Advertisement

Katpadi: ಕುಡಿತದ ಅಮಲಿನಲ್ಲಿ ಕಾರ್ಮಿಕ ಸಾವು

08:40 PM Jun 13, 2024 | Team Udayavani |

ಕಾಪು: ವಿಪರೀತ ಕುಡಿತದ ಚಟ ಹೊಂದಿದ್ದ ಕಾರ್ಮಿಕನೋರ್ವ ಕುಡಿತದ ಅಮಲಿನಲ್ಲೇ ಮೃತಪಟ್ಟ ಘಟನೆ ಜೂ. 11ರಂದು ನಡೆದಿದೆ.

Advertisement

ಕಟಪಾಡಿ ಪರಿಸರದಲ್ಲಿ ಕೆಲಸ ಮಾಡುತ್ತಿದ್ದ ಚಂದಪ್ಪ (51) ಮೃತ ಕಾರ್ಮಿಕ.

ಕಳೆದ ಹದಿನೈದು ವರ್ಷಗಳಿಂದ ಉಡುಪಿ ಕಟಪಾಡಿ ಪರಿಸರದಲ್ಲಿ ಕೆಲಸ ಮಾಡುತ್ತಿರುವ ಚಂದಪ್ಪ ವಿಪರೀತ ಮದ್ಯ ಸೇವನೆ ಮಾಡಿ ಕಟಪಾಡಿ ಮಂತ್ರ ಹೋಟೇಲ್‌ನ ಎದುರಿನಲ್ಲಿ ಬಿದ್ದಿದ್ದು, ಸ್ಥಳೀಯರು ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಪರೀಕ್ಷಿಸಿದ ವೈದ್ಯರು ಚಂದಪ್ಪ ಮೃತಪಟ್ಟಿರುವುದಾಗಿ ತಿಳಿಸಿದ್ದರು.

ಮೃತರ ಪತ್ನಿ ಶಕುಂತಲಾ ನೀಡಿರುವ ದೂರಿನಂತೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next