ಶಿರ್ವ: ಕುತ್ಯಾರು ಶಾಲೆಯೊಂದರ ಬಸ್‌ನಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ಕುತ್ಯಾರು ಬ್ಯಾಂಕ್ ಆಫ್ ಬರೋಡಾ ಶಾಖೆಯ ಬಳಿಯ ಬಾಡಿಗೆ ಮನೆ ನಿವಾಸಿ ಶೈಲೇಶ್ ಕೆ. ಪ್ರಭು (44) ಮಾ. 27ರ ಬೆಳಗ್ಗಿನಿಂದ ನಾಪತ್ತೆಯಾಗಿದ್ದಾರೆ.
ಕುತ್ಯಾರಿನಲ್ಲಿ ತಿಂಗಳ ಹಿಂದೆ ಖರೀದಿಸಿದ ರಿಕ್ಷಾದಲ್ಲಿ ಚಾಲಕನಾಗಿ ಕೂಡ ದುಡಿಯುತ್ತಿದ್ದು, ಮಾ. 27ರಂದು ಬೆಳಗ್ಗೆ 9.30ರ ವೇಳೆಗೆ ಬಾಡಿಗೆಗೆ ಹೋದವರು ಮಧ್ಯಾಹ್ನ ಊಟಕ್ಕೆ ಬಾರದೆ ಇದ್ದಾಗ ಪತ್ನಿ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಅವರು ಬರೋಡಾ ಬ್ಯಾಂಕ್‌ನ ಸಿಬಂದಿಗೆ ಊಟ ಕೊಟ್ಟು ಬರುತ್ತೇನೆ ಎಂದು ಹೇಳಿದವರು ವಾಪಸ್ ಮನೆಗೆ ಬಾರದೆ ಕರೆ ಮಾಡಿದರೂ ಸ್ವೀಕರಿಸದೆ ನಾಪತ್ತೆಯಾಗಿದ್ದಾರೆ. ಮಾ. 28ರಂದು ಬೆಳಗ್ಗೆ 10ರ ವರೆಗೆ ಮೊಬೈಲ್ ರಿಂಗ್ ಆಗುತ್ತಿದ್ದು,ಬಳಿಕ ಸ್ವಿಚ್‌ಆಫ್ ಆಗಿದೆ.
ಸಂಬಂಧಿಕರೆಲ್ಲರಿಗೆ ಕರೆ ಮಾಡಿ ವಿಚಾರಿಸಿದ್ದು, ಮಾಹಿತಿ ಸಿಗದೆ ಇದ್ದು, ಪತ್ನಿ ಅಂಬಿಕಾ ಪ್ರಭು ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಧಮ್ಕಿ ಹಾಕುವ ತಾಲಿಬಾನ್ ಮಾದರಿ ಈ ರಾಜ್ಯದಲ್ಲಿ ನಡೆಯಲ್ಲ: SDPI ವಿರುದ್ಧ ಸಿ.ಟಿ ರವಿ ಕಿಡಿ