Advertisement

ಸರ್ಕಾರಿ ಶಾಲೆ ಎಂದರೇಕೆ ನಿರ್ಲಕ್ಷ್ಯ?

06:48 PM Nov 21, 2020 | Suhan S |

ಅಫಜಲಪುರ: ತಾಲೂಕಿನ ಸುಕ್ಷೇತ್ರ ಘತ್ತರಗಿ ಗ್ರಾಮದಲ್ಲೊಂದು ಸರ್ಕಾರಿ ಶಾಲೆಯಿದ್ದು,ದಾಖಲಾತಿ ಚೆನ್ನಾಗಿದೆ, ಶಿಕ್ಷಕರು ಇದ್ದಾರೆ. ಆದರೆ ಸರಿಯಾದ ಕೋಣೆ, ಶೌಚಾಲಯ, ಆವರಣವಿಲ್ಲದೇ ವಿದ್ಯಾರ್ಥಿಗಳು ಪರದಾಡುವಂತೆ ಆಗಿದೆ.

Advertisement

ತಾಲೂಕಿನ ಸುಕ್ಷೇತ್ರ ಘತ್ತರಗಿಗ್ರಾಮದಲ್ಲಿರುವ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆಯಲ್ಲಿ ಸಮಸ್ಯೆಗಳುತಾಂಡವವಾಡುತ್ತಿವೆ. ಶಾಲೆ ಕಟ್ಟಡಹಳೆಯದಾಗಿದ್ದು, ಮೇಲ್ಛಾವಣಿ ಸೋರುತ್ತಿದೆ. 1958ರಲ್ಲಿ ನಿರ್ಮಾಣವಾದ ಶಾಲೆಗೆ ಕಾಯಕಲ್ಪ ಬೇಕಾಗಿದೆ. ಗೋಡೆ ಗಟ್ಟಿ ಮುಟ್ಟಾಗಿದೆ, ಮೇಲ್ಛಾವಣಿ ಮಳೆಗಾಲದಲ್ಲಿ ತೊಟ್ಟಿಕ್ಕುತ್ತಿದೆ. 1ರಿಂದ 8 ನೇ ತರಗತಿ ವರೆಗೆ ಈ ಶಾಲೆಯಲ್ಲಿ 10 ಶಿಕ್ಷಕರಿದ್ದು, 240 ಮಕ್ಕಳು ವ್ಯಾಸಾಂಗ ಮಾಡುತ್ತಿದ್ದಾರೆ. 10 ಕೊಣೆಗಳಿದ್ದು, ಎರಡು ಕೋಣೆಗಳು ಉಪಯೋಗಕ್ಕೆ ಬಾರದಂತಾಗಿವೆ. ಉಳಿದ ಎಂಟು ಕೋಣೆಗಳು ಮಳೆಗಾಲದಲ್ಲಿ ಸೋರುತ್ತಿವೆ.

ಶೌಚಾಲಯ ಸಮಸ್ಯೆ: 240 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುವ ಶಾಲೆಯಲ್ಲಿ ಶೌಚಾಲಯ ಇದ್ದೂ ಇಲ್ಲದಂತಿದೆ. ಇದರಿಂದ ವಿದ್ಯಾರ್ಥಿನಿಯರು, ಮಹಿಳಾ ಶಿಕ್ಷಕಿಯರು ಪರದಾಡುವಂತಾಗಿದೆ.

ಇದನ್ನೂ ಓದಿ : ಡ್ರಗ್ಸ್ ಪ್ರಕರಣ: ಹಾಸ್ಯ ನಟಿ ಭಾರ್ತಿ ಸಿಂಗ್ ನಿವಾಸದ ಮೇಲೆ ಎನ್ ಸಿಬಿ ದಾಳಿ

ಶಿಕ್ಷಕರ ಸ್ವಂತ ಹಣದಿಂದ ಮೇಲ್ಛಾವಣಿ: ಶಾಲೆಯ ಶಿಕ್ಷಕರ ಸ್ವಂತ 80 ಸಾವಿರ ರೂ., ಸರ್ಕಾರದ 15 ಸಾವಿರ ರೂ. ಅನುದಾನ, 11 ಸಾವಿರ ರೂ. ನಿರ್ವಹಣೆ ವೆಚ್ಚ, ಶಿಕ್ಷಣ ಇಲಾಖೆಯಿಂದ 9615 ರೂ. ಸೇರಿಸಿ ಕಚೇರಿಯ ಮೇಲ್ಛಾವಣಿ ಹಾಕಿಸಿ, ಇನ್ನಿತರ ಕೆಲಸಗಳನ್ನು ಮಾಡಿಸಲಾಗಿದೆ.

Advertisement

ಶಾಲೆಯ ಮೇಲ್ಛಾವಣಿ ಇನ್ನೂ ದುರಸ್ತಿಯಾಗಬೇಕು. ಕಾಂಪೌಂಡ್‌ ಗೋಡೆ ನಿರ್ಮಾಣವಾಗಬೇಕು, ಶೌಚಾಲಯ ಕಟ್ಟಡವಾಗಬೇಕು, ಸ್ಮಾರ್ಟ್‌ ಕ್ಲಾಸ್‌ ಆಗಬೇಕು. ಸ್ಮಾರ್ಟ್‌ ಕ್ಲಾಸ್‌ಗೆ ಇದ್ದ ಹಣ ಕಚೇರಿ ದುರಸ್ತಿಗೆ ಬಳಸಿದ್ದೇವೆ. ಇದಕ್ಕೆ ಶಿಕ್ಷಕರು ಕೈ ಜೋಡಿಸಿದ್ದಾರೆ. ಬರುವ ದಿನಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ ಬೇಕೆಂದು ಸಮನ್ವಯಾಧಿಕಾರಿ ಸುಧಾಕರ ನಾಯಕ್‌ ಗಮನಕ್ಕೆ ತಂದಿದ್ದೇವೆ. ಎಂ.ಡಿ ನೂರುದ್ದಿನ್‌, ಮುಖ್ಯಶಿಕ್ಷಕ

ಘತ್ತರಗಿ ಶಾಲೆ ಶೌಚಾಲಯ ಸಮಸ್ಯೆ ಗಮನಕ್ಕೆ ಬಂದಿದೆ. ಮುಖ್ಯಶಿಕ್ಷಕ, ಬಿಇಒ ಜತೆ ಚರ್ಚಿಸಿ ಶೀಘ್ರ ಶೌಚಾಲಯ ಕಟ್ಟಿಸುವ ವ್ಯವಸ್ಥೆ ಮಾಡಲಾಗುವುದು. ಡಾ| ಆಕಾಶ, ಐಎಎಸ್‌ ಅಧಿಕಾರಿ, ತಾ.ಪಂ

ಶಾಲೆ ಮೇಲ್ಛಾವಣಿ ದುರಸ್ತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಂದ ಕೂಡಲೇ ದುರಸ್ತಿ ಮಾಡಲಾಗುತ್ತದೆ. ಶೌಚಾಲಯನಿರ್ಮಿಸಲಾಗುತ್ತದೆ. ಘತ್ತರಗಿ ಶಾಲೆ ಮಾದರಿಯಾಗಲಿದೆ. ಚಿತ್ರಶೇಖರ ದೇಗಲಮಡಿ, ಬಿಇಒ

 

ಮಲ್ಲಿಕಾರ್ಜುನ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next