Advertisement
ಕೈಕಂಬ: ಮುತ್ತೂರು ಗ್ರಾಮದ ಕಲ್ಲಿಮಾರ್‌ನಲ್ಲಿನ ಮನೆ ನಿವೇಶನದ 67 ಮಂದಿಗೆ ಹಕ್ಕು ಪತ್ರ ವಿತರಣೆಯಾಗಿ ಒಂದು ವರ್ಷವಾದರೂ ಇನ್ನು ಜಾಗ ಸಮತಟ್ಟು ಮಾಡಿಲ್ಲ. ಜಾಗವನ್ನು ಸಮತಟ್ಟು ಮಾಡಲು ಪಂಚಾಯತ್‌ಗೆ ಅನುದಾನದ ಕೊರತೆ ಎದು ರಾಗಿದೆ. ಇದು ಗುಡ್ಡ ಜಾಗವಾದ ಕಾರಣ ಹಕ್ಕುಪತ್ರ ಪಡೆದ ಫಲಾನುಭವಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ. ಇದಕ್ಕೆ ಶೀಘ್ರವೇ ಸರಕಾರ ಅನುದಾನ ಬಿಡುಗಡೆಗೊಳಿಸಿ, ಪರಿಹಾರ ನೀಡುವುದು ಅಗತ್ಯವಾಗಿದೆ.
Related Articles
Advertisement
ಕುಕ್ಕಟ್ಟೆ, ಕಲ್ಲಾಡಿ, ಮುತ್ತೂರು, ಕುಳವೂರು, ಸೂರ್‍ನಾಡು ಪ್ರದೇಶ ಶಾಲೆ ಮಕ್ಕಳು ಬಸ್ ವ್ಯವಸ್ಥೆ ಇಲ್ಲದೆ ಕಾರಣ ಮುತ್ತೂರು ಶಾಲೆಗೆ ಕಾಲ್ನಡಿಗೆಯಲ್ಲಿ ಬರುತ್ತಿದ್ದಾರೆ. ಬಸ್ ಇಲ್ಲದೇ ಶಾಲೆ ಮಕ್ಕಳು ಸುಮಾರು 6ರಿಂದ 8 ಕಿ.ಮೀ. ಕಾಲ್ನಡಿಗೆಯಲ್ಲಿ ಶಾಲೆಗೆ ಬರಬೇಕಾಗಿದೆ. ಶಾಲೆ ಸಮಯದಲ್ಲಿ ಕುಕ್ಕಟ್ಟೆ, ಕಲ್ಲಾಡಿ, ಮುತ್ತೂರು, ಕುಳವೂರು, ಸೂರ್‍ನಾಡು ಪ್ರದೇಶಗಳಿಗೆ ಸರಕಾರಿ ಅಥವಾ ಖಾಸಗಿ ಬಸ್ ವ್ಯವಸ್ಥೆ ಕಲ್ಪಿಸಬೇಕಿದೆ.
ಇತರ ಸಮಸ್ಯೆಗಳೇನು? :
- ಮುತ್ತೂರು ಶ್ಮಶಾನ ಬಳಿ ಗುಡ್ಡ ಅಗೆದಿರುವುದರಿಂದ ಶ್ಮಶಾನ ಅಪಾಯದಲ್ಲಿದೆ.
- ಮೂಲರಪಟ್ಣ ಸೇತುವೆ ಅದಷ್ಟು ಬೇಗ ಲೋಕಾರ್ಪಣೆಯಾಗಬೇಕಿದೆ.
- ತಾರೆಮಾರ್ ಸೈಟ್‌ಗೆ ಹೊಸ ರಸ್ತೆಯನ್ನು ನಿರ್ಮಿಸಬೇಕಿದೆ.
- ತಾರೆಮಾರ್ ಬೆಜ್ಜೆ ರಸ್ತೆ ನಾದುರಸ್ತಿಯಲ್ಲಿದ್ದು ಹೊಂಡಮಯವಾಗಿದೆ. ಅಲ್ಲಿ ಡಾಮರು ಕಾಮಗಾರಿಯಾಗಬೇಕಿದೆ.
- ಹೊಸ ರೇಶನ್ ಕಾರ್ಡ್ ನೋಂದಾಯಿಸಿ ಒಂದು ವರ್ಷವಾದರೂ ಹೊಸ ರೇಶನ್ ಕಾರ್ಡ್ ಇನ್ನು ಬಂದಿಲ್ಲ. ಇದರಿಂದ ಶಾಲೆ ಮಕ್ಕಳಿಗೆ ಅದಾಯ ಪ್ರಮಾಣ ಪತ್ರ, ಪಡಿತರ, ಆಯುಷ್ಮಾನ್ ಕಾರ್ಡ್, ವಿದ್ಯಾರ್ಥಿ ವೇತನ ಮೊದಲಾದವುಗಳಿಗೆ ಭಾರೀ ತೊಂದರೆಯಾಗಿದೆ.
- ಗಂಜಿಮಠ -ಒಡ್ಡೂರು – ಮುತ್ತೂರು ರಸ್ತೆ ಡಾಮರು ಕಾಮಗಾರಿ ಆಗಬೇಕಿದೆ.
- ಮುತ್ತೂರು ಗ್ರಾಮದಲ್ಲಿ ಕಾಲುವೆಯಲ್ಲಿ ಹೂಳು ತುಂಬಿದೆ. ಸಣ್ಣ ನೀರಾವರಿ ಇಲಾಖೆ ಈ ಬಗ್ಗೆ ಗಮನನೀಡಬೇಕಿದೆ.
- ಮುತ್ತೂರಿಗೆ ಮಾರುಕಟ್ಟೆ ಕಟ್ಟಡ ಇಲ್ಲ. ಇಲ್ಲಿನ ಸರಕಾರಿ ಪ್ರಾಥಮಿಕ ಶಾಲೆ ದುರಸ್ತಿ ಅಗತ್ಯ.
- ಗ್ರಾಮದಲ್ಲಿ ಗ್ರಾಮಕರಣಿಕರ ಕಚೇರಿ ಇಲ್ಲ. ಖಾಯಂ ಗ್ರಾಮ ಕರಣಿಕರ ನೇಮಕವಾಗಬೇಕಿದೆ.
- ಹೆರಿಗೆ ಅಸ್ಪತ್ರೆ, ತುರ್ತು ಸೇವೆ ನೀಡುವ ಸರಕಾರಿ ಆಸ್ಪತ್ರೆ ಅಗತ್ಯವಿದೆ.
- ಇಲ್ಲೊಂದು ಐಟಿಐ ಅಗತ್ಯವಿದೆ.
- ಕುಪ್ಪೆಪದವು ಚರ್ಚ್‌ನಿಂದ ಮುತ್ತೂರು ವರೆಗಿನ ರಸ್ತೆಗೆ ಚರಂಡಿ ಇಲ್ಲ. ಕಾಂಕ್ರೀಟ್ ಚರಂಡಿ ಆಗಬೇಕಿದೆ.
- ಬಜಪೆ ಪೊಲೀಸ್ ಠಾಣೆಯಿಂದ ಈ ಪ್ರದೇಶ ಸುಮಾರು 15 ಕಿ.ಮೀ. ದೂರದಲ್ಲಿರುವುದರಿಂದ ಸಬ್ ಪೊಲೀಸ್ ಠಾಣೆ ಅಗತ್ಯ.