Advertisement

ಟಿ20ಯಿಂದ ಹಿಂದೆ ಸರಿದ ನ್ಯೂಜಿಲ್ಯಾಂಡ್‌ ವೇಗಿ ಕೈಲ್‌ ಜಾಮೀಸನ್‌

10:41 PM Nov 17, 2021 | Team Udayavani |

ಜೈಪುರ : ಜೈಪುರ ಟಿ20 ಪಂದ್ಯ ಆರಂಭಕ್ಕೂ ಮುನ್ನ ನ್ಯೂಜಿಲ್ಯಾಂಡ್‌ ವೇಗಿ ಕೈಲ್‌ ಜಾಮೀಸನ್‌ ಸರಣಿಯಿಂದ ಹಿಂದೆ ಸರಿದರು. ಮುಂಬರುವ ಟೆಸ್ಟ್‌ ಸರಣಿಯತ್ತ ಹೆಚ್ಚಿನ ಗಮನಹರಿಸಲು ಜಾಮೀಸನ್‌ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಂಡದ ಕೋಚ್‌ ಗ್ಯಾರಿ ಸ್ಟೆಡ್‌ ಹೇಳಿದ್ದಾರೆ.

Advertisement

ಇದರೊಂದಿಗೆ ಭಾರತದ ವಿರುದ್ಧದ ಟಿ20 ಸರಣಿಯಿಂದ ಕಿವೀಸ್‌ನ ಇಬ್ಬರು ಪ್ರಮುಖ ಆಟಗಾರ ಹಿಂದೆ ಸರಿದಂತಾಯಿತು. ಮಂಗಳವಾರ ನಾಯಕ ಕೇನ್‌ ವಿಲಿಯಮ್ಸನ್‌ ಕೂಡ ಇಂಥದೇ ನಿರ್ಧಾರ ತೆಗೆದುಕೊಂಡಿದ್ದರು.

“ವಿಲಿಯಮ್ಸನ್‌ ಮತ್ತು ಜಾಮೀಸನ್‌ ಟಿ20 ಸರಣಿಯಲ್ಲಿ ಆಡುತ್ತಿಲ್ಲ. ಇಬ್ಬರೂ ಟೆಸ್ಟ್‌ ಪಂದ್ಯಗಳಿಗೆ ತಯಾರಿ ನಡೆಸಲಿದ್ದಾರೆ.

ಟೆಸ್ಟ್‌ ತಂಡದಲ್ಲಿರುವ ಇತರ ಕೆಲವು ಆಟಗಾರರು ಕೂಡ ಸಂಪೂರ್ಣ ಸರಣಿ ಆಡುವುದಿಲ್ಲ. 3 ನಗರಗಳಿಗೆ ಪ್ರಯಾಣ ಬೆಳೆಸಿ 5 ದಿನಗಳಲ್ಲಿ 3 ಟಿ20 ಪಂದ್ಯಗಳನ್ನು ಆಡುವ ಬದಲು ಪ್ರಮುಖ ಆಟಗಾರರು ತಮ್ಮನ್ನು ಟೆಸ್ಟ್‌ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ’ ಎಂದು ಗ್ಯಾರಿ ಸ್ಟೆಡ್‌ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next