Advertisement

ಬ್ರಿಟನ್‌ ಸಚಿವೆ ವಿರುದ್ಧ ನೀರಜ್‌ ಪಾಟೀಲ್‌ ಸ್ಪರ್ಧೆ

01:05 AM May 12, 2017 | Team Udayavani |

ಲಂಡನ್‌: ಜೂ.8ರಂದು ನಡೆಯಲಿರುವ ನೈಋತ್ಯ ಲಂಡನ್‌ ಚುನಾವಣೆಗೆ ಲೇಬರ್‌ ಪಕ್ಷದಿಂದ ಕನ್ನಡಿಗ ನೀರಜ್‌ ಪಾಟೀಲ್‌ ಸ್ಪರ್ಧಿಸಲಿದ್ದಾರೆ. ನೀರಜ್‌ ಪಾಟೀಲ್‌ ಅವರ ಹೆಸರನ್ನು ಲೇಬರ್‌ ಪಕ್ಷ ಅಂತಿಮಗೊಳಿಸಿದೆ. ಪಾಟೀಲ್‌ ಅವರು ಕನ್ಸರ್ವೇಟಿವ್‌ ಪಕ್ಷದವರಾದ ಮತ್ತು ಈಗಿನ ಬ್ರಿಟನ್‌ ಶಿಕ್ಷಣ ಸಚಿವೆ ಜಸ್ಟಿನ್‌ ಗ್ರೀನಿಂಗ್‌ ಅವರ ವಿರುದ್ಧ ಸ್ಪರ್ಧಿಸಲಿದ್ದಾರೆ. ನೀರಜ್‌ ಪಾಟೀಲ್‌ ಅವರು ಲಂಡನ್‌ನ ಮಾಜಿ ಮೇಯರ್‌ ಆಗಿದ್ದು, ಮೂಲತಃ ಕರ್ನಾಟಕದ ಗುಲ್ಬರ್ಗದವರು. ವೈದ್ಯರಾಗಿರುವ ನೀರಜ್‌ ಪಾಟೀಲ್‌ ಅಪಘಾತ ಮತ್ತು ತುರ್ತು ಚಿಕಿತ್ಸೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕಳೆದ 15 ವರ್ಷಗಳಲ್ಲಿ ಬ್ರಿಟನ್‌ನ 41 ಆಸ್ಪತ್ರೆಗಳಲ್ಲಿ ರಾಷ್ಟ್ರೀಯ ಆರೋಗ್ಯ ಸೇವೆ ಅಡಿ ಸೇವೆ ಸಲ್ಲಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next