಸಿದ್ದೇವೆ.ಎಲ್ಲಿ ಬೇಕಾದರೂ ಮಾರಾಟ ಮಾಡಲು ಅವಕಾಶವಿದೆ ಎಂದೆನ್ನುತ್ತಿದೆ ಸರ್ಕಾರ.
ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೊದಲುರೈತರು ಹಾಗೂ ವರ್ತಕರು ಎಪಿಎಂಸಿ ಆವರಣದಲ್ಲೇ ತಮ್ಮ ಉತ್ಪನ್ನಮಾರಾಟ ಮಾಡಲು, ಖರೀದಿಸಲುಅವಕಾಶ ಕಲ್ಪಿಸಲಾಗಿತ್ತು. ಕಾಯ್ದೆಗೆ ತಿದ್ದುಪಡಿ ತಂದ ನಂತರ ರೈತ ಹಾಗೂ ವರ್ತಕರಿಗೆ ಖರೀದಿ,ವಹಿವಾಟಿಗೆ ಮುಕ್ತ ಅವಕಾಶ ಸಿಕ್ಕಂತಾಗಿದೆ. ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಎಪಿಎಂಸಿಗಳು ತನ್ನ ಪರಿಸ್ಥಿತಿಯೂ ಅದೇ ಆಗಿದೆ. ಅಧಿಕಾರಿಗಳಿಗೆಎಪಿಎಂಸಿಗಳ ಒಳಗೆ ಮಾತ್ರ ಅಧಿಕಾರ ಮೀಸಲಿಟ್ಟುಹೊರಗೆ ಏನೇ ನಡೆದರೂ ಅಧಿಕಾರಿಗಳು ಕ್ರಮ ಕೈಗೊಳ್ಳದಂತಹ ಸ್ಥಿತಿ ಎದುರಾಗಿದೆ.
ಎಪಿಎಂಸಿ ಆದಾಯಕ್ಕೂ ಹೊಡೆತ: ಎಪಿಎಂಸಿ ಕಾಯ್ದೆ ತಿದ್ದುಪಡಿಗೂ ಮೊದಲು ವರ್ತಕರಿಂದ ಮಾರುಕಟ್ಟೆ ಶುಲ್ಕ 1.50 ರೂ. ವಸೂಲಿ ಮಾಡಲಾಗುತ್ತಿತ್ತು.ಆಗ ಕೊಪ್ಪಳ ಎಪಿಎಂಸಿಗೆ ಮಾಸಿಕ 30 ಲಕ್ಷ ರೂ. ಆದಾಯ ಬರುತ್ತಿತ್ತು. ವಾರ್ಷಿಕವಾಗಿ 3ರಿಂದ 4 ಕೋಟಿ ರೂ. ಆದಾಯ ಬರುತ್ತಿತ್ತು. ಕಳೆದ2019-20ರಲ್ಲಿ ಎಪಿಎಂಸಿಗೆ 3.73 ಕೋಟಿ ರೂ.ಆದಾಯ ಬಂದಿದೆ. ಆದರೆ ಕಾಯ್ದೆಗೆ ತಿದ್ದುಪಡಿ ಬಳಿಕ ಮಾರುಕಟ್ಟೆ ಶುಲ್ಕವನ್ನು ದಿಢೀರ್ 35 ಪೈಸೆಗೆ ಇಳಿಕೆ ಮಾಡಿದ್ದರಿಂದ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಇದನ್ನು ಮನಗಂಡ ಸರ್ಕಾರ ಮತ್ತೆ 1ರೂ. ಗೆ ಏರಿಕೆ ಮಾಡಿ ಪ್ರಸ್ತುತ ಮತ್ತೆ 60 ಪೈಸೆಗೆ ಮಾರ್ಕೆಟ್ ಸೆಸ್ ಸಂಗ್ರಹಕ್ಕೆ ಆದೇಶಿಸಿದೆ. ಇದರಿಂದ ಕಳೆದ ಆಗಸ್ಟ್ ನಿಂದ ಈ ವರ್ಷದ ಜನವರಿ ಅಂತ್ಯಕ್ಕೆ 1.31 ಕೋಟಿರೂ. ಆದಾಯ ಸಂಗ್ರಹವಾಗಿದೆ. ಅಂದರೆ ಮಾಸಿಕ 5-6 ಲಕ್ಷ ರೂ. ಆದಾಯ ಸಂಗ್ರಹವಾಗುತ್ತಿದೆ. ಇದರಿಂದ ಆಡಳಿತ ನಿರ್ವಹಣೆಗೆ ಎಪಿಎಂಸಿ ನರಳಾಡುವಂತಾಗಿವೆ.
ಅಧಿಕಾರಿ ಇಲ್ಲದಂತಾಗಿದೆ: ಮೊದಲೆಲ್ಲ ಎಲ್ಲಿಯಾದರೂ ವರ್ತಕರು ಬಿಲ್ ಇಲ್ಲದೇ ಉತ್ಪನ್ನ ಸಾಗಾಟ ಮಾಡಿದರೆ ಎಪಿಎಂಸಿ ಅಧಿಕಾರಿಗಳು ದಾಳಿ ಮಾಡಿ ದಂಡ ವಿಧಿಸಲು ಅಧಿಕಾರವಿತ್ತು.ಕಾಯ್ದೆಗೆ ತಿದ್ದುಪಡಿ ಬಳಿಕ ಅಧಿಕಾರಿಗಳು ಎಪಿಎಂಸಿಆವರಣದಲ್ಲಿ ಮಾತ್ರ ಅಂತಹ ವಾಹನಗಳಿಗೆದಂಡ ವಿಧಿಸುವ ಅಧಿಕಾರವಿದೆ. ಹೊರಗಡೆ ಬಿಲ್‌ಇಲ್ಲದೇ ವರ್ತಕರು ಉತ್ಪನ್ನ ಸಾಗಾಟ ಮಾಡಿದ್ರೂ ಅಧಿಕಾರಿಗಳು ನೋಡಿಯೂ ಸುಮ್ಮನಿರಬೇಕಾದಪರಿಸ್ಥಿತಿ ಎದುರಾಗಿದೆ. ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಬರಲ್ಲ. ಇನ್ನು ವರ್ತಕರು ಸಹ ರೈತರ ಉತ್ಪನ್ನವನ್ನು ಎಪಿಎಂಸಿ ಹೊರಗಡೆ ಖರೀದಿ ಮಾಡಿದರೆ ಮಾರುಕಟ್ಟೆ ಶುಲ್ಕ ಕಟ್ಟಬೇಕಿಲ್ಲ. ಎಪಿಎಂಸಿ ಆವರಣದಲ್ಲಿ ಖರೀದಿ ಮಾಡಿದರಷ್ಟೇ ಮಾರ್ಕೆಟ್ ಶುಲ್ಕ 60 ಪೈಸೆ ಕಟ್ಟಲು ಅವಕಾಶವಿದೆ. ಆದರೆಕೆಲವೆಡೆ ವರ್ತಕರು ಮಾರುಕಟ್ಟೆಯ ಶುಲ್ಕ ತಪ್ಪಿಸಲು ಎಪಿಎಂಸಿಯಲ್ಲೇ ರೈತರ ಉತ್ಪನ್ನ ಖರೀದಿ ಮಾಡಿದ್ದರೂನಾವು ಹೊರಗಡೆ ಖರೀದಿ ಮಾಡಿದ್ದೇವೆ ಎನ್ನುವಸಬೂಬು ನೀಡುತ್ತಿರುವುದರಿಂದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಂತಾಗಿದೆ.
ಆದಾಯ ಸೃಜನೆಗೆ ದಾರಿಯೇ ಇಲ್ಲ: ಕೊಪ್ಪಳ ಎಪಿಎಂಸಿಯಲ್ಲಿ ಆದಾಯ ಸೃಜನೆಗೆ ಪರ್ಯಾಯ ದಾರಿಯೇ ಇಲ್ಲದಂತಾಗಿದೆ. ಕೆಲವೊಂದು ಮಳಿಗೆ
ಬಾಡಿಗೆ ಬಿಟ್ಟರೆ ಮತ್ಯಾವ ಆದಾಯ ಮೂಲವೂ ಇಲ್ಲದಂತಾಗಿದ್ದು, ಸರ್ಕಾರದ ಅನುದಾನದಮೇಲೆಯೇ ಎಪಿಎಂಸಿಗಳು ಕಣ್ಣಿಡುವಂತಾಗಿದೆ.ಆದಾಯ ಕುಸಿತದ ಹಿನ್ನೆಲೆಯಲ್ಲಿ ಎಪಿಎಂಸಿಯಲ್ಲಿ ಕೆಲಸ ಮಾಡುತ್ತಿದ್ದ ಹೊರಗುತ್ತಿಗೆ ನೌಕರರು ವೇತನ ಇಲ್ಲದಂತಾಗಿ ಕೆಲಸ ಕಳೆದುಕೊಂಡಿದ್ದಾರೆ. ಎಪಿಎಂಸಿಗೂ ಇದೊಂದು ದೊಡ್ಡ ಸವಾಲಿನ ವಿಷಯವಾಗಿದೆ.
ರೈತರ ಒಡನಾಟ ಬಿಟ್ಟಿಲ್ಲ: ಎಪಿಎಂಸಿಗೆ ರೈತರ ಒಡನಾಟ ಮೊದಲಿನಂತೆ ಇದ್ದರೂ ವಹಿವಾಟಿನಲ್ಲಿ ಬದಲಾವಣೆ ಕಾಣುತ್ತಿಲ್ಲ. ಉತ್ಪನ್ನ ಕಳೆದ ವರ್ಷದಂತೆ ಈ ವರ್ಷ ಬರುತ್ತಿಲ್ಲ. ಬಂದರೂ ವರ್ತಕರು ರಾಮ-ಕೃಷ್ಣನ ಲೆಕ್ಕಮಾಡುತ್ತಿರುವುದರಿಂದ ಎಲ್ಲವೂ ಅಯೋಮಯ ಎನ್ನುವಂತಾಗಿದ್ದು, ಎಪಿಎಂಸಿಯಲ್ಲಿ ಕಸ ಒಡೆಯುವಕೂಲಿ ಕಾರ್ಮಿಕರಿಗೂ ವೇತನ ಕೊಡದಂತ ಪರಿಸ್ಥಿತಿ ಎದುರಾಗಿದೆ.
ಎಪಿಎಂಸಿಗೆ ಕಳೆದ ವರ್ಷ ಮಾರ್ಕೆಟ್ ಶುಲ್ಕ 1.50 ರೂ. ಇದ್ದಾಗ ನಮಗೆ 3.73 ಕೋಟಿ ರೂ. ಆದಾಯ ಬಂದಿತ್ತು. ಈ ವರ್ಷ ಮಾರ್ಕೆಟ್ ಶುಲ್ಕ 60 ಪೈಸೆ ಸರ್ಕಾರ ನಿಗದಿಮಾಡಿದ್ದರಿಂದ ಜನವರಿ ಅಂತ್ಯಕ್ಕೆ 1.31 ಕೋಟಿರೂ. ಆದಾಯ ಸಂಗ್ರಹವಾಗಿದೆ. ಶೇ.60ಆದಾಯ ಕುಸಿತವಾಗಿದೆ. ಇರುವ ಆದಾಯದಲ್ಲೇನಾವು ಆಡಳಿತ ನಡೆಸಬೇಕಾಗಿದೆ. ಆದಾಯಸೃಜನೆಗೆ ಪರ್ಯಾಯ ದಾರಿಗಳಿಲ್ಲ. ಸರ್ಕಾರದಆದೇಶವನ್ನು ನಾವು ಪಾಲಿಸಬೇಕಿದೆ.
– ಸಿದ್ದಯ್ಯಸ್ವಾಮಿ, ಕೊಪ್ಪಳ ಎಪಿಎಂಸಿ ಕಾರ್ಯದಶಿ
ದತ್ತು ಕಮ್ಮಾರ