Advertisement
ನಗರದ ವಾರ್ಡ್ ನಂ.2ರಲ್ಲಿ ಪೆಂಡಾರ ಗಲ್ಲಿ ಸಹಿತ ಹಲವು ಏರಿಯಾಗಳಲ್ಲಿ ಸಾವಿರಾರು ಜನರು ಟಂಟಂ, ಬೀದಿ ಬದಿ ವ್ಯಾಪಾರ, ಕುದುರೆ ಟಾಂಗಾ, ಮದುವೆ-ಮುಂಜವಿಯಲ್ಲಿ ಕುದುರೆ ಸಾರೋಟ ಹೀಗೆ ವಿವಿಧ ಕೆಲಸಗಳನ್ನೇ ನಂಬಿ ಜೀವನ ನಡೆಸುತ್ತಿದ್ದವರು, ಈಗ ಕೋವಿಡ್ 19 ಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ರಾಜ್ಯ ಸರ್ಕಾರದ ಪಡಿತರ ಆಹಾರಧಾನ್ಯ ಬಿಟ್ಟರೆ ನಮಗೆ ಯಾವ ಸೌಲಭ್ಯವೂ ದೊರೆಯುತ್ತಿಲ್ಲ ಎಂದು ಅಲ್ಲಿನ ಜನರ ವಿಡಿಯೋ ಮಾಡಿ, ಜಿಲ್ಲಾಡಳಿತಕ್ಕೆ ರವಾನಿಸಿದ್ದಾರೆ.
Related Articles
Advertisement
ಮೊದಲ ಪ್ರಕರಣ ಹೇಗಾಯ್ತು ? :ನಗರದಲ್ಲಿ ಸೋಂಕಿನಿಂದ ಮೃತಪಟ್ಟ ವೃದ್ಧನ ಸಹೋದರನಿಂದಲೇ ಕೋವಿಡ್ 19 ಇಲ್ಲಿಗೆ ಬಂದಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಅದೂ ನಿಖರವಾಗಿಲ್ಲ. ಏ.2ರಂದು 76 ವರ್ಷದ ವೃದ್ಧನಿಗೆ ಸೋಂಕು ದೃಢಪಟ್ಟಿತ್ತು. ಏ.3ರಂದು ರಾತ್ರಿ ಆತ ಮೃತಪಟ್ಟಿದ್ದ. ವೃದ್ಧನಿಗೆ ಸೊಂಕು ದೃಢಪಟ್ಟ ಬಳಿಕ ಆತನ ಪುತ್ರ, ಪುತ್ರಿ ಬೆಂಗಳೂರಿನಿಂದ ಬಂದಿದ್ದು, ಅವರ ತಪಾಸಣೆ ಮೊದಲು ಮಾಡಲಾಯಿತು. ಅವರಿಗೆ ನೆಗೆಟಿವ್ ಬಂತು. ವೃದ್ಧನ ಪತ್ನಿ ಹಾಗೂ ಸಹೋದರನಿಗೆ ಪಾಜಿಟಿವ್ ಬಂದಿದ್ದೇ ತಡ, ಜಿಲ್ಲಾಡಳಿತ ಮತ್ತಷ್ಟು ಸೀರಿಯಸ್ ಆಯಿತು. ವೃದ್ಧನಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇರಲಿಲ್ಲ. ಪತ್ನಿಯೂ ಮನೆಬಿಟ್ಟು ಹೋರ ಹೋಗಿರಲಿಲ್ಲ. ಆದರೆ, ವೃದ್ಧನ ಸಹೋದರ ಮಾ.15ರಂದು ಬಾಗಲಕೋಟೆಯಿಂದ ರೈಲು ಮೂಲಕ ಕಲಬುರಗಿಗೆ ಹೋಗಿ, ಮಾ.16ರಂದು ಬಸ್ ಮೂಲಕ ವಿಜಯಪುರಕ್ಕೆ ಬಂದು ಅಲ್ಲಿಂದ ಬಾಗಲಕೋಟೆಗೆ ಬಂದಿದ್ದ. ಮಾ.22ರ ವರೆಗೂ ಅವರ ಇಡೀ ಮನೆಯಲ್ಲಿ ಯಾವ ಸಮಸ್ಯೆಯೂ ಇರಲಿಲ್ಲ. ಮಾ.23ರಂದು ವೃದ್ಧನಿಗೆ ಕ್ರಮೇಣ ಜ್ವರ ಕಾಣಿಸಿಕೊಂಡಿತ್ತು. ಆಗ ಮೊದಲು ಆಯುರ್ವೇದ್ ಔಷಧ, ಬಳಿಕ ಖಾಸಗಿ ವೈದ್ಯರಿಗೆ ತೋರಿಸಿದ್ದರು. ಮಾ.31ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಏ.2ರಂದು ಕೊರೊನಾ ದೃಢಪಟ್ಟು, ಮಾ.3ರಂದು ರಾತ್ರಿ ಅವರ ಸಾವು, ಕೋವಿಡ್ 19 ಕ್ಕೆ ಜಿಲ್ಲೆಯಲ್ಲಿ ಮೊದಲ ಬಲಿ ಆಯಿತು. ಆದರೆ, ಈ ವೃದ್ಧನಿಗೆ ಅವರ ಸಹೋದರನಿಂದಲೇ ಈ ಸೋಂಕು ಬಂತಾ ಎಂಬುದು ಇನ್ನೂ ಖಚಿತವಾಗದೇ ಇರುವುದು ಮತ್ತಷ್ಟು ಭೀತಿ ಹೆಚ್ಚಿಸಿದೆ. ಇನ್ನು ಮುಧೋಳದಲ್ಲಿ ಧರ್ಮ ಗುರುಗೆ (ಅವರು ಡಿಸೆಂಬರ್ 23ರಂದೇ ಜಿಲ್ಲೆಗೆ ಬಂದಿದ್ದರು) ಹೇಗೆ ಸೋಂಕು ಬಂತು ಎಂಬುದೂ ಅಧಿಕೃತಗೊಂಡಿಲ್ಲ. ಹೀಗಾಗಿ ಕೋವಿಡ್ 19, ಜಿಲ್ಲೆಯ ಜನರಿಗೆ ಭೀತಿ ಹುಟ್ಟಿಸಿದೆ ಎನ್ನಲಾಗಿದೆ.
ನಗರದಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿದ್ದರಿಂದ ಜನರ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ. ವಾರ್ಡ್ ನಂ.2 ಕೂಡ ನಿಷೇಧಿತ ಪ್ರದೇಶವಾಗಿದೆ. ಅಲ್ಲಿನ ಜನರಿಗೆ ದಿನಸಿ, ತರಕಾರಿ, ಔಷಧ ಮನೆ ಮನೆಗೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಅವರು ನಾವು ನೀಡಿದ ಮೊಬೈಲ್‌ಗಳಿಗೆ ಕರೆ ಮಾಡಿ, ಹಣ ಪಾವತಿಸಿ, ತಮಗೆ ಬೇಕಾದ ವಸ್ತು ಪಡೆಯಬೇಕು. ಜಿ.ಎಸ್. ಹಿರೇಮಠ, ತಹಶೀಲ್ದಾರ್, ಬಾಗಲಕೋಟೆ
-ಶ್ರೀಶೈಲ ಕೆ. ಬಿರಾದಾರ