Advertisement

40 ಹಳ್ಳಿಗಳಿಗೆ ಒಬ್ಬರೇ ಅರೆ ವೈದ್ಯರು!

04:33 PM Dec 28, 2020 | Suhan S |

ದೇವದುರ್ಗ: ತಾಲೂಕಿನ ಜಾಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಹುದ್ದೆಗಳು ಖಾಲಿ ಇದ್ದು, ಮಹಾಮಾರಿ ಕೋವಿಡ್ ರೋಗದ ಆತಂಕ ನಡುವೆ 40 ಹಳ್ಳಿಗಳಿಗೆ ಒಬ್ಬರೇ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಬಡರೋಗಿಗಳಿಗೆ ಸಂಜೀವಿನಿ ಆಗಬೇಕಾದ ಆಸ್ಪತ್ರೆ ಶಾಪ ಗ್ರಸ್ತವಾಗಿದೆ.

Advertisement

ಜಾಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿ 40ಕ್ಕೂ ಹೆಚ್ಚು ಹಳ್ಳಿಗಳು ಬರುತ್ತವೆ. ಈ ಗ್ರಾಮಗಳ ಜನರಿಗೆ ಒಬ್ಬರೇ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. 5 ಜನ ವೈದ್ಯರ ಹುದ್ದೆಯಲ್ಲಿ ಅರೆ ಸರಕಾರಿ ಗುತ್ತಿಗೆಯಓರ್ವ ವೈದ್ಯರಿದ್ದಾರೆ. ಉಳಿದ ಹುದ್ದೆ ಭರ್ತಿಗೆ ಸರಕಾರ ಮೀನಾಮೇಷ ಎಣಿಸುತ್ತಿದ್ದು, ಬಡರೋಗಿಗಳು ಆತಂಕಪಡುವಂತಾಗಿದೆ. ಹೇರುಂಡಿ, ಬಾಗೂರು, ಬೊಮ್ಮನಹಳ್ಳಿ, ಚಿಂಚೋಡಿ, ಜಾಲಹಳ್ಳಿ, ಕರಡಿಗುಡ್ಡ, ಅಮರಾಪುರು, ಲಿಂಗದಹಳ್ಳಿ, ಕಕ್ಕಲದೊಡ್ಡಿ, ಜಂಬಲದಿನ್ನಿ, ಮುಂಡರಗಿ, ಪರಾಪೂರು, ಕಮ್ಮಲದಿನ್ನಿ, ಮೇಕಲದೊಡ್ಡಿ, ಗಾಣಾಧಾಳ, ಬಿಆರ್‌.ಗುಂಡ, ಎಸ್‌.ಸಿದ್ದಪುರು, ಮುಕ್ಕನಾಳು, ಬುಂಕಲದೊಡ್ಡಿ, ಬಸಾಪುರು, ಯರಗುಡ್ಡ ಸೇರಿ 40ಕ್ಕೂ ಹಳ್ಳಿಗಳ ಬಡ ರೋಗಿಗಳು ಚಿಕಿತ್ಸೆಗೆ ಈ ಸಮುದಾಯ ಆರೋಗ್ಯ ಕೇಂದ್ರವನ್ನೇ ಅವಲಂಬಿತರಾಗಿದ್ದಾರೆ.

ಅವಧಿ ಮುಗಿದ ಎಕ್ಸರೇ ಯಂತ್ರ: ಜಾಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೂರು ತಿಂಗಳ ಹಿಂದೆ ಎಕ್ಸರೇ ಯಂತ್ರ ಕೆಟ್ಟು ಹೋಗಿದೆ. ಎಕ್ಸರೇ ಸೌಲಭ್ಯಕ್ಕಾಗಿ ರೋಗಿಗಳು ಪಟ್ಟಣಕ್ಕೆ ಬರಬೇಕಾಗಿದೆ. ಯಂತ್ರದ ಅವಧಿ 10 ವರ್ಷಕ್ಕೆ ಮುಗಿದಿದ್ದು, ಎರಡೂ¾ರು ವರ್ಷಗಳಿಂದ ಕೆಟ್ಟ ಯಂತ್ರಕ್ಕೆ ಲಕ್ಷಾಂತರ ರೂ. ವೆಚ್ಚ ಭರಿಸಲಾಗುತ್ತಿದೆ. 40ಕ್ಕೂ ಹೆಚ್ಚು ಹಳ್ಳಿಗಳ ಬಡರೋಗಿಗಳು ಎಕ್ಸರೇ ಸೌಲಭ್ಯ ಪಡೆಯಲು 18 ಕಿ.ಮೀ. ದೂರದ ದೇವದುರ್ಗ ಪಟ್ಟಣಕ್ಕೆ ಬರಬೇಕಾಗಿದೆ.

ಹುದ್ದೆಗಳು ಖಾಲಿ-ಖಾಲಿ: ಜಾಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಐದು ವೈದ್ಯರ ಹುದ್ದೆಗಳುಬಹುತೇಕ ಖಾಲಿ ಇದ್ದು, ಅರೆ ಸರಕಾರಿ ಗುತ್ತಿಗೆ ಒಬ್ಬವೈದ್ಯರೇ ರೋಗಿಗಳಿಗೆ ಸೇವೆ ನೀಡಲಾಗುತ್ತಿದೆ. 12 ಡಿ ಗ್ರೂಪ್‌ ಹುದ್ದೆಯಲ್ಲಿ 7 ಜನರಿದ್ದು, 5 ಹುದ್ದೆಗಳು ಖಾಲಿ ಇವೆ. ಹೆರಿಗೆ ವೈದ್ಯರು ಇಲ್ಲದೇ ಇರುವ ಹಿನ್ನೆಲೆ ಸ್ಟಾರ್ಪ್‌ ನರ್ಸ್‌ಗಳೇ ಗರ್ಭಿಣಿಯರಿಗೆ ಚಿಕಿತ್ಸೆ ನೀಡುತ್ತಿದ್ದು, ಪ್ರಾಣದ ಜತೆ ಚೆಲ್ಲಾಟವಾಡುತ್ತಿದ್ದಾರೆ.

ಅವ್ಯವಸ್ಥೆ ಶೌಚಾಲಯ: ಆರೋಗ್ಯ ಕುರಿತುಆರೋಗ್ಯ ಇಲಾಖೆ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸಮುದಾಯ ಆರೋಗ್ಯ ಕೇಂದ್ರದಲ್ಲೇ ಶೌಚಾಲಯ ಅವ್ಯವಸ್ಥೆಗೊಂಡಿದೆ. ಪುರುಷ ಶೌಚಾಲಯಕ್ಕೆ ಬೀಗ ಜಡಿಯಲಾಗಿದ್ದು, ಮಹಿಳೆಯರ ಶೌಚಾಲಯವೇ ಸಾಮೂಹಿಕವಾಗಿ ಬಳಕೆ ನಡೆದಿದೆ. 30 ಹಾಸಿಗೆ ಆಸ್ಪತ್ರೆ ಹಲವು ಸಮಸ್ಯೆ ಮಧ್ಯೆ ಘನಘೋರ ನರಕ ಎನಿಸಿದೆ. ಇನ್ನಾದರೂ ಇಲ್ಲಿನ ಸಮಸ್ಯೆ ಕುರಿತು ಸ್ಥಳೀಯ ಜನಪತ್ರಿನಿಧಿಗಳು ಗಮನ ಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

ಕೆಲ ವೈದ್ಯರ ಹುದ್ದೆಗಳ ಖಾಲಿ ಇದ್ದು, ನಿಯೋಜನೆಗೊಂಡ ವೈದ್ಯರು ಸೇವೆ ನೀಡಲಾಗುತ್ತಿದೆ. ಎಕ್ಸರೇ ಕೆಟ್ಟು ಹೋಗಿದ್ದು, ದುರಸ್ತಿಗೆ ಕ್ರಮವಹಿಸಲಾಗುತ್ತದೆ.  –ಡಾ| ಬನದೇಶ್ವರ, ತಾಲೂಕು ಆರೋಗ್ಯಾಧಿಕಾರಿ

 

-ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next