ಚಿಕ್ಕಬಳ್ಳಾಪುರ: ಕೋವಿಡ್ ಸೋಂಕು ನಿಯಂತ್ರಿಸಲು ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಷರತ್ತುಗಳನ್ನು ವಿಧಿಸಿ ಚಲನಚಿತ್ರ ಮಂದಿರಗಳನ್ನು ಕಾರ್ಯಾರಂಭಿಸಲು ಅ.15ರಿಂದ ಅವಕಾಶ ಕಲ್ಪಿಸಲಾಗಿತ್ತು. ಆದರೆ ಸಿನಿ ಪ್ರಿಯರಿಲ್ಲದೇ ಚಿತ್ರ ಮಂದಿರಗಳು ಭಣಭಣ ಎನ್ನುತ್ತಿವೆ.
ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಚಿತ್ರ ಮಂದಿರಗಳಿದ್ದರೂ ಸಹ ಕೆಲವೊಂದು ಚಿತ್ರ ಮಂದಿರಗಳಲ್ಲಿ ಕೋವಿಡ್ ಸೋಂಕಿನ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಚಿತ್ರಪ್ರದರ್ಶನ ಆರಂಭಿಸಿದರೂ ಸಹ ಸಿನಿಮಾ ಪ್ರಿಯರು ಚಿತ್ರಮಂದಿರಗಳತ್ತ ಬರುತ್ತಿಲ್ಲ. ಚಿಕ್ಕಬಳ್ಳಾಪುರ ನಗರದ ಬಾಲಾಜಿ ಚಿತ್ರಮಂದಿರ ತೆರೆದು ಚಿತ್ರ ಪ್ರದರ್ಶನ ನಡೆಯುತ್ತಿದ್ದರೂ ಸಹ ನಿರೀಕ್ಷಿತ ಪ್ರಮಾಣದಲ್ಲಿ ಸಿನಿ ಪ್ರಿಯರ ದರ್ಶನ ಇಲ್ಲದಂತಾಗಿದೆ.
ಚಿತ್ರಮಂದಿರದಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಗೆ ವೇತನ ಸೇರಿದಂತೆ ನಿರ್ವಹಣೆಗೆ ತೊಂದರೆಯುಂಟಾಗುತ್ತಿದೆ. ಸಿನಿಪ್ರಿಯರ ನಿರಾಸಕ್ತಿಯಿಂದ ಈಗಾಗಲೆ ಚಿತ್ರಮಂದಿರಗಳ ನಿರ್ವಹಣೆ ಮಾಡಲು ಕಷ್ಟ ಎದುರಿಸುವಂತಹ ವಾತಾವರಣ ನಿರ್ಮಾಣವಾಗಿದ್ದು, ಕೆಲವರು ಮುಂದಿನ ವರ್ಷ ಜನವರಿ ತನಕ ಚಿತ್ರಮಂದಿರಗಳನ್ನು ಮುಚ್ಚಿ ನಂತರ ತೆರೆಯಲು ಚಿಂತನೆ ಮಾಡಿರುವ ಬಗ್ಗೆ ತಿಳಿದು ಬಂದಿದೆ.
ತಾಲೂಕಿನ ಚಿತ್ರಮಂದಿರದ ಮಾಲೀಕರು ಕೋವಿಡ್ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತರಾಗಿ ಚಿತ್ರಮಂದಿರಗಳನ್ನು ತೆರೆಯಲು ಹಿಂಜರಿಯುತ್ತಿದ್ದಾರೆ.
ಚಿತ್ರಮಂದಿರದಲ್ಲಿ ಟಿಕೆಟ್ ಕೊಡುವವರು ಮತ್ತು ಸ್ವೀಕರಿಸುವ 4 ಮಂದಿ ಸೇರಿದಂತೆ 8 ಜನಕೆಲಸ ನಿರ್ವಹಿಸುತ್ತಿದ್ದೇವೆ.ಪ್ರತಿನಿತ್ಯ 4 ಶೋಗಳು ನಡೆಸಿದರೂ ಸಹಕನಿಷ್ಟ 4 ಸಾವಿರ ರೂ. ಸಂದಾಯವಾ ಗುತ್ತಿಲ್ಲ. ಪ್ರತಿನಿತ್ಯ ಕನಿಷ್ಠ 10 ಸಾವಿರ ರೂ.ನಿರ್ವಹಣೆ ಖರ್ಚು ಬರುತ್ತದೆ. ನಷ್ಟ ಅನುಭವಿಸಿ ಚಿತ್ರಮಂದಿರ ನಡೆಸುವುದು ಹೊರೆಯಾಗಿದೆ.
– ವೇಣುಗೋಪಾಲ್, ವ್ಯವಸ್ಥಾಪಕರು, ಬಾಲಾಜಿ ಚಿತ್ರಮಂದಿರ, ಚಿಕ್ಕಬಳ್ಳಾಪುರ