Advertisement

Kuvempu ವಿವಿ ವೆಬ್ ಸೈಟ್ ಹ್ಯಾಕ್; ‘ಸೇವ್ ಪ್ಯಾಲೆಸ್ಟೈನ್- ಇಸ್ರೇಲ್ ಡಾಗ್’ ಎಂದ ಹ್ಯಾಕರ್ಸ್

01:36 PM Dec 23, 2023 | keerthan |

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಅಧಿಕೃತ ವೆಬ್ ಸೈಟ್ ಹ್ಯಾಕ್ ಆಗಿದ್ದು, ಪ್ರೋ ಪ್ಯಾಲೆಸ್ಟೈನ್ ಗುಂಪು ಈ ಕುಕೃತ್ಯ ಮೆರೆದಿದೆ.

Advertisement

ಬುಧವಾರ ರಾತ್ರಿ ವೇಳೆಗೆ ವಿವಿ ವೆಬ್ ಸೈಟ್ ಹ್ಯಾಕ್ ಮಾಡಲಾಗಿದೆ. ಕಲೀಮಲ್ಯಾಂಗ್ ಬ್ಲಾಕ್ ಹ್ಯಾಟ್ ಟೀಂ ವೆಬ್ ಸೈಟ್ ಹ್ಯಾಕ್ ಮಾಡಿದ್ದು,  ಸೇವ್ ಪ್ಯಾಲೆಸ್ಟೈನ್- ಇಸ್ರೇಲ್ ಡಾಗ್ ಎಂದು ವೆಬ್ಸೈಟ್ ನಲ್ಲಿ ಉಲ್ಲೇಖಿಸಲಾಗಿದೆ.

ಹ್ಯಾಕ್ ವಿಚಾರ ತಿಳಿದ ಬಳಿಕ ವಿವಿ ಟೆಕ್ನಿಕಲ್ ಟೀಂ ವೆಬ್ಸೈಟ್ ಸ್ಥಗಿತಗೊಳಿಸಿದೆ. ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಲು ವಿವಿ ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next