ಉಡುಪಿ: ಗುಂಡಿಬೈಲು ನಿವಾಸಿ ಭಾಸ್ಕರ್ ಸೇರಿಗಾರ್ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿ ಸಾವಿರಾರು ರೂ. ವಂಚಿಸಿದ್ದಾನೆ.
Advertisement
ವ್ಯಕ್ತಿ ಕರೆ ಮಾಡಿ ತಾನು ಬ್ಯಾಂಕ್ ಅಧಿಕಾರಿಯಾಗಿದ್ದು, ನಿಮ್ಮ ಖಾತೆ ಕೆವೈಸಿ ಅಪ್‌ಡೇಟ್ ಮಾಡಬೇಕು. ಇಲ್ಲವಾದಲ್ಲಿ ಖಾತೆ ಬ್ಲಾಕ್ ಆಗುತ್ತದೆ ಎಂದು ನಂಬಿಸಿ ಆಧಾರ್, ಬ್ಯಾಂಕ್, ಎಟಿಎಂ, ಒಟಿಪಿ ವಿವರವನ್ನು ಪಡೆದುಕೊಂಡು ಹಂತ-ಹಂತವಾಗಿ 99 ಸಾವಿರ ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾಗಿ ಎಂದು ಸೆನ್ ಅಪರಾಧ ಠಾಣೆಯಲ್ಲಿ ಕೇಸು ದಾಖಲಾಗಿದೆ.