Advertisement

ಜಿಲ್ಲಾ ಮುಖ್ಯ ರಸ್ತೆ ಮತ್ತೆ ಹದಗೆಡುವ ಆತಂಕ

06:00 AM May 30, 2018 | Team Udayavani |

ಕೋಟ: ಎಳೆಂಟು ತಿಂಗಳ ಹಿಂದೆ ಕೋಟ್ಯಂತರ ರೂ. ವೆಚ್ಚದಲ್ಲಿ  ಅಭಿವೃದ್ಧಿಗೊಂಡ ಕೋಟ- ಗೋಳಿ ಯಂಗಡಿ ಮತ್ತು ಬ್ರಹ್ಮಾವರ- ಜನ್ನಾಡಿ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಸರಿಯಾದ ಚರಂಡಿ ನಿರ್ವಹಣೆ ಇಲ್ಲದೆ ಇರುವುದರಿಂದ ಮತ್ತೆ ಹದಗೆಡುವ ಆತಂಕ ಎದುರಾಗಿದೆ.

Advertisement

ರಸ್ತೆಯ ಮೇಲೆ ನೀರು 
ಈ ಹಿಂದೆ ಡಾಮರೀಕರಣ ಮಾಡು ವಾಗ ಸ್ವಲ್ಪ ಮಟ್ಟಿಗೆ ಚರಂಡಿ ಸರಿಪಡಿಸ ಲಾಗಿತ್ತು. ಆದರೆ ಇದೀಗ ಮತ್ತೆ ಪೊದೆಗಳು ಆವರಿಸಿ, ಹೂಳು ತುಂಬಿಕೊಂಡು ನೀರು ಹರಿಯದ ಪರಿಸ್ಥಿತಿ ಇದೆ. ಹೆಚ್ಚಿನ ಕಡೆಗಳಲ್ಲಿ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು, ರಸ್ತೆ ಹಾಳಾಗುತ್ತಿದೆ.

ಎಲ್ಲೆಲ್ಲಿ ಸಮಸ್ಯೆ? 
ಕೋಟ ಮೂರುಕೈ ಅಘೋರೇಶ್ವರ ದೇವಸ್ಥಾನದ ತಿರುವಿನಿಂದ ಸುಮಾರು ಇನ್ನೂರು ಮೀಟರ್‌ ತನಕ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯ ಮೇಲೆ ನೀರು ಹರಿಯುತ್ತದೆ ಹಾಗೂ ಸಾೖಬ್ರಕಟ್ಟೆ  ಮೆಸ್ಕಾಂ ಕಚೇರಿಯ ಎದುರು ಕೊಳಚೆ ನೀರು ಹಾಗೂ ಮಳೆ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಸಾೖಬ್ರಕಟ್ಟೆ  ಗೋ ಆಸ್ಪತ್ರೆ ಎದುರು, ವಡ್ಡರ್ಸೆ, ಬನ್ನಾಡಿ, ಶಿರಿಯಾರ, ಬಾಕೂìರು ಹೀಗೆ ಹಲವು ಕಡೆಗಳಲ್ಲಿ ಸಮಸ್ಯೆ ಇದೆ.

ಸಂಪರ್ಕಕ್ಕಾಗಿ ಚರಂಡಿ ಮುಚ್ಚಿದರು!
ರಸ್ತೆಯ ಆಸು-ಪಾಸಿನ ನಿವಾಸಿಗಳು ಹಾಗೂ ವಾಣಿಜ್ಯ ಕಟ್ಟಡದವರು ತಮ್ಮ ಮನೆ, ಕಟ್ಟಡಗಳಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಚರಂಡಿಗೆ ಮೋರಿ ಅಳವಡಿಸದೆ  ಮಣ್ಣು ಮುಚ್ಚಿ ರಸ್ತೆ ಮಾಡಿಕೊಂಡಿದ್ದರಿಂದ  ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ. ಆದ್ದರಿಂದ ಈ ರೀತಿಯ ಚಟುವಟಿಕೆ ಕಡಿವಾಣ ಅಗತ್ಯವಿದೆ.

ಕಾಮಗಾರಿ ಕೈಗೊಳ್ಳಿ
ಚರಂಡಿ ಸರಿ ಇಲ್ಲದ್ದರಿಂದ ರಸ್ತೆ ಮೇಲೆಯೇ ನೀರು ಹರಿಯುತ್ತಿದೆ. ಇದರಿಂದ ಕೋಟಿಗಟ್ಟಲೆ ರೂ. ವೆಚ್ಚದ ರಸ್ತೆ ಹಾಳಾಗಿದೆ. ಸಂಬಂಧಪಟ್ಟವರು ತತ್‌ಕ್ಷಣ ಚರಂಡಿ ಸರಿಪಡಿಸುವ ಕುರಿತು ಕ್ರಮಕೈಗೊಳ್ಳಬೇಕು.
 ಅಶೋಕ್‌ ಪ್ರಭು ಸಾೖಬ್ರಕಟ್ಟೆ,  ಸ್ಥಳೀಯರು

Advertisement

10.36 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ
ಬ್ರಹ್ಮಾವರ-ಜನ್ನಾಡಿ ರಸ್ತೆ 4.86ಕೋಟಿ ರೂ ಮತ್ತು  ಕೋಟ-ಗೋಳಿಯಂಗಡಿ ರಸ್ತೆ 5.50ಕೋಟಿ ರೂ ವೆಚ್ಚದಲ್ಲಿ ಡಾಮರೀಕರಣದ ಮೂಲಕ ಅಭಿವೃದ್ಧಿಗೊಳಿಸಲಾಗಿತ್ತು. ಆದರೆ ಇದೀಗ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಕೋಟ್ಯಂತರ ರೂ. ಕಾಮಗಾರಿ ವ್ಯರ್ಥವಾಗುವ ಸಾಧ್ಯತೆ ಇದೆ.

ಟೆಂಡರ್‌ ಆಗಿಲ್ಲ 
ಜಿಲ್ಲಾ ಮುಖ್ಯ ರಸ್ತೆಯ ಚರಂಡಿ ನಿರ್ವಹಣೆಗೆ ಇನ್ನೂ ಕೂಡ ಟೆಂಡರ್‌ ನಡೆದಿಲ್ಲ.  ತುರ್ತು ಕಾಮಗಾರಿಗಳಿದ್ದರೆ ನಿರ್ವಹಿಸುವಂತೆ ಗುತ್ತಿಗೆದಾರರಿಗೆ ತಿಳಿಸಲಾಗುವುದು. ಟೆಂಡರ್‌ ಪ್ರಕಿಯೆ ಮುಗಿದ ಮೇಲೆ ಸಂಪೂರ್ಣ ಕಾಮಗಾರಿ ನಡೆಯಲಿದೆ.
ಡಿ.ವಿ.ಹೆಗ್ಡೆ, ಸಹಾಯಕ ಅಭಿಯಂತರ ಪಿಡಬ್ಲ್ಯುಡಿ ಉಡುಪಿ

 ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next