ಕುಷ್ಟಗಿ: ಕುಷ್ಟಗಿ ತಾಲೂಕಿನ ಸರಕಾರಿ ಪ್ರೌಢಶಾಲೆ ಜಹಗೀರಗುಡದೂರ ನಲ್ಲಿ ಕುವೆಂಪು 117 ನೇ ಜನ್ಮ ದಿನಾಚರಣೆ ಅಂಗವಾಗಿ ವಿಶ್ವಮಾನವ ದಿನಾಚರಣೆಯನ್ನು ಶ್ರೀ ಸಂಗನಗೌಡ ಪಾಟೀಲ ಗುರುಗಳು ಕಾವ್ಯ ವಾಚನಮಾಡುವುದರ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಿವಪ್ಪ ಇಲಾಳ ಅವರು ಮಕ್ಕಳಿಗೆ ಕುವೆಂಪು ಅಚ್ಚುಮೆಚ್ಚಿನ ಕವಿ. ಅವರ ಶಿಶು ಸಾಹಿತ್ಯ ಮಕ್ಕಳಿಗೆ ಸರಳವಾಗಿ ಅರ್ಥವಾಗುತ್ತದೆ. ಬೊಮ್ಮನಹಳ್ಳಿ ಕಿಂದರಿ ಜೋಗಿಯ ಪುಸ್ತಕ ಎಲ್ಲರಿಗೂ ಓದಿಸಿಕೊಂಡು ಹೋಗುತ್ತದೆ ಎಂದು ತಿಳಿಸಿದರು.
ರಂಗಶಿಕ್ಷಕರಾದ ಗುರುರಾಜ ಅವರ ಮಾರ್ಗದರ್ಶನದಲ್ಲಿ ಕುವೆಂಪು ಬದುಕು – ಬರಹ ಕುರಿತು ವಾಚನವನ್ನು ಮಕ್ಕಳಿಂದ ಮಾಡಿಸಲಾಯಿತು.
ಮಕ್ಕಳಿಂದ ಕುವೆಂಪು ಅವರ ಬದುಕು – ಬರಹಗಳನ್ನು ಕುರಿತು ಅವರ ಕಾವ್ಯ, ನಾಟಕ, ಆತ್ಮಚರಿತ್ರೆ ಹಾಗೂ ಕುವೆಂಪು ಅವರ ಬಗ್ಗೆ ಇತರರು ಹಂಚಿಕೊಂಡ ಮಾತುಗಳನ್ನು ವಾಚಿಸುವ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಸಂಗನಗೌಡ ಪಾಟೀಲರು, ಶಿವಪ್ಪ ಇಲಾಳ, ಜಗದೀಶ ಬಾಸಿಂಗದ, ಬಸಪ್ಪ ಹಿರೇಮನಿ, ಶರಣಪ್ಪ ರಾಂಪೂರ, ರಮೇಶ ಚೌವ್ಹಣ, ಈರಮ್ಮ ಕೃಷ್ಟಪ್ಪನವರ, ಹುಲ್ಲಪ್ಪ ಮುಡಿಯಪ್ಪನವರ ಹಾಗೂ ರಂಗ ಶಿಕ್ಷಕರಾದ ಗುರುರಾಜ ಇದ್ದರು.