Advertisement

ಮಂಗನ ಕಾಯಿಲೆ ಮುಂಜಾಗ್ರತಾ ಕ್ರಮ ಅಗತ್ಯ: ಡಾ|ಪ್ರತಾಪ್‌ ಕುಮಾರ್‌

01:00 AM Jan 20, 2019 | Harsha Rao |

ತೆಕ್ಕಟ್ಟೆ: ಕುಂದಾಪುರ ಕಾರ್ಯನಿರ್ವಹಣಾಧಿಕಾರಿ ಮತ್ತು ಜಿಲ್ಲಾ ಕಾರ್ಯನಿರ್ವಾಹಣಾಧಿಕಾರಿ ಅವರ ಮಾರ್ಗದರ್ಶನದಂತೆ ಆರೋಗ್ಯ ಇಲಾಖೆ ಮತ್ತು ಗ್ರಾ.ಪಂ. ಕೊರ್ಗಿ ಅವರ ವತಿಯಿಂದ ಮಂಗನ ಕಾಯಿಲೆ ಹರಡದಂತೆ ಮಂಜಾಗ್ರತೆ ಮಾಹಿತಿ ಶಿಬಿರವು ಗ್ರಾ.ಪಂ. ಸಭಾಭವನದಲ್ಲಿ  ಜ. 17ರಂದು ನಡೆಯಿತು.

Advertisement

ಈ ಸಂದರ್ಭ ಕೊರ್ಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಕೆ. ಪ್ರತಾಪ್‌ ಕುಮಾರ್‌ ಮಾತನಾಡಿ, ಕೊರ್ಗಿ ಪರಿಸರದಲ್ಲಿ ಇದುವರೆಗೆ ಮಂಗನ ಕಾಯಿಲೆ ಪ್ರಕರಣಗಳು ಕಂಡು ಬಂದಿಲ್ಲ. ಆದರೂ ಕೊರ್ಗಿ ಸುತ್ತಮುತ್ತಲ ಗ್ರಾಮಗಳು ಅರಣ್ಯ ಪ್ರದೇಶಕ್ಕೆ ಹೊಂದಿ ಕೊಂಡಿರುವುದರಿಂದ ಮುಂಜಾಗ್ರತೆ ಮುಖ್ಯ ಎಂದು ಹೇಳಿದರು.

ಈ ಸಂದರ್ಭ ಕೊರ್ಗಿ ಗ್ರಾ.ಪಂ. ಅಧ್ಯಕ್ಷೆ ಗಂಗೆ ಕುಲಾಲ್ತಿ, ಉಪಾಧ್ಯಕ್ಷ ಗೌರೀಶ ಹೆಗ್ಡೆ , ತೋಟಗಾರಿಕಾ ಇಲಾಖೆಯ ಸಹಾಯಕ ಅಧಿಕಾರಿ ಮಧುಕರ್‌, ಗ್ರಾ.ಪಂ. ಸದಸ್ಯರು,  ಪ್ರವೀಣ, ಮೋಹನ ಚಂದ್ರ, ಶಿಲ್ಪಾ  ಉಪಸ್ಥಿತರಿದ್ದರು.

ಪಿಡಿಒ ಸುಧಾಕರ ಶೆಟ್ಟಿ ಗುಡ್ಡಮ್ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾ.ಪಂ. ಸಿಬಂದಿ ವರ್ಗ ಸಹಕರಿಸಿದರು. ಕಾರ್ಯದರ್ಶಿ ದಿನೇಶ ಶೆಟ್ಟಿ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next