Advertisement

ಕ್ಯಾಮೇನಹಳ್ಳಿ ಶ್ರೀಆಂಜನೇಯ ಸ್ವಾಮಿ ದನಗಳ ಜಾತ್ರೆ ನಡೆಯುವ ಬಗ್ಗೆ ಜನರಿಗೆ ಗೊಂದಲ…

07:41 PM Jan 17, 2023 | Team Udayavani |

ಕೊರಟಗೆರೆ: ಕರುನಾಡಿನ ಸುಪ್ರಸಿದ್ದ ಪುಣ್ಯಕ್ಷೇತ್ರ ಕ್ಯಾಮೇನಹಳ್ಳಿಯ ಶ್ರೀಆಂಜನೇಯ ಸ್ವಾಮಿಯ ಧನಗಳ ಜಾತ್ರೆ ರಾಸುಗಳ ಚರ್ಮ ಗಂಟು ರೋಗದಿಂದ ಜಾತ್ರೆ ಸೇರಲಿದೆಯೇ ಇಲ್ಲವೆ ರದ್ದುಗೊಳುತ್ತದೆಯೇ ಎಂಬ ಗೊಂದಲದಲ್ಲಿ ರೈತರು ಕಳೆದ 2-3 ದಿನಗಳಿಂದ ಎದುರು ನೋಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ವ್ಯಾಪ್ತಿಯ ಕಮನೀಯ ಕ್ಷೇತ್ರವೆಂದೇ ಪ್ರಸಿದ್ದಿ ಪಡೆದಿರುವ ಶ್ರೀಆಂಜನೇಯ ಸ್ವಾಮಿ ದನಗಳ ಜಾತ್ರಾ ಮಹೋತ್ಸವ ರಾಸುಗಳ ಚರ್ಮ ಗಂಟು ರೋಗ ಅಡ್ಡಿಯಾಗಿ ದನಗಳ ಜಾತ್ರೆಗೆ ರಾಜ್ಯ, ಹೊರ ರಾಜ್ಯ ಸೇರಿದಂತೆ ವಿವಿಧ ಮೂಲೆಗಳಿಂದ ರೈತರು ಹಾಗೂ ವ್ಯಾಪಾರಿಗಳು ದನ ಜಾತ್ರೆಗೆ ಬರಲು ನಿಖರ ಮಾಹಿತಿ ಸಿಗದೇ ಪರಿತಪಿಸುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಸಂಕ್ರಾಂತಿ ಹಬ್ಬದ ಮಾರನೇಯ ದಿನದಿಂದ ಪ್ರಾರಂಭವಾಗುವ ಕ್ಯಾಮೇನಹಳ್ಳಿ ದನಗಳ ಜಾತ್ರೆಗೆ ಈಗಾಗಲೇ ಸಾರ್ವಜನಿಕರು ನೂರಾರು ಜೋಡಿ ರಾಸುಗಳ ಕರೆತರಲು ಜಾಗಗಳನ್ನು ಗುರುತಿಸಿದ್ದು , ಇನ್ನೇನು ಜಾತ್ರೆ ಕೂಡಲಿದೆ ಎನ್ನುವ ಸಂದರ್ಭದಲ್ಲಿ ತಾಲೂಕಿನಲ್ಲಿ ಕೆಲವು ತಿಂಗಳುಗಳಿಂದ ಬಾದಿಸುತ್ತಿರುವ ಗಂಟು ರೋಗ ಬಾಧೆಯಿಂದ ಹಲವು ರಾಸುಗಳು ಸಾವಿಗೀಡಾಗಿದ್ದು, ಸಾಂಕ್ರಾಮಿಕ ರೋಗವಾದ ಕಾರಣ ರಾಜ್ಯ ಸೇರಿದಂತೆ ಹೊರ ರಾಜ್ಯದ ಮೂಲೆ ಮೂಲೆಗಳಿಂದ ರಾಸುಗಳು ಆಗಮಿಸಲಿದ್ದು, ಗಂಟು ರೋಗ ಹರಡುವ ಆತಂಕದಲ್ಲಿ ಪಶು ಇಲಾಖೆ ಹಾಗೂ ತಾಲೂಕು ಆಡಳಿತ ಯಾವುದೇ ಲಿಖಿತ ಹಾಗೂ ಮೌಖಿಕ ಹೇಳಿಕೆ ನೀಡದೆ ಮೌನ ವಹಿಸಿರುವುದು ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ದಿಕ್ಕು ಕಾಣದಂತಾಗಿದ್ದು, ತಹಸಿಲ್ದಾರ್ ನಾಹಿದಾ ಜಮ್ ಜಮ್ ರೈತರ ಹಾಗೂ ಜನಪರ ಕಾಳಜಿ ಹೊಂದಿರುವ ಅಧಿಕಾರಿಯಾಗಿದ್ದು, ಜನರ ಸಂಕಷ್ಟ ಅರಿತು ಗತವೈಭವದ ಇತಿಹಾಸ ಹೊಂದಿರುವ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿಯ ದನಗಳ ಜಾತ್ರೆ ನೆಡೆಯಲು ಅನುವು ಮಾಡಿಕೊಡಬೇಕು ಎಂದು ನೂರಾರು ರೈತರು ಒತ್ತಾಯಿಸಿದ್ದಾರೆ.

ರೈತರು ಹಾಗೂ ವ್ಯಾಪಾರಸ್ಥರು ಜಾತ್ರೆ ನಡೆಸಲು ಮನವಿ:

ಗತವೈಭವ ಮೆರೆದಂತ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ದನಗಳ ಜಾತ್ರೆ ಕಳೆದ 3 ವರ್ಷಗಳಿಂದ ಕೊರೋನಾದಿಂದ ಸ್ಥಗಿತಗೊಂಡು ಈಗ ಚರ್ಮಗಂಟು ರೋಗದಿಂದ ಅಡಚಣೆ ಯಾಗುತ್ತಿರುವುದು ವ್ಯಾಪಾರಸ್ಥರಿಗೆ ನಷ್ಟವಾಗಿರುವುದಲ್ಲದೆ ರೈತರಿಗೆ ವ್ಯವಸಾಯಕ್ಕೆ ಸಮರ್ಥವಾದ ರಾಸುಗಳಿಲ್ಲದೆ ಸಂಕಷ್ಟ ಅನುಭವಿಸುತಿದ್ದು, ದನಗಳ ಜಾತ್ರೆಗೆ ಅನುಮತಿ ಕೊಡ ಬೇಕು ಎಂಬುದು ದೊಡ್ಡ ವಾದವಾಗಿದೆ,

Advertisement

ಇದೇ ತಿಂಗಳ 28ಕ್ಕೆ ಬ್ರಹ್ಮರಥೋತ್ಸವ:
ಸುಪ್ರಸಿದ್ಧ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ದನಗಳ ಜಾತ್ರೆ ಯಾವುದೇ ಅಡಚಣೆಯಾದ್ರು ಬ್ರಹ್ಮರಥೋತ್ಸವ ಮಾತ್ರ ಇದೇ ತಿಂಗಳ 28ರ ಶನಿವಾರ ಮಾಮೂಲಿಯಂತೆ ಪ್ರತಿವರ್ಷ ಪೂಜಾ ವಿಧಾನಗಳ ರೀತಿಯಲ್ಲಿಯೇ ಬಹಳ ವಿಜೃಂಭಣೆಯಿಂದ ಬ್ರಹ್ಮರಥೋತ್ಸವ, ಅನ್ನ ಸಂತರ್ಪಣೆ, ದಾಸೋಹ ವ್ಯವಸ್ಥೆಯನ್ನು ನೆಡೆಸಲು ಸಕಲ ಸಿದ್ಧತೆ ನಡೆಸಲಾಗಿದೆ ಎನ್ನಲಾಗಿದೆ.

ದನಗಳ ಜಾತ್ರೆ ಕಲೆತಿದ್ದರೆ ರೈತರುಗಳಿಗೆ ತುಂಬಾ ಅನುಕೂಲವಾಗುತಿತ್ತು, ಸಾವಿರಾರು ರೂಪಾಯಿಗಳ ಎತ್ತುಗಳನ್ನು ಕಟ್ಟಿಕೊಂಡಿದ್ದೇವೆ ಮಾರಾಟ ಮಾಡಬೇಕು ತುಂಬಾ ತೊಂದರೆಯಾಗಿದೆ, ಮಕರ ಸಂಕ್ರಾಂತಿ ನಂತರ ರೈತರುಗಳು ಜಾತ್ರೆಗೆ ಬರುತ್ತಾರೆ ಅಂತ ನಾವು ಬಂದಿದ್ದೇವೆ, ಆದರೆ ಇಲ್ಲಿ ಇನ್ನೂ ಸೇರೋದಿಲ್ಲ, ದನದ ಜಾತ್ರೆ ಸೇರೋದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಆದರೆ ರೈತರ ಹಿತದೃಷ್ಟಿಯಿಂದ ದನದ ಜಾತ್ರೆ ನಡೆಯಬೇಕು
– ರಾಮಯ್ಯ ರೈತ, ಕಾಶಾಪುರ

ಕೊರಟಗೆರೆ ತಾಲ್ಲೂಕಿನ ಕಮನಿಯ ಕ್ಷೇತ್ರವಾದ
ಇತಿಹಾಸ ಪ್ರಸಿದ್ದ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ದನಗಳ ಜಾತ್ರಾ ಮಹೋತ್ಸವ ಐತಿಹಾಸಿಕವಾಗಿ ನಡೆಯಬೇಕಿದ್ದು, ಮೂರು ವರ್ಷಗಳಿಂದ ಕೊರೋನಾದಿಂದ ಸ್ಥಗಿತಗೊಂಡಿದ್ದ ದನಗಳ ಜಾತ್ರಾ ಮಹೋತ್ಸವ ಈಗ ಚರ್ಮ ರೋಗ ಭಾದೆಯಿಂದ ಮತ್ತೊಮ್ಮೆ ದನಗಳ ಜಾತ್ರೆಗೆ ಅಡಚಣೆಯಾಗುತ್ತಿದ್ದು, ಯಾವುದೇ ಕಾರಣಕ್ಕೂ ಜಾತ್ರೆ ನಿಲ್ಲದಂತೆ ಯಾವುದೇ ರೈತರಿಗೆ ಅನಾನುಕೂಲವಾಗದಂತೆ ನಡೆಯುವಂತಾಗಬೇಕು.
– ನಂಜುಂಡಯ್ಯ. ಸ್ಥಳೀಯ ಮುಖಂಡ.

ಕಳೆದ ಮೂರು ವರ್ಷಗಳಿಂದಲೂ ಕ್ಯಾಮೇನಹಲ್ಲಿ ಜಾತ್ರೆ ಮುಂದೊಡಲ್ಪಡುತ್ತಿದೆ. ವಿದುರಾಶ್ವತ ಜಾತ್ರೆಯಲ್ಲಿ ದನಗಳ ಜಾತ್ರೆ ನಡೆಯುತ್ತಿದೆ ಕೊರಟಗೆರೆಯಲ್ಲಿ ಯಾಕೆ ನಡೆಯುತ್ತಿಲ್ಲ ಇಲ್ಲೂ ನಡೆಯಬೇಕು, 50-60 ವರ್ಷಗಳಿಂದ ಎಂದೂ ದನಗಳ ಜಾತ್ರೆ ನಿಂತಿಲ್ಲ, ಈ ಬಾರಿಯೂ ದನಗಳ ಜಾತ್ರೆ ಹಾಗೂ ಬ್ರಹ್ಮ ರಥೋತ್ಸವಕ್ಕೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸಂಬಂಧ ಪಟ್ಟಂತವರು ನಿರ್ವಹಣೆ ಮಾಡಬೇಕು.
– ಶೇಖರಪ್ಪ, ಪುರಿ ಹಾಗೂ ಸ್ವೀಟ್ಸ್ ವ್ಯಾಪಾರಸ್ಥ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next