ಶಿಡ್ಲಘಟ್ಟ: ವಿದ್ಯಾರ್ಥಿಗಳಲ್ಲಿ ವೈಜ್ಞಾನಿ ಹಾಗೂ ತಂತ್ರಜ್ಞಾನದ ಮನೋಭಾವ ಬೆಳೆಸಲು ಲ್ಯಾಬ್ ಸಹಕಾರಿ ಎಂದು ಮಾಜಿ ಸಚಿವ ಮುನಿಯಪ್ಪ ಹೇಳಿದರು.
ತಾಲೂಕಿನ ಭಕ್ತರಹಳ್ಳಿಯ ಬಿಎಂವಿವಿದ್ಯಾ ಸಂಸ್ಥೆಯಲ್ಲಿ ಕೇಂದ್ರದ ನೀತಿ ಆಯೋಗದ ನೆರವಿನಿಂದ ಸ್ಥಾಪಿಸಿರುವ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟಿಸಿ ಮಾತನಾಡಿ, ನಗರಕ್ಕಿಂತಲೂ ಗ್ರಾಮೀಣ ಪ್ರದೇಶದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು, ಅವರಿಗೆ ಸೂಕ್ತ ಮಾರ್ಗದರ್ಶನ, ಪ್ರೋತ್ಸಾಹ ನೀಡಿ ಅವರಲ್ಲಿರುವ ಪ್ರತಿಭೆಅನಾವರಣಗೊಳಿಸಬೇಕು ಎಂದರು.
ಜಿಲ್ಲೆಗೆ ಸಂದ ಗೌರವ: ರಾಸಾಯನಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಪ್ರೊ.ಆರ್.ವೇಣುಗೋಪಾಲ್ ಮಾತನಾಡಿ, ವೈಜ್ಞಾನಿಕ ಸಂಶೋಧನೆ ಮತ್ತು ಪ್ರತಿಭಾವಂತವಿಜ್ಞಾನಿಗಳನ್ನು ವಿಶ್ವಕ್ಕೆ ನೀಡಿದ ಖ್ಯಾತಿ ಈಜಿಲ್ಲೆಗೆ ಸಲ್ಲುತ್ತದೆ. ಜಿಲ್ಲೆಯ ಸರ್‌ಎಂವಿಶ್ವೇಶ್ವರಯ್ಯ ಹಾಗೂ ಸಿಎನ್‌ಆರ್‌ರಾವ್ ಅವರಿಗೆ ದೇಶದ ಅತ್ಯುನ್ನತ ಪ್ರಶಸ್ತಿಬಂದಿರುವುದು ಜಿಲ್ಲೆಗೆ ಸಂದ ಗೌರವ ಎಂದು ಹೇಳಿದರು.
ಅವಕಾಶ ಬಳಕೆ ಮಾಡಿಕೊಳ್ಳಿ: ಬಿಎಂವಿವಿದ್ಯಾ ಸಂಸ್ಥೆ ಕಾರ್ಯದರ್ಶಿ ಎಲ್.ಕಾಳಪ್ಪಮಾತನಾಡಿ, ಭಕ್ತರಹಳ್ಳಿ ಗ್ರಾಮದಲ್ಲಿಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದಕೇಂದ್ರದ ನೀತಿ ಆಯೋಗ ಅಟಲ್‌ಟಿಂಕರಿಂಗ್ ಲ್ಯಾಬ್ ಮಂಜೂರು ಮಾಡಿದೆ. ಈಗಾಗಲೇ 12 ಲಕ್ಷ ರೂ.ಬಿಡುಗಡೆ ಮಾಡಲಾಗಿದೆ. ಅದರಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕ ವಾತಾವರಣವನ್ನು ಕಲ್ಪಿಸಲಾ ಗಿದೆ.ವಿದ್ಯಾರ್ಥಿಗಳು ಈ ಅವಕಾಶವನ್ನು ಬಳಕೆಮಾಡಿಕೊಂಡು ವಿಜ್ಞಾನ ಮತ್ತುತಂತ್ರಜ್ಞಾನ ಕ್ಷೇತ್ರದಲ್ಲಿ ಬದಲಾವಣೆ ಮತ್ತು ಸಾಧನೆ ಮಾಡಬೇಕು ಎಂದರು.
ಹಿರಿಯ ಮುಖಂಡ ಎಂ.ವೆಂಕಟ ಮೂರ್ತಿ ಅಧ್ಯಕ್ಷತೆವಹಿ ಸಿ ದ್ದರು.ಕೋಚಿಮುಲ್ ನಿರ್ದೇಶಕ ಶ್ರೀನಿವಾಸ್‌ರಾಮಯ್ಯ, ಶಿಕ್ಷಣ ಸಂಸ್ಥೆ ಸಂಸ್ಥಾಪಕ ಟ್ರಸ್ಟಿಎಸ್.ನಾರಾಯಣ ಸ್ವಾಮಿ, ಟ್ರಸ್ಟಿ ಬಿ.ಎರಮೇಶ್, ಎಡು ಲೈಫ್ ಇಂಡಿಯಾಕಂಪನಿ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್‌ತ್ರಿಪಾಠಿ, ಟಿಂಕರಿಂಗ್ ಲ್ಯಾಬ್ ಮುಖ್ಯಶಿಕ್ಷಕ ಎನ್.ಪಂಚಮೂರ್ತಿ ಉಪಸ್ಥಿತರಿದ್ದರು.